ಶುಕ್ರವಾರ, ಆಗಸ್ಟ್ 12, 2022
27 °C

ದಾವಣಗೆರೆ: ಆಭರಣ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಹರಿಹರ ತಾಲ್ಲೂಕಿನ ಅಮರಾವತಿಯ ಪ್ರಭುಗೌಡ ಅವರ ಮನೆಯಲ್ಲಿ ಆಗಸ್ಟ್ 21ರಂದು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಮೂವರನ್ನು ಬಂಧಿಸಿ ₹1ಲಕ್ಷ ಮೌಲ್ಯದ ವಡವೆಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದ ಹೊನ್ನೂರ್ ಸಾಬ್, ಸುಭಾನ್ ಸಾಬ್ ಹಾಗೂ ಸಂತೋಷ ಬಂಧಿತರು. 

ಮಂಗಳವಾರ ಬೆಳಿಗ್ಗೆ ಹರಿಹರ ಬೈಪಾಸ್ ಬಳಿ ಗಸ್ತಿನಲ್ಲಿದ್ದ ಪೊಲೀಸರು ಈ ಮೂವರನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಆರೋಪಿಗಳಿಂದ 17 ಗ್ರಾಂ ಬಂಗಾರದ ಆಭರಣ, 3 ಬೆಳ್ಳಿಯ ಬ್ರಾಸ್‌ಲೆಟ್, ಒಂದು ದೇವಸ್ಥಾನದ ಗಂಟೆ, ಬೆಳ್ಳಿ ಕರಡಿಗೆ ಹಾಗೂ ₹3770 ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಡಿಎಸ್ಪಿ ರಾಜೀವ್, ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಅವರ ಮಾರ್ಗದರ್ಶನದಲ್ಲಿ ಹರಿಹರ ಸಿಪಿಐ ಎಂ.ಶಿವಪ್ರಸಾದ್ ನೇತೃತ್ವದಲ್ಲಿ ಗ್ರಾಮಾಂತರ ಠಾಣಾ ಸಿಪಿಐ ಎಂ.ಶಿವಪ್ರಸಾದ್, ಪಿಎಸ್‌ಐ ರವಿಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ಪತ್ತೆ ಕಾರ್ಯದಲ್ಲಿ ‌ಮಹ್ಮದ್ ಸೈಫುದ್ದೀನ್, ಯಾಸೀನುಲ್ಲಾ, ರವಿ, ವೆಂಕಟೇಶ, ದ್ವಾರಕೀಶ ಹಾಗೂ ಸತೀಶ ಅವರಿಗೆ ಎಸ್‌ಪಿಯವರು ಬಹುಮಾನ ಘೋಷಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು