ಸಾಲದ ಹೊರೆ: ರೈತ ಆತ್ಮಹತ್ಯೆ

7

ಸಾಲದ ಹೊರೆ: ರೈತ ಆತ್ಮಹತ್ಯೆ

Published:
Updated:

ಮಲೇಬೆನ್ನೂರು: ಸಾಲದ ಹೊರೆಯಿಂದ ನೊಂದು ಕಮಲಾಪುರದ ರೈತ ಸೋಮವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹರಿಹರ ತಾಲ್ಲೂಕು ಕಮಲಾಪುರ ಗ್ರಾಮದ ಬಾವಿಕಟ್ಟೆ ಚನ್ನಮ್ಮ ಅವರ ಮಗ ಬಿ.ಸಿ. ಹಾಲಪ್ಪ (28) ಆತ್ಮಹತ್ಯೆ ಮಾಡಿಕೊಂಡವರು. ತಂದೆಯ ನಿಧನದ ನಂತರ ಕೃಷಿ ಮತ್ತು ಮನೆಯನ್ನು ನೋಡಿಕೊಳ್ಳುತ್ತಿದ್ದ ಅವರು ಕಾರ್ಪೊರೇಷನ್‌ ಬ್ಯಾಂಕ್‌, ಹೊಳೆಸಿರಿಗೆರೆ ಸಹಕಾರಿ ಸಂಘ, ಪ್ರಗತಿಕೃಷ್ಣಾ ಗ್ರಾಮೀಣ ಬ್ಯಾಂಕ್‌ ಹಾಗೂ ಕೈಡವಾಗಿ ಒಟ್ಟು ₹ 9.05 ಲಕ್ಷ ಸಾಲ ಮಾಡಿದ್ದರು. ಇದರ ಹೊರೆ ತಾಳಲಾರದೆ ದನದ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಇದನ್ನು ಕಂಡು ಕೂಡಲೇ ಇಳಿಸಿ ಆಸ್ಪತ್ರೆಗೆ ಸಾಗಿಸಿದರೂ ಮೃತಪಟ್ಟಿದ್ದಾರೆ ಎಂದು ಅವರ ತಾಯಿ ಚನ್ನಮ್ಮ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮಲೇಬೆನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !