ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಬಳೂರು: ಹನುಮಂತ ದೇವರ ಮುಳ್ಳುಗದ್ದುಗೆ ಉತ್ಸವ

Last Updated 21 ಮಾರ್ಚ್ 2022, 5:49 IST
ಅಕ್ಷರ ಗಾತ್ರ

ಮಲೇಬೆನ್ನೂರು: ಸಮೀಪದ ಕುಂಬಳೂರಿನ ಹನುಮಂತ ದೇವರ ಮುಳ್ಳುಗದ್ದುಗೆ ಉತ್ಸವದಲ್ಲಿ ಭಾನುವಾರ ಭಕ್ತರು ಕಾರೆಮುಳ್ಳು ತುಳಿದು ಭಕ್ತಿ ಸಮರ್ಪಿಸಿದರು.

ಪೂಜಾವಿಧಿಗಳ ನಂತರ ಹನುಮಂತ ದೇವರ ಉತ್ಸವಮೂರ್ತಿ, ಹರಕೆ ಹೊತ್ತು ಭೂತದ ಹಲಗೆ ಹಿಡಿದವರು ಮೊದಲು ಮುಳ್ಳಿನ ಮೇಲೆ ಆವೇಶ ಭರಿತರಾಗಿ ಸಾಗಿ ಬಂದರು.

ಹರಕೆ ಹೊತ್ತವರು ಒಬ್ಬೊಬ್ಬರಾಗಿ ಸಾಲಾಗಿ ‘ರಾಮ ರಾಮ ಗೋವಿಂದ’ ಎನ್ನುತ್ತಾ ಮುಳ್ಳಿನ ಮೇಲೆ ಕೂಗುತ್ತಾ ನಡೆದು ಬಂದರು. ‌ಭಕ್ತರು ದೇವಾಲಯದಲ್ಲಿ ಹರಿಸೇವೆ, ಮುಡಿ ಅರ್ಪಣೆ ಹಾಗೂ ಬಾಯಿಬೀಗದ ಹರಕೆ ಸಮರ್ಪಿಸಿದರು.

ದೇವಾಲಯ ಹಾಗೂ ರಾಜಬೀದಿಯನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ರಾಜಬೀದಿಯಲ್ಲಿ ಡೊಳ್ಳು, ಸಮಾಳ, ತಮಟೆ ಮೇಳ, ನಾಸಿಕ್‌ ಡೋಲು, ಜಾಂಚ್‌ ವಾದ್ಯದೊಂದಿಗೆ ಕುದುರೆ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಓಕುಳಿಯಾಟದ ನಂತರ ಕಂಕಣ ವಿಸರ್ಜನೆಯೊಂದಿಗೆ ಉತ್ಸವಕ್ಕೆ ತೆರೆ ಬಿದ್ದಿತು. ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT