ಜಗಳೂರು: ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನವು ಶೋಷಿತ ಸಮುದಾಯಗಳ ಪಾಲಿಗೆ ದೊಡ್ಡ ಶಕ್ತಿಯನ್ನು ತುಂಬಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬುದ್ಧ ಪೂರ್ಣಿಮೆ, ಕಾರ್ಮಿಕ ದಿನಾಚರಣೆ ಹಾಗೂ ಪ್ರೊ.ಎಚ್. ಲಿಂಗಪ್ಪ ಅವರುಬಿ.ಆರ್.ಅಂಬೇಡ್ಕರ್ ಕುರಿತು ರಚಿಸಿರುವ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

‘ಅತ್ಯಂತ ಬಡ ಕುಟುಂಬದ ನಾನು ಶಾಸಕನಾಗಿ ವಿಧಾನಸಭೆ ಪ್ರವೇಶಿಸುವಲ್ಲಿ ಹಾಗೂ ನನ್ನ ಪುತ್ರ ಐಎಎಸ್ ಅಧಿಕಾರಿಯಾಗುವಲ್ಲಿ ಸಂವಿಧಾನದ ಪಾತ್ರ ಮುಖ್ಯವಾಗಿದೆ. ಪ್ರೊ.ಲಿಂಗಪ್ಪ ಅವರ ‘ಅಂಬೇಡ್ಕರ್ ಚಿಂತನೆಯಲ್ಲಿ ಆಧ್ಯಾತ್ಮಧಾರೆ’, ‘ಭಾರತೀಯ ಸಮಾಜ ಮತ್ತು ಅಂಬೇಡ್ಕರ್’, ‘ಅಂಬೇಡ್ಕರ್ ಜೀವನಯಾನ’ ಎಂಬ ಮೂರು ಪುಸ್ತಕಗಳನ್ನು ನಾನೇ ಮುದ್ರಿಸಿ ಬಿಡುಗಡೆ ಮಾಡುವ ಸೌಭಾಗ್ಯ ಸಿಕ್ಕಿರುವುದು ಸಂತಸದ ಸಂಗತಿ’ ಎಂದರು.

ಬೇಡ ಮತ್ತು ಮ್ಯಾಸನಾಯಕ ಹಾಗೂ ಕಾಡುಗೊಲ್ಲ ಬುಡಕಟ್ಟು ಸಂಸ್ಕೃತಿ ದಟ್ಟವಾಗಿರುವ ಜಗಳೂರು ಭಾಗದಲ್ಲಿ ಹುಟ್ಟಿ ಬೆಳೆದ ಪ್ರೊ.ಲಿಂಗಪ್ಪ ಅವರು 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಸಮಾಜದಲ್ಲಿ ಜಾಗೃತಿ ಮೂಡಿಸು ತ್ತಿದ್ದಾರೆ ಎಂದು ಜಾನಪದ ವಿದ್ವಾಂಸ ಮೀರಾಸಾಬಿಹಳ್ಳಿ ಶಿವಣ್ಣ ಹೇಳಿದರು.

ಸಾಹಿತಿ ಶಿವಲಿಂಗಪ್ಪ, ಎಂ.ಜಿ.ರಂಗಸ್ವಾಮಿ, ಎನ್.ಟಿ.ಎರ್ರಿಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಕಸಾಪ ಅಧ್ಯಕ್ಷೆ ಸುಜಾತಮ್ಮ, ರಾಜೇಶ್ವರಿ ಪೂಜಾರ್, ನೌಕರರ ಸಂಘದ ಅಧ್ಯಕ್ಷ ಎ.ಎಲ್.ತಿಪ್ಪೇಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಮರೇನಹಳ್ಳಿ ಟಿ.ಬಸವರಾಜ್, ಕೃಷ್ಣಮೂರ್ತಿ, ಬಿ.ಮಹೇಶ್ವರಪ್ಪ, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ತೋರಣಗಟ್ಟೆ ತಿಪ್ಪೇಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ನಾಗಲಿಂಗಪ್ಪ, ಸತೀಶ್, ಓಮಣ್ಣ, ಶೇಖರಪ್ಪ, ಕುಬೇಂದ್ರಪ್ಪ, ಶಂಭುಲಿಂಗಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-43-1442838300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.