ಸೋಮವಾರ, ಮೇ 16, 2022
21 °C

ದಾವಣಗೆರೆ ಮಾರುಕಟ್ಟೆಗೆ ಜೆಎಸ್‌ಡಬ್ಲ್ಯು ಸ್ಲ್ಯಾಗ್‌ ಮರಳು ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಭಾರತದ ಪ್ರಮುಖ ಹಸಿರು ಸಿಮೆಂಟ್‌ ಕಂಪನಿಯಾದ ಜೆ.ಎಸ್‌.ಡಬ್ಲ್ಯು ಸಿಮೆಂಟ್‌ ಕಂಪನಿಯು ‘ಸ್ಲ್ಯಾಗ್‌ ಮರಳು’ ಚೀಲವನ್ನು ದಾವಣಗೆರೆ ಮಾರುಕಟ್ಟೆಗೆ ಶುಕ್ರವಾರ ಬಿಡುಗಡೆ ಮಾಡಿತು.

ಅಪೂರ್ವ ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸ್ಮಾರ್ಟ್‌ ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಅವರು ‘ಸ್ಲ್ಯಾಗ್‌ ಮರಳು’ ಚೀಲವನ್ನು ಅನಾವರಣಗೊಳಿಸಿದರು.

ಜೆ.ಎಸ್‌.ಡಬ್ಲ್ಯು ಸಿಮೆಂಟ್‌ ಕಂಪನಿಯ ನೇರ ಮಾರಾಟ ವಿಭಾಗದ ಸಹ ಉಪಾಧ್ಯಕ್ಷ ಡಾ.ಎಲ್‌.ಆರ್‌. ಮಂಜುನಾಥ್‌ ಅವರು ಡೀಲರ್‌ಗಳು, ಸಿವಿಲ್‌ ಎಂಜಿನಿಯರ್‌ಗಳಿಗೆ ಈ ಉತ್ಪನ್ನದ ವಿಶೇಷತೆಗಳನ್ನು ಪರಿಚಯಿಸಿಕೊಟ್ಟರು.

‘ವರ್ಷದಲ್ಲಿ ನಾಲ್ಕು ತಿಂಗಳು ಮಾತ್ರ ನದಿಯಿಂದ ಮರಳು ತೆಗೆಯಲು ಸಾಧ್ಯವಾಗುವುದಿಂದ ಮರಳಿನ ಕೊರತೆ ಎದುರಾಗಿದೆ. ನದಿ ಮರಳಿನಲ್ಲಿ ಶೇ 2ರಿಂದ 5ರವರೆಗೆ ವೇಸ್ಟೇಜ್‌ ಬರಲಿದೆ. ಮರಳಿಗೆ ಪರ್ಯಾಯವಾಗಿ ಬಳಸುತ್ತಿರುವ ಕಲ್ಲಿನ ಪುಡಿಗಳ (ಎಂ. ಸ್ಯಾಂಡ್‌) ಗಾತ್ರದಲ್ಲಿ ವ್ಯತ್ಯಾಸ ಇರುತ್ತದೆ. ಇದರಿಂದ ನಿರ್ಮಿಸಿದ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿವೆ. ಜೊತೆಗೆ ಎಂ.ಸ್ಯಾಂಡ್‌ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಹೀಗಾಗಿ ನಮ್ಮ ಕಂಪನಿಯು ಸಂಶೋಧನೆ ನಡೆಸಿ, ಸ್ಟೀಲ್‌ ಉತ್ಪಾದನೆ ವೇಳೆ ಲಭಿಸುತ್ತಿದ್ದ ಸ್ಲ್ಯಾಗ್‌ ಅನ್ನು ಪರಿಸರ ಸ್ನೇಹಿ ಮರಳಾಗಿ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಿದೆ. ಇದರ ಗುಣಮಟ್ಟಕ್ಕೆ ಐಐಎಸ್‌ಸಿ ಸಹ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದು ಡಾ. ಮಂಜುನಾಥ್‌ ತಿಳಿಸಿದರು.

‘ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮರಳು ಸಿಗಬೇಕು ಎಂಬ ಉದ್ದೇಶದಿಂದ ಸ್ಲ್ಯಾಗ್‌ ಮರಳನ್ನು 50 ಕೆ.ಜಿ. (₹ 160) ಚೀಲದಲ್ಲಿ ಮಾರಾಟ ಮಾಡುತ್ತಿದ್ದೇವೆ. ರಿಟೇಲ್‌ ಹಾಗೂ ಹೋಲ್‌ಸೇಲ್‌ ದರಲ್ಲಿ ಶುದ್ಧೀಕರಿಸಿದ ಸ್ಲ್ಯಾಗ್‌ ಮರಳನ್ನು ದಾವಣಗೆರೆ ಮಾರುಕಟ್ಟೆಗೆ ಪೂರೈಸುತ್ತೇವೆ’ ಎಂದು ಅವರು ಹೇಳಿದರು.

ಹಿರಿಯ ಎಂಜಿನಿಯರ್‌ ಎನ್‌. ರೇವಣಸಿದ್ದಪ್ಪ, ಎ.ಸಿ.ಸಿ.ಇ.(ಐ) ದಾವಣಗೆರೆ ಶಾಖೆ ಅಧ್ಯಕ್ಷ ಜಿ.ಎಂ. ಲೋಹಿತಾಶ್ವ, ಇ.ದೇವೇಂದ್ರಪ್ಪ ಅವರೂ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು