ಜಗಳೂರು: ರಾಜಕಾಲುವೆ ಮೂಲಕ ಪಟ್ಟಣದ ಕೆರೆಗೆ ಹರಿಯುತ್ತಿರುವ ಕೊಳಚೆ ನೀರನ್ನು ಪಟ್ಟಣದ ಹೊರವಲಯದ ಶುದ್ಧೀಕರಣ ಘಟಕಗಳಿಗೆ ಹರಿಸುವ ಕುರಿತು ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ ಅವರು ಗುರುವಾರ ಸ್ಥಳಪರಿಶೀಲನೆ ನಡೆಸಿದರು.

ಪಟ್ಟಣದ ಕೆರೆಗೆ ರಾಮಾಲಯ ರಸ್ತೆ, ತುಮಾಟಿ ಲೇಔಟ್, ರಾಜಕಾಲುವೆ ಸೇರಿದಂತೆ ವಿವಿಧೆಡೆಯಿಂದ ಹರಿದು ಬರುವ ಕೊಳಚೆನೀರು ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಿಯಾಯೋಜನೆ ರೂಪಿಸಲು ಸೂಚಿಸಿದರು.

ಕೊಳಚೆ ನೀರನ್ನು ಶುದ್ಧೀಕರಣ ಮಾಡಲು ಮೂರು ಸ್ಥಳಗಳಲ್ಲಿ ಜಮೀನು ಆಯ್ಕೆ ಮಾಡಬೇಕು. ಅಲ್ಲಿ ವೆಟ್ವೆಲ್ ನಿರ್ಮಿಸಿ ಶೇಖರಣಾ ಪಂಪ್ನೊಂದಿಗೆ ಶುದ್ಧೀಕರಿಸಿ ನಂತರ ಪೈಪ್ಲೈನ್ ಮೂಲಕ ಹೊರವಲಯದಲ್ಲಿ ಗುರುತಿಸಲಾಗಿರುವ ಶುದ್ಧೀಕರಣ ಘಟಕಕ್ಕೆ ವಿಲೇವಾರಿ ಮಾಡಬೇಕು. ಕೂಡಲೇ ಡಿಪಿಆರ್ ತಯಾರಿಸಿ ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂದು ಸೂಚನೆ ನೀಡಿದರು.

ಪಟ್ಟಣದ ಹೊರಹೊಲಯದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಅವರು, ಹಸಿಕಸ, ಒಣಕಸ ವಿಲೆವಾರಿ ಸಂಗ್ರಹಣಾ ಘಟಕವನ್ನು ಪರಿಶೀಲಿಸಿದರು. ಹಸಿ ಕಸದಲ್ಲಿ ಪ್ಲಾಸ್ಟಿಕ್ ಹಾನಿಕಾರಕ ವಿಷಪೂರಿತ ವಸ್ತುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದನ್ನು ಕಂಡು ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಕಸವನ್ನು ಸಮರ್ಪಕವಾಗಿ ಗೊಬ್ಬರವನ್ನಾಗಿ ಪರಿವರ್ತಿಸಬೇಕು. ಕಸ ನಿರ್ವಹಣೆ ಮಂದಗತಿಯಲ್ಲಿ ಸಾಗುತ್ತಿದೆ. ವೇಗವಾಗಿ ಹಸಿಕಸ ಒಣಕಸ ವಿಂಗಡಿಸಬೇಕು’ ಎಂದು ತಾಕೀತು ಮಾಡಿದರು.

ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಅವರು ಪ್ರತಿಕ್ರಿಯಿಸಿ, ‘ನಿರಂತರ ವಿದ್ಯುತ್ ಸಮಸ್ಯೆಯಿಂದ ಕಸವನ್ನು ಗೊಬ್ಬರವನ್ನಾಗಿಸಲು ವಿಳಂಬವಾಗುತ್ತಿದೆ. ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದು ಸಮರ್ಪಕ ವಿದ್ಯುತ್ ಪೂರೈಕೆಯಿಂದ ಸಕಾಲದಲ್ಲಿ ಗೊಬ್ಬರವನ್ನಾಗಿ ಪರಿವರ್ತಿಸಲಾಗುವುದು. ಘನತ್ಯಾಜ್ಯ ವಿಲೆವಾರಿ, ನಿರ್ವಹಣೆ ಕುರಿತು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು’ ಎಂದು ಸ್ಪಷ್ಟನೆ ನೀಡಿದರು.

‘ಪಟ್ಟಣದಲ್ಲಿ ಸಂಗ್ರಹವಾಗುವ ಒಣಕಸ, ಹಸಿಕಸವನ್ನು ವಾಹನದಲ್ಲೇ ಪೌರಕಾರ್ಮಿಕರು ವಿಂಗಡಿಸಬೇಕು. ಕೊಳಚೆನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಸರ್ಕಾರದಿಂದ ₹2 ಕೋಟಿ ಹಂಚಿಕೆಯಾಗಿದ್ದು. ಅದು ಸಾಲುತ್ತಿಲ್ಲ. ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು.

ಕಂದಾಯ ನಿರೀಕ್ಷಕ ನಾಯಕ್,ಆರೋಗ್ಯ ನಿರೀಕ್ಷಕ ಪ್ರಶಾಂತ್ ಕುಮಾರ್, ಎಂಜಿನಿಯರ್ ಸಲೀಂ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-43-403792197

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.