ಭಾನುವಾರ, ನವೆಂಬರ್ 29, 2020
25 °C

ದಾವಣಗೆರೆ| ಬಿಡದೇ ಸುರಿದ ಮಳೆ: ಹಲವೆಡೆ ನುಗ್ಗಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಂಗಳವಾರ ಸಂಜೆ ಆರಂಭಗೊಂಡ ಮಳೆ ರಾತ್ರಿ ಇಡೀ ಸುರಿದಿದೆ. ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ.

ಸಂಜೆ 6 ಗಂಟೆಯ ಹೊತ್ತಿಗೆ ಗುಡುಗು ಸಿಡಿಲಿನೊಂದಿಗೆ ಮಳೆ ಶುರುವಾದ ಮಳೆ ಎಡೆಬಿಡದೆ ಸುರಿಯತೊಡಗಿತು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನೀರಿನಿಂದ ಆವೃತಗೊಂಡಿದೆ. ನೀಲಮ್ಮನ ತೋಟ, ಬೂದಾಳ್‌ ರಸ್ತೆ, ಎಸ್‌ಎಂ ಕೃಷ್ಣನಗರ ಸಹಿತ ಹಲವೆಡೆ ನೀರು ನುಗ್ಗಿದೆ. ನಿಟುವಳ್ಳಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳೇ ಕಾಲುವೆಗಳಂತಾದವು.

ಮೇಲ್ಸೇತುವೆಗಳ ಅಡಿಯಲ್ಲಿ ವಾಹನಗಳು ಆಚೀಚೆ ಸಂಚರಿಸದಷ್ಟು ಮಳೆ ಬಂದಿದೆ. ಹಳೇ ದಾವಣಗೆರೆ ಮತ್ತು ಹೊಸದಾವಣಗೆರೆಯನ್ನು ಬೆಸೆಯುವ ಬಹುತೇಕ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಲ್ಲಿ ದಾವಣಗೆರೆಯಲ್ಲಿ ಮಳೆ ಜಾಸ್ತಿ ಇರುತ್ತದೆ. ಅಕ್ಟೋಬರ್‌ನಲ್ಲಿ ಮಳೆಯ ರಭಸ ಕಡಿಮೆಯಾಗಿರುತ್ತದೆ. ಆದರೆ ಈ ಬಾರಿ ಅಕ್ಟೋಬರ್‌ನಲ್ಲಿಯೂ ರಭಸ ಕಡಿಮೆಯಾಗಿಲ್ಲ.

ಸಂಜೆಯ ನಂತರ ಮಳೆ ಬಂದಿದ್ದರಿಂದ ಹೆಚ್ಚಿನವರು ಕೆಲಸ ಮುಗಿಸಿ ಮನೆ ಸೇರಿದ್ದರು. ಹಲವು ಮನೆಗಳಿಗೆ ನೀರು ನುಗ್ಗುವ ಭೀತಿ ಉಂಟಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು