ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ–ಲಿಂಗಾಯತ ಒಳಪಂಗಡ ವಿಲೀನವಾಗಲಿ

ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಅಭಿನವ ಅನ್ನದಾನ ಸ್ವಾಮೀಜಿ
Last Updated 25 ಆಗಸ್ಟ್ 2019, 14:28 IST
ಅಕ್ಷರ ಗಾತ್ರ

ದಾವಣಗೆರೆ: ವೀರಶೈವ– ಲಿಂಗಾಯತ ಧರ್ಮದ ಒಳಗಿರುವ ಎಲ್ಲ ಒಳಪಂಗಡಗಳು ವಿಲೀನವಾಗಬೇಕು ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಅಭಿನವ ಅನ್ನದಾನ ಸ್ವಾಮೀಜಿ ಹೇಳಿದರು.

ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಅನ್ನದಾನೇಶ್ವರ ಶಾಖಾಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರು ಅನ್ನದಾನ ಮಹಾಶಿವಯೋಗಿಗಳವರ 42ನೇ ಪುಣ್ಯಾರಾಧನೆ, 228ನೇ ಶಿವಾನುಭವ ಸಂಪದ, 501 ಮುತ್ತೈದೆಯರಿಗೆ ಉಡಿತುಂಬುವ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಣಜಿಗ, ಪಂಚಮಸಾಲಿ, ಪಂಚಪೀಠ ಹೀಗೆ ನಾನಾ ಪಂಗಡಗಳಲ್ಲಿ ಗುರುತಿಸಿಕೊಳ್ಳುವ ಬದಲು ಎಲ್ಲವೂ ವೀರಶೈವ–ಲಿಂಗಾಯತದಲ್ಲಿ ವಿಲೀನವಾಗಬೇಕು. ಅದಕ್ಕಾಗಿ ವೀರಶೈವ ಮಹಾಸಭಾ ಬಹಳ ಪ್ರಯತ್ನ ಪಟ್ಟಿತ್ತು. ದರೂ ಒಳಪಂಗಡ ಪ್ರಜ್ಞೆ ಕಡಿಮೆಯಾಗಿಲ್ಲ ಎಂದು ವಿಷಾದಿಸಿದರು.

ವೀರಶೈವ– ಲಿಂಗಾಯತ ಬೇರೆ ಬೇರೆ ಎಂದು ವಿವಾದವಾದಾಗ ಧರ್ಮ ಒಡೆಯದಂತೆ ಶಾಮನೂರು ಶಿವಶಂಕರಪ್ಪ ಗಟ್ಟಿಯಾಗಿ ನಿಂತಿದ್ದರು. ಇದನ್ನು ಅರ್ಥ ಮಾಡಿ ಒಗ್ಗಟ್ಟಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.

ಅನ್ನದಾನೇಶ್ವರ ಸಾರ್ವಜನಿಕ ಸೇವಾ ಟ್ರಸ್ಟ್ ಅಧ್ಯಕ್ಷ ಅಥಣಿ ಎಸ್. ವೀರಣ್ಣ, ‘ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂದು ಅಂದಿನ ಮುಖ್ಯಮಂತ್ರಿಗಳು ಯಾವುದೋ ಒಂದು ಸಂದರ್ಭದಲ್ಲಿ ಮಾಡಿದ ಸಮಸ್ಯೆ ಇಂದು ಬೃಹದಾಕಾರವಾಗಿ ಬೆಳೆದಿದೆ.ಈ ವಿವಾದ ಹುಟ್ಟಿಕೊಳ್ಳುವ ಮೊದಲು ನಾವೆಲ್ಲ ಒಂದು ಎಂಬ ಭಾವನೆಯಲ್ಲಿದ್ದೆವು. ಇದು ಬೇರೆ ಬೇರೆ ಎಂದು ಯಾರೂ ಯೋಚಿಸಿರಲಿಲ್ಲ’ ಎಂದು ಹೇಳಿದರು.

ರಾಜ್ಯದ ಮುಖ್ಯಮಂತ್ರಿ ಸಹ ನಮ್ಮ ಸಮಾಜದವರೇ ಇದ್ದಾರೆ. ನಮ್ಮವರಿದ್ದರೇ ಪ್ರೋತ್ಸಾಹ ಸಿಗುತ್ತದೆ. ವೀರಶೈವ– ಲಿಂಗಾಯತರ ನಾಯಕರು ರಾಜಕೀಯದಲ್ಲಿದ್ದರೇ ಜಿಲ್ಲೆಗೂ ಒಳ್ಳೆಯ ಭವಿಷ್ಯ ಸಿಗಲಿದೆ. ರಾಜ್ಯದಲ್ಲಿ ಲಿಂಗಾಯತ ಸಮುದಾಯದವರು ಮುಖ್ಯಮಂತ್ರಿಯಾಗಿದ್ದ ವೇಳೆ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ್ದಾರೆ ಎಂದು ತಿಳಿಸಿದರು.

ಹಾಲಕೆರೆಯ ಮುಪ್ಪಿನ ಬಸವಲಿಂಗದೇವರು, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ, ಉಪನ್ಯಾಸಕ ಎಫ್.ಎನ್.ಹುಡೇದ್ ಇದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಎಸ್‌.ಎಸ್‌. ಗಣೇಶ್‌, ಡಾ.ಎ.ಕೆ. ರುದ್ರಮುನಿ, ಟಿ.ಜೆ. ಜಯರುದ್ರೇಶ್‌, ಶಿವಪುತ್ರಪ್ಪ ಸಂಗಪ್ಪ, ಸಿಂಗಾಡಿ, ರಾವುತಪ್ಪ ವೀರಭದ್ರಪ್ಪ ತುಂಬರಗದ್ದಿ ಅವರಿಗೆ ಗೌರವ ಶ್ರೀರಕ್ಷೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ವೀರಪ್ಪ ಎಂ. ಭಾವಿ ಕಾರ್ಯಕ್ರಮದ ನಿರೂಪಿಸಿದರು.

‘ಪಾಶ್ಚಾತ್ಯರಲ್ಲಿ ಕಾಯಕ ತತ್ವ’

‘ಬಸವಣ್ಣನ ಕಾಯಕ ತತ್ವ ಎಲ್ಲಿದೆ ಎಂದು ನೋಡಿದರೆ ಪಾಶ್ಚಾತ್ಯರಲ್ಲಿ ಕಂಡಿತು. ಅವರು ವಾರದ ಐದು ದಿನಗಳ ಕಾಲ ನಿಷ್ಠೆಯಿಂದ, ಪ್ರಾಮಾಣಿಕವಾಗಿ, ಅಚ್ಚುಕಟ್ಟಾಗಿ ಕೆಲಸ ಮಾಡುತ್ತಾರೆ. ಆದರೆ ನಮಲ್ಲಿ ಕಾಯಕದೆಡೆಗೆ ಅಂಥ ನಿಷ್ಠೆ, ಪ್ರಾಮಾಣಿಕತೆ, ಅಚ್ಚುಕಟ್ಟುತನ ಕಾಣುತ್ತಿಲ್ಲ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಹೇಳಿದರು.

‘ವಿಶ್ವಕ್ಕೆ ಕಾಯಕ ತತ್ವ ಬೋಧಿಸಿದ ಬಸವಣ್ಣನ ನಾಡದ ನಮ್ಮಲ್ಲಿ ಅಸೂಯೆ, ಹೊಟ್ಟೆಕಿಚ್ಚು, ಬಡತನ, ನಿರುದ್ಯೋಗ ಹೆಚ್ಚಾಗಿರುವುದು ವಿಪರ್ಯಾಸ. ಪ್ರೀತಿ ಮತ್ತು ವಿಶ್ವಾಸದಿಂದ ಎಲ್ಲರನ್ನು ಗೆಲ್ಲುವ ಬಸವಣ್ಣನ ತತ್ವವನ್ನು ಹಂಪಿ ವಿಶ್ವವಿದ್ಯಾಲಯದಲ್ಲಿ ಅಳವಡಿಸುತ್ತೇನೆ’ ಎಂದು ತಿಳಿಸಿದರು.

‘ಅಲ್ಲಾಹು ದೇವರಿಗೆ ಲಿಂಗಮಠ’

ಎಲ್ಲ ಧರ್ಮಗಳ ಪ್ರಗತಿಗಾಗಿ ಉತ್ತರ ಕರ್ನಾಟಕದ ಅನ್ನದಾನೇಶ್ವರ ಮಠ ಕೆಲಸ ಮಾಡಿದೆ. ಅಲ್ಲಾಹು ದೇವರಿಗೇ ಲಿಂಗಾಮಠ ಕಟ್ಟಿದವರು ಗುರು ಅನ್ನದಾನ ಮಹಾಸ್ವಾಮಿ ಅವರು ಎಂದು ಸ್ವಾಮೀಜಿ ಹೇಳಿದರು.

ಸರ್ವಧರ್ಮ ಸಮನ್ವಯದ ಮಠ ಆಗಿದೆ. ಮೊಹರಂ ಕಾಲದಲ್ಲಿ ಅನ್ನದಾನ ಸ್ವಾಮೀಜಿ ಗಜ್ಜೆ ಮಾಡುತ್ತಿದ್ದರು. ಅದು ಕೆಲವರಿಗೆ ಇಷ್ಟವಾಗದೇ ಸ್ವಾಮೀಜಿಗೆ ಹೇಳುವವರು ಯಾರು ಎಂದು ಮಾತನಾಡಿಕೊಂಡಿದ್ದರು. ಇದು ಗೊತ್ತಾಗಿ ಸ್ವಾಮೀಜಿ ಅಲ್ಲಾಹು ದೇವರಿಗೆ ಲಿಂಗಮಠ ಕಟ್ಟಿದರು. ಈಗಲೂ ಮೊಹರಂ ಕಾಲದಲ್ಲಿ ಮುಸಲ್ಮಾನರು ಇಲ್ಲಿಗೆ ಬಂದು ಲಿಂಗ ಕಟ್ಟುತ್ತಾರೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT