ದಾವಣಗೆರೆ: ಕುಂದವಾಡದಲ್ಲಿ ಹೊಸ ಬಡಾವಣೆ ನಿರ್ಮಿಸಿ ನಿವೇಶನ ಹಂಚಲು ಕರೆಯಲಾಗಿದ್ದ ಅರ್ಜಿ ಸಲ್ಲಿಕೆಯ ಕೊನೇ ದಿನವಾದ ಶನಿವಾರ ಅರ್ಜಿ ಸಲ್ಲಿಸಲು ಜನರು ಮುಗಿಬಿದ್ದಿದ್ದರು. ರಾತ್ರಿ 8 ಗಂಟೆಯ ವರೆಗೆ ಅರ್ಜಿ ಸ್ವೀಕಾರ ನಡೆಯಿತು.
ಆ.11ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿತ್ತು. ಆ.26ಕ್ಕೆ ಮುಗಿಯಬೇಕಿತ್ತು. ದಿನೇ ದಿನೇ ಅರ್ಜಿ ಸಲ್ಲಿಸುವವರ ಸರತಿ ಸಾಲು ಉದ್ದವಾಗುತ್ತಾ ಹೋಗಿದ್ದರಿಂದ ಸೆ.4ರ ವರೆಗೆ ಅವಧಿ ವಿಸ್ತರಿಸಲಾಗಿತ್ತು. ಕೊನೇ ದಿನವಾದ ಶನಿವಾರ 1,500ಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದರು.
‘ಶನಿವಾರ ಅರ್ಜಿ ಸಲ್ಲಿಸಲು ಬಂದ ಯಾರನ್ನೂ ವಾಪಸ್ ಕಳುಹಿಸದೇ ಕೆಲಸ ಮಾಡಿದ್ದೇವೆ. ಒಟ್ಟು ಅರ್ಜಿಗಳ ಲೆಕ್ಕ ಸೋಮವಾರ ಸಿಗಲಿದೆ’ ಎಂದು ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಬಿ.ಟಿ. ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.