ಗುರುವಾರ , ಸೆಪ್ಟೆಂಬರ್ 19, 2019
21 °C

ಸಂವಿಧಾನ ಮೊದಲು ಉಳಿಯಲಿ ಧರ್ಮ ಮಾನ್ಯತೆ ಆಮೇಲೆ ನೋಡೋಣ

Published:
Updated:
Prajavani

ದಾವಣಗೆರೆ: ಲಿಂಗಾಯತರು ಪ್ರತ್ಯೇಕ ಧರ್ಮ ಮಾನ್ಯತೆಗೆ ಹೋರಾಡುವುದಕ್ಕಿಂತ ಮೊದಲು ಸಂವಿಧಾನ ಉಳಿವಿಗೆ ಹೋರಾಡಲು ಮುಂದಾಗಬೇಕು ಎಂದು ರಾಷ್ಟ್ರೀಯ ಲಿಂಗಾಯತ ಮೋರ್ಚಾ ಅಧ್ಯಕ್ಷ ಲಾತೂರ್‌ನ ಉಸ್ತುರಿಯ ಕೋರಣೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಗುರುವಾರ ಬಹುಜನ ಕ್ರಾಂತಿ ಮೋರ್ಚಾ ಹಮ್ಮಿಕೊಂಡಿದ್ದ ಎವಿಎಂ ಹಗರಣ ಬಯಲು ಮಾಡಲು ನಡೆಯುತ್ತಿರುವ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನ ಬದಲಾವಣೆ ಮಾತು ಇಂದು ಹೆಚ್ಚು ಕೇಳಿಬರುತ್ತಿದೆ. ಸಂವಿಧಾನವೇ ಹೋದರೆ ಪ್ರತ್ಯೇಕ ಧರ್ಮದ ಮಾನ್ಯತೆ ಹೇಗೆ ಸಿಗುತ್ತದೆ ಎಂದು ಪ್ರಶ್ನಿಸಿದ ಅವರು, ‘ಇಂದು ದಿನಕ್ಕೊಂದು ಕಾನೂನು ಬರುತ್ತಿದೆ. ಸಂವಿಧಾನ ಅಪಾಯದಲ್ಲಿದೆ. ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ದಮನ ಮಾಡುವ ಮನು ಪ್ರೇರಿತ ಸಂವಿಧಾನ ಬರುವ ಅಪಾಯ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಹಕ್ಕುಗಳಿಗಾಗಿ ಸಮುದಾಯಗಳು ಪ್ರತ್ಯೇಕವಾಗಿ ಹೋರಾಡುವುದಕ್ಕಿಂತ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದರು.

Post Comments (+)