ಕಡರನಾಯ್ಕನಹಳ್ಳಿ: ಗ್ರಾಮದಲ್ಲಿ ರಾಮನವಮಿ ಮತ್ತು ಸೀತಾರಾಮ ಕಲ್ಯಾಣ ಮಹೋತ್ಸವ ಮಾರ್ಚ್ 27ರಂದು ನಡೆಯಲಿದೆ.

ಬೆಳಿಗ್ಗೆ ರಾಮ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜಾಲಂಕಾರ ಸೇವೆ ನಡೆಯಲಿದೆ. ಮಧ್ಯಾಹ್ನ ಸೀತಾರಾಮ ಕಲ್ಯಾಣ ಮಹೋತ್ಸವದ ನಂತರ ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಗುತ್ತದೆ.

ಸಂಜೆಯಿಂದ ಅನ್ನಸಂತರ್ಪಣೆ ಇರುತ್ತದೆ ಎಂದು ಶ್ರೀ ರಾಮ ದೇವಸ್ಥಾನ ಟ್ರಸ್ಟ್ ಸಮಿತಿಯವರು ತಿಳಿಸಿದ್ದಾರೆ. ಗುರುವಾರ ಶ್ರೀ ರಾಮ ದೇವಸ್ಥಾನದಲ್ಲಿ ಅಷ್ಟೋತ್ತರ ಶತನಾಮಾವಳಿ ಪೂಜೆ ನಡೆಯಿತು. ದೇವಸ್ಥಾನ, ಮುಖ್ಯ ಬೀದಿಗಳಲ್ಲಿ ವಿದ್ಯುತ್ ಅಲಂಕಾರ ಮಾಡಿ ರಾಮನವಮಿಗೆ ಸಜ್ಜುಗೊಳಿಸಲಾಗಿದೆ.

ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಇಂದಿನಿಂದ

ರಾಮೇಶ್ವರ (ನ್ಯಾಮತಿ): ಗ್ರಾಮದ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ಹಾಗೂ ಕುಮಾರಸ್ವಾಮಿ ಭೂತಪ್ಪಸ್ವಾಮಿಯ ಮಣೆವು ಕಾರ್ಯಕ್ರಮಗಳಿಗೆ ಮಾರ್ಚ್ 27ರಂದು ಚಾಲನೆ ನೀಡಲಾಗುವುದು.

27ರಂದು ರಾತ್ರಿ 10 ಗಂಟೆಗೆ ಕಂಕಣ ಧಾರಣೆ, 28ರಂದು ಬೆಳಿಗ್ಗೆ 11ಕ್ಕೆ ಆಚರಣೆ ಹಾಗೂ ರಾತ್ರಿ 8 ಗಂಟೆಗೆ ಪ್ರಸಾದ ವಿನಿಯೋಗವಿರುತ್ತದೆ.

29ರಂದು ಮಲ್ಲಿಕಾರ್ಜುನ ಸ್ವಾಮಿಯ ಹೂವಿನ ರಥೋತ್ಸವ, 30ರಂದು ಮುಂಜಾನೆ 6 ಗಂಟೆಗೆ ಮಲ್ಲಿಕಾರ್ಜುನಸ್ವಾಮಿ ವಿವಾಹ ಮಹೋತ್ಸವ, 6.30ಕ್ಕೆ ಮಹಾ ರಥೋತ್ಸವ, ಮಧ್ಯಾಹ್ನ 3 ಗಂಟೆಗೆ ಶ್ರೀಕುಮಾರ ರಾಮಸ್ವಾಮಿ, ಭೂತಪ್ಪಸ್ವಾಮಿಯ ಮಣೆವು, ಸಂಜೆ ಓಕಳಿ ಕಾರ್ಯಕ್ರಮದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.

ಸಂತೇಬೆನ್ನೂರು: ಇಲ್ಲಿನ ಐತಿಹಾಸಿಕ ಶ್ರೀರಾಮಚಂದ್ರ ದೇವರ ರಥೋತ್ಸವ ಮಾರ್ಚ್ 27ರಂದು ನೆರವೇರಲಿದೆ.

ಮಾರ್ಚ್ 26ರಂದು ಕಲ್ಯಾಣೋತ್ಸವ, 28ರಂದು ಅವಬೃತ ನಡೆಯಲಿದೆ. ರಥೋತ್ಸವದ ಅಂಗವಾಗಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.

ಹೊಸ ಕುಂದುವಾಡ: 28, 29ಕ್ಕೆ ಟಗರು ಕಾಳಗ

ದಾವಣಗೆರೆ: ತಾಲ್ಲೂಕಿನ ಹೊಸ ಕುಂದುವಾಡ ಗ್ರಾಮದಲ್ಲಿ ಏಪ್ರಿಲ್ 7ರಿಂದ 18ರವರೆಗೆ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಮಾರ್ಚ್ 28 ಹಾಗೂ 29ರಂದು ರಾಜ್ಯಮಟ್ಟದ ಟಗರು ಕಾಳಗ ಆಯೋಜಿಸಲಾಗಿದೆ.

ಗ್ರಾಮಸ್ಥ ರಾಘವೇಂದ್ರ ಬಿ.ಪಿ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮರಿಕುರಿ, 2, 4, 6 ಹಾಗೂ 8 ಹಲ್ಲಿನ ಟಗರು ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಟಗರು ಕಾಳಗ ಆಯೋಜಿಸಲಾಗುತ್ತಿದೆ. ಸ್ಥಳದಲ್ಲೇ ನೋಂದಣಿಗೆ ಅವಕಾಶವಿದೆ. ರಾಜ್ಯದ ಹೆಸರಾಂತ ಟಗರುಗಳು ಪಾಲ್ಗೊಳ್ಳಲಿವೆ. ₹15,000ದಿಂದ ₹80,000ದವರೆಗೆ ಬಹುಮಾನ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ವೀರಭದ್ರೇಶ್ವರ ಸ್ವಾಮಿ ರಥೋತ್ಸವ ನಾಳೆಯಿಂದ

ಸಾಸ್ವೆಹಳ್ಳಿ: ಸಮೀಪದ ಕ್ಯಾಸಿನಕೆರೆಯಲ್ಲಿ ಮಾರ್ಚ್ 28ರಿಂದ ಏಪ್ರಿಲ್ 1ರವರೆಗೆ ವೀರಭದ್ರೇಶ್ವರ ಸ್ವಾಮಿಯ ಕೆಂಡದಾರ್ಚನೆ ಹಾಗೂ ರಥೋತ್ಸವ ಕಾರ್ಯಕ್ರಮಗಳು ನಡೆಯಲಿವೆ.

ಮಾರ್ಚ್ 28ರಂದು ಕಂಕಣಧಾರಣೆ ಮಹೋತ್ಸವ ಹಾಗೂ ರಥದ ಗಡ್ಡೆ ಹೊರತೆಗೆಯುವ ಮೂಲಕ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ದೊರೆಯಲಿದೆ. 29ರಂದು ಬೆಳಿಗ್ಗೆ ಉಚ್ಚಾಯ ಹಾಗೂ ಸಾಯಂಕಾಲ ಅರಿಶಿಣ, ಎಣ್ಣೆ ಕೊಡುವ ಕಾರ್ಯಕ್ರಮ ನಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-43-296852930

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.