ಬುಧವಾರ, ಡಿಸೆಂಬರ್ 8, 2021
25 °C

ಕುಮಾರಸ್ವಾಮಿಗೆ ಆರ್ ಎಸ್ ಎಸ್ ಬಗ್ಗೆ ಗಂಧ ಗಾಳಿ ಗೊತ್ತಿಲ್ಲ: ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕುಮಾರಸ್ವಾಮಿಗೆ ಆರ್ ಎಸ್ ಎಸ್ ಗಂಧಗಾಳಿ ಗೊತ್ತಿಲ್ಲ. ಯಾವುದೋ‌ ಒಂದು ಪುಸ್ತಕ ಓದಿ ಅದೇ  ಸತ್ಯ ಅಂದ್ರೆ ಕುರುಡ ಆನೆಯ ಬಾಲ ಮುಟ್ಟಿ ಅದೇ ಆನೆ  ಅಂದುಕೊಂಡಂತೆ ಕುಮಾರಸ್ವಾಮಿ ಅಂದುಕೊಂಡಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ನ್ಯಾಮತಿ ತಾಲ್ಲೂಕಿನ ಸುರಹೊನ್ನೆಯಲ್ಲಿ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು.

ಈಗ ಕಾಂಗ್ರೆಸ್  ಜೆಡಿಎಸ್ ನಡುವೆ ಅಲ್ಪ ಸಂಖ್ಯಾತರ ಮತಗಳಿಗೆ‌ ಪೈಪೋಟಿ‌ ಸುರುವಾಗಿದೆ. ಕಾಂಗ್ರೆಸ್ ಒಡೆದು ಮನೆ. ಕೇಂದ್ರದಲ್ಲಿ‌ ಕಾಂಗ್ರೆಸ್  ಕಚ್ಚಾಟ ಹಾಗೂ ರಾಜ್ಯದಲ್ಲಿ  ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಕಚ್ಚಾಟ ವಿದೆ. ಬರುವ  ಚುನಾವಣೆಯಲ್ಲಿ ಕಾಂಗ್ರೆಸ್ ದೂಳಿಪಟ ಆಗಲಿದೆ ಎಂದು ಭವಿಷ್ಯ ನುಡಿದರು.

ಬೊಮ್ಮಾಯಿ ಅವರೇ ಒಂದೂವರೆ ವರ್ಷ ಮುಖ್ಯಮಂತ್ರಿ ಅಗಿರುತ್ತಾರೆ. ಅವರ ನೇತೃತ್ವದಲ್ಲಿಯೇ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಅಶೋಕ್ ಸ್ಪಷ್ಟನೆ ನೀಡಿದರು‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು