ದಾವಣಗೆರೆ: ಭಾರತದ ಹೆಸರಾಂತ ಎಥ್ನಿಕ್ ವೇರ್ ರೀಟೇಲರ್ ಸಾಯಿ ಸಿಲ್ಕ್ಸ್ ಕಳಾಮಂದಿರ್ ಲಿಮಿಟೆಡ್ನ (ಎಸ್ಎಸ್ಕೆಎಲ್) ದಾವಣಗೆರೆಯ ನೂತನ ಮಳಿಗೆಯನ್ನು ‘ಕಾಂತಾರ’ ಖ್ಯಾತಿಯ ನಟಿ ಸಪ್ತಮಿ ಗೌಡ ಶುಕ್ರವಾರ ಉದ್ಘಾಟಿಸಿದರು.

ನಗರದ ಡೆಂಟಲ್ ಕಾಲೇಜು ಮುಖ್ಯರಸ್ತೆಯಲ್ಲಿರುವ ಮಳಿಗೆಯು ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆ ಅಗತ್ಯವಿರುವ ವೈವಿಧ್ಯಮಯ ಫ್ಯಾಷನ್ ಉಡುಪುಗಳ ಸಮಗ್ರ ಶಾಪಿಂಗ್ ತಾಣವಾಗಿ ರೂಪುಗೊಂಡಿದೆ. ಕರ್ನಾಟಕದಲ್ಲಿ ಇದು ಕಳಾಮಂದಿರ್ನ 82ನೇ ಮಳಿಗೆಯಾಗಿದೆ.

20 ವರ್ಷಗಳ ಯಶಸ್ವಿ ರಿಟೇಲ್ ವ್ಯಾಪಾರ ಪಯಣವನ್ನು ಪೂರೈಸಿರುವ ಕಳಾಮಂದಿರ್, ಗುಣಮಟ್ಟ, ಅಪರಿಮಿತ ಸಂಗ್ರಹಣೆ ಮತ್ತು ಗ್ರಾಹಕ ಸ್ನೇಹಿ ದರದ ಮೂಲಕ ದಕ್ಷಿಣ ಭಾರತದಲ್ಲಿ ಖ್ಯಾತಿ ಗಳಿಸಿದೆ. ದಾವಣಗೆರೆಯ ಹೊಸ ಶೋರೂಮ್ನಲ್ಲಿ ಸಿಲ್ಕ್ ಸೀರೆಗಳು, ಫ್ಯಾನ್ಸಿ ಸೀರೆಗಳು, ರೆಡಿಮೇಡ್ ಉಡುಪುಗಳು, ಪುರುಷರ ಉಡುಪುಗಳು ಹಾಗೂ ಮಕ್ಕಳ ಉಡುಪುಗಳ ವಿಶೇಷ ಸಂಗ್ರಹಣೆಯನ್ನು ಒಂದೇ ಸೂರಿನಡಿ ಒದಗಿಸಲಾಗಿದೆ.

ಮದುವೆ, ಹಬ್ಬ- ಹರಿದಿನ ಹಾಗೂ ದೈನಂದಿನ ಬಳಕೆಗೆ ಅಗತ್ಯವಾದ ಎಲ್ಲ ಉಡುಪುಗಳು ಮಳಿಗೆಯಲ್ಲಿವೆ. ಈ ಮಳಿಗೆಯನ್ನು ಸಾಂಪ್ರದಾಯಿಕ ಸೊಬಗು ಮತ್ತು ಆಧುನಿಕ ಶೈಲಿಯ ಸಂಯೋಜನೆಯೊಂದಿಗೆ ರೂಪಿಸಲಾಗಿದೆ. ಇದು ಗ್ರಾಹಕರಿಗೆ ನೂತನ ಶಾಪಿಂಗ್ ಅನುಭವವನ್ನು ನೀಡಲಿದೆ.

‘ನಮ್ಮ 82ನೇ ಶೋರೂಮ್ ಮೂಲಕ ಕಳಾಮಂದಿರ್ ಪರಂಪರೆಯನ್ನು ದಾವಣಗೆರೆಗೆ ತರುತ್ತಿರುವುದು ಸಂತಸದ ವಿಚಾರ. ಒಂದೇ ಸೂರಿನಡಿ ಅತ್ಯುತ್ತಮ ಸಂಗ್ರಹಣೆ, ಗುಣಮಟ್ಟ, ವೈವಿಧ್ಯತೆ ಹಾಗೂ ಮೌಲ್ಯಯುತ ಫ್ಯಾಷನ್ ಉತ್ಪನ್ನಗಳನ್ನು ಒದಗಿಸುವುದು ನಮ್ಮ ಬದ್ಧತೆಯಾಗಿದೆ. ಪ್ರತಿಯೊಂದು ಕುಟುಂಬದ ಬದಲಾಗುತ್ತಿರುವ ಫ್ಯಾಷನ್ ಅಗತ್ಯಗಳನ್ನು ಪೂರೈಸುವುದು ನಮ್ಮ ಆದ್ಯತೆ’ ಎಂದು ಸಾಯಿ ಸಿಲ್ಕ್ಸ್ ಕಳಾಮಂದಿರ್ ಲಿಮಿಟೆಡ್ನ ನಿರ್ದೇಶಕ ದುರ್ಗಾರಾವ್ ಚಾಲವಾಡಿ ತಿಳಿಸಿದರು.

ಗ್ರಾಹಕರು, ಹಿತೈಷಿಗಳು ಹಾಗೂ ಎಸ್ಎಸ್ಕೆಎಲ್ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-43-1396613194

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.