l ಉಪಚುನಾವಣೆಯನ್ನು ಬಿಜೆಪಿ ಹೇಗೆ ಎದುರಿಸುತ್ತಿದೆ?

ಬಿಜೆಪಿಯು ರಾಷ್ಟ್ರೀಯ ಚಿಂತನೆಗಳೊಂದಿಗೆ ಕೆಲಸ ಮಾಡುತ್ತಿರುವ ಪಕ್ಷ. ಜಾತಿ ವಿಚಾರಗಳನ್ನು ಮೀರಿ ಅತ್ಯಂತ ಸಾಮಾನ್ಯ ಕಾರ್ಯಕರ್ತ ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ನ ಅರಸೊತ್ತಿಗೆಯ ಅಭ್ಯರ್ಥಿ ಹಾಗೂ ಬಿಜೆಪಿಯ ಜನಸಾಮಾನ್ಯ ಅಭ್ಯರ್ಥಿಯ ನಡುವಿನ ಹೋರಾಟವಿದು. ಮತದಾರರಿಗೆ ಈ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸುತ್ತಿದ್ದೇವೆ.

l ಪ್ರಚಾರದ ವೇಳೆ ಮತದಾರರ ಸ್ಪಂದನೆ ಹೇಗಿದೆ ?

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಆದಿಯಾಗಿ ರಾಜ್ಯಮಟ್ಟದ ವಿವಿಧ ಸ್ತರಗಳ ಎಲ್ಲಾ ನಾಯಕರು ಚುನಾವಣಾ ಕಣದಲ್ಲಿ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ನಡೆಸುತ್ತಿದ್ದಾರೆ. ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಜನರು ಮಜ್ಜಿಗೆ, ಶರಬತ್ತು ನೀಡಿ ಭರ್ಜರಿಯಾಗಿ ಸ್ವಾಗತಿಸುತ್ತಿದ್ದಾರೆ.

l ಜಿಲ್ಲೆಯಲ್ಲಿ ಪಕ್ಷದಲ್ಲಿನ ಬಣ ರಾಜಕೀಯ ನಿಜಕ್ಕೂ ಅಂತ್ಯ ಕಂಡಿದೆಯೇ?

ಪಕ್ಷದ ವರಿಷ್ಠರ ಸೂಚನೆಯಂತೆ ಪ್ರತಿಯೊಬ್ಬ ನಾಯಕರೂ, ಕಾರ್ಯಕರ್ತರೂ ಒಗ್ಗೂಡಿ ಈ ಉಪಚುನಾವಣೆಯನ್ನು ಎದುರಿಸುತ್ತಿದ್ದೇವೆ. ನಮಗೆ ಪಕ್ಷ ಮುಖ್ಯವೇ ಹೊರತು, ಅಭ್ಯರ್ಥಿ ಅಲ್ಲ. ಪ್ರತಿ ಬೂತ್ ಮಟ್ಟದಲ್ಲೂ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಎಂ.ಪಿ. ರೇಣುಕಾಚಾರ್ಯ ಬಣ, ಜಿ.ಎಂ.ಸಿದ್ದೇಶ್ವರ ಬಣ ಎಂಬ ಪ್ರಶ್ನೆಯೇ ಇಲ್ಲ.

l ಬಿಜೆಪಿ ಅಭ್ಯರ್ಥಿಗೆ ಜನ ಏಕೆ ಮತ ಹಾಕಬೇಕು?

ಕಾಂಗ್ರೆಸ್ನ ಅತ್ಯಂತ ಹಿರಿಯ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರನ್ನು ಮತದಾರರು ನಿರಂತರವಾಗಿ ಗೆಲ್ಲಿಸಿಕೊಂಡು ಬಂದಿದ್ದಾರೆ. ಆದರೂ, ದಕ್ಷಿಣ ಕ್ಷೇತ್ರದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ರಸ್ತೆ, ಚರಂಡಿ ಬಿಟ್ಟರೆ ಕ್ಷೇತ್ರದಲ್ಲಿ ಬೇರೆ ಯಾವ ಅಭಿವೃದ್ಧಿ ಕಾರ್ಯಗಳೂ ಕಾಣುವುದಿಲ್ಲ. ಸುಸಜ್ಜಿತ ಶಾಲೆಯಿಲ್ಲ, ಸರ್ಕಾರಿ ಆಸ್ಪತ್ರೆಯಿಲ್ಲ. ಬಿಜೆಪಿ ಅಭ್ಯರ್ಥಿ ಗೆದ್ದರೆ ಕ್ಷೇತ್ರದ ಜನರಿಗೆ ಶೈಕ್ಷಣಿಕ ಸೌಲಭ್ಯ, ಉದ್ಯೋಗ ಹಾಗೂ ಮೂಲಸೌಕರ್ಯ ಕಲ್ಪಿಸುತ್ತೇವೆ. ಈ ಬಾರಿ ಕಾಂಗ್ರೆಸ್ ಗೆದ್ದರೆ, ಇನ್ನೂ 30– 40 ವರ್ಷ ಮುಸ್ಲಿಮರಿಗೆ ಟಿಕೆಟ್ ದೊರೆಯುವುದಿಲ್ಲ ಎಂಬುದನ್ನು ಆ ಸಮುದಾಯವರು ಅರಿಯಬೇಕು.

l ಇಬ್ಬರು ಪರಾಜಿತ ಅಭ್ಯರ್ಥಿಗಳ ಬದಲಿಗೆ ಶ್ರೀನಿವಾಸ ಅವರನ್ನು ಕಣಕ್ಕಿಸಿದ ಹಿಂದಿನ ಲೆಕ್ಕಚಾರ ಏನು?

ಹಿಂದಿನ ಚುನಾವಣೆಗಳ ಲೆಕ್ಕಾಚಾರಗಳನ್ನೇ ಮುಖ್ಯವಾಗಿ ಪರಿಗಣಿಸಿಲ್ಲ. ಬೇರೆ ಬೇರೆ ಹತ್ತಾರು ಅಂಶಗಳನ್ನು ಪರಿಗಣಿಸಿ, ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಚುನಾವಣೆ ಎದುರಿಸುವ ಉದ್ದೇಶದಿಂದ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಟಿಕೆಟ್ ನೀಡಿದೆ.

ಕ್ಷೇತ್ರದಲ್ಲಿ ಇದುವರೆಗೆ ಕಮಲ ಅರಳಲು ಸಾಧ್ಯವಾಗಿಲ್ಲ. ಈಗ ಗೆಲುವು ಹೇಗೆ ಸಾಧ್ಯ?

ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ನಾವು ಮನವಿ ಮಾಡುತ್ತಿದ್ದೆವು. ಈಬಾರಿ ಮತದಾರರೇ ಬಿಜೆಪಿ ಅಭ್ಯರ್ಥಿ ಶ್ರೀನಿವಾಸದಾಸಕರಿಯಪ್ಪ ಅವರನ್ನು ಗೆಲ್ಲಿಸುವುದಾಗಿ ಆಶ್ವಾಸನೆ ನೀಡುತ್ತಿದ್ದಾರೆ.ಶಾಮನೂರು ಕುಟುಂಬ ಮತ್ತು ಕಾಂಗ್ರೆಸ್ ದುರಾಡಳಿತದ ವಿರುದ್ಧವಿವಿಧ ಸಮುದಾಯಗಳಲ್ಲಿ ಅಸಮಾಧಾನ ತೀವ್ರವಾಗಿದೆ.ಎಲ್ಲಾ ಸಮುದಾಯದವರೂ ಈ ಬಾರಿ ಬಿಜೆಪಿ ಅಭ್ಯರ್ಥಿಗೆ ಗೆಲುವಿನ ಮಾಲೆ ಹಾಕಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.