ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್ತಿನ ದಾವಣಗೆರೆ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷೆ, ಕವಯತ್ರಿ ಅರುಂಧತಿ ರಮೇಶ್ (76) ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇವರಿಗೆ ಪುತ್ರ ಮಂಜುನಾಥ್ ಇದ್ದಾರೆ. ಅರುಂಧತಿ ಅವರ ಅಪೇಕ್ಷೆಯಂತೆ ಮೃತದೇಹವನ್ನು ರಾಮಯ್ಯ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ.

1950ರ ಜೂನ್ 9ರಂದು ಚಿತ್ರದುರ್ಗದ ಹಿರಿಯೂರಿನಲ್ಲಿ ಅರುಂಧತಿ ಜನಿಸಿದ್ದರು. ದಾವಣಗೆರೆಯ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು.

‘ಚಿತ್ರಚಾತಕ’, ‘ಮಡಿಲು’, ‘ಪರಾಗಸ್ಪರ್ಶಕ್ಕೆ ಕಾದ ಕವನ’, ‘ತೇಲಿ ಬಿಟ್ಟ ದ್ವೀಪ’ ಕವನ ಸಂಕಲನಗಳನ್ನು ರಚಿಸಿದ್ದರು. ‘ರೊಮ್ಯಾಂಟಿಕ್ ಕಥೆಯೊಂದರ ಕೊನೆ’ (ಕಥಾ ಸಂಕಲನ), ‘ಬಗೆದಷ್ಟು ಬಾನು’ (ಬಿಡಿಲೇಖನಗಳು) ಹಾಗೂ ‘ಭವದ ಬೆಳಕು’ (ಸಮಗ್ರ ಸಾಹಿತ್ಯ) ಕೃತಿಗಳನ್ನು ರಚಿಸಿದ್ದಾರೆ.

ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ, ಬೇಂದ್ರೆ- ಅಡಿಗ ಪ್ರಶಸ್ತಿ, ಮಹಾಲಕ್ಷ್ಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನದ ಗೌರವ, ಮುಂಬೈನ ಆರ್. ಸುಶೀಲದೇವಿ ಶೆಟ್ಟಿ ಕಾವ್ಯ ಪ್ರಶಸ್ತಿ, ದಾವಣಗೆರೆ ವನಿತಾ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಇನ್ನಿತರ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಪತಿ, ಸಾಹಿತಿ ಬಿ.ಎಂ.ರಮೇಶ್ ಅವರು 1993ರಲ್ಲಿ ನಿಧನ ಹೊಂದಿದ್ದರು. ಅರುಂಧತಿ ಅವರು ಬೆಂಗಳೂರಿನಲ್ಲಿ ಪುತ್ರನೊಂದಿಗೆ ನೆಲೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.