ದಾವಣಗೆರೆ: ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಭಾವಚಿತ್ರ ಇರುವ ₹ 7,19,820 ಮೌಲ್ಯದ ಅಡುಗೆ ಸಲಕರಣೆಗಳಿರುವ 180 ಬಾಕ್ಸ್‌ಗಳನ್ನು ಕೆಟಿಜೆ ನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜನರ ದೂರಿನ ಮೇರೆಗೆ ಭಗತ್‌ಸಿಂಗ್ ನಗರದ ಬನ್ನಿಮಹಾಂಕಾಳಿ ದೇವಾಲಯದ 1ನೇ ಕ್ರಾಸ್ ಬಳಿ ದಾಳಿ ನಡೆಸಿದ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ₹ 4ಲಕ್ಷ ಮೌಲ್ಯದ ಬೊಲೊರೊ ಹಾಗೂ ₹3999 ಮುಖಬೆಲೆಯ 180 ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಾಕ್ಸ್ ಮೇಲೆ ‘ರುಪ್ರಾಟನ್ ಗಿಫ್ಟ್ ಸೆಟ್’ ಎಂದು ಬರೆದಿದೆ. ಬಾಕ್ಸ್‌ನೊಳಗೆ ದೋಸಾ ತವಾ, ಒಂದು ಕಂಡಾಲ್. ಫ್ರೈ ಪ್ಯಾನ್ ಹಾಗೂ ಎಸ್‌ಎಸ್‌ಎಲ್‌ಐಡಿ ಸೆಟ್‌ಗಳು ಇವೆ.
ಬಾಕ್ಸ್‌ಗಳ ಮೇಲೆ ಎಸ್.ಎಸ್ ಮತ್ತು ಎಸ್.ಎಸ್.ಎಂ ಅಭಿಮಾನಿಗಳ ಬಳಗ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂದು ನಮೂದಿಸಲಾಗಿದೆ. ಕಾಡಜ್ಜಿ ಗ್ರಾಮದ ಹನುಮಂತ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.