ಇಂಗ್ಲಿಷ್‌ ಸಾಹಿತ್ಯ ಅಧ್ಯಯನದಿಂದ ವಿಪುಲ ಅವಕಾಶ: ಚಿಂತಕ ಡಾ. ರಾಜೇಂದ್ರ ಚೆನ್ನಿ

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಇಂಗ್ಲಿಷ್‌ ಸಾಹಿತ್ಯ ಅಧ್ಯಯನದಿಂದ ವಿಪುಲ ಅವಕಾಶ: ಚಿಂತಕ ಡಾ. ರಾಜೇಂದ್ರ ಚೆನ್ನಿ

Published:
Updated:
Prajavani

ಶಿವಮೊಗ್ಗ: ಇಂಗ್ಲಿಷ್‌ ಸಾಹಿತ್ಯ ಅಧ್ಯಯನದಿಂದ ಸಮಾಜ ಮತ್ತು ಉದ್ಯೋಗ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು ಲಭ್ಯವಾಗುತ್ತವೆ ಎಂದು ಚಿಂತಕ ಡಾ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.

ನಗರದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಶುಕ್ರವಾರ ನಡೆದ ಆಪ್ತ ಸಮಾಲೋಚನಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂಗ್ಲಿಷ್‌ ಸಾಹಿತ್ಯ ಅಧ್ಯಯನದಿಂದ ಮನುಷ್ಯನ ಜ್ಞಾನ ಮತ್ತು ಬೌದ್ಧಿಕಮಟ್ಟ ಹೆಚ್ಚುತ್ತದೆ. ಇಂಗ್ಲಿಷ್‌ ಸಾಹಿತ್ಯ ಬ್ರಿಟಿಷ್ ಸಾಹಿತ್ಯವಲ್ಲ. ಅದು ಜಗತ್ತಿನ ಶ್ರೇಷ್ಠ ಮತ್ತು ಎಲ್ಲ ಭಾಷೆಯ ಸಾಹಿತ್ಯಗಳ ಅಧ್ಯಯನವಾಗಿದೆ. ಇದರ ಅಧ್ಯಯನದಿಂದ ಕೇವಲ ಶಿಕ್ಷಕನಾಗುವುದಷ್ಟೇ ಅಲ್ಲ. ಬದಲಾಗಿ ಭಾಷಾಂತರಕಾರರಿಗೆ ಹೇರಳವಾದ ಅವಕಾಶಗಳು ಲಭ್ಯವಾಗಲಿವೆ ಎಂದು ಹೇಳಿದರು. 

ಬೆಳ್ತಂಗಡಿ ಯುನಿಕ್‌ ಎಜು ಸ್ಕಿಲ್ಸ್‌ ಕಾಲೇಜಿನ ನಿರ್ದೇಶಕ ಸಲೀನ್, ‘ಬೀಜ ಮೊಳಕೆಯೊಡೆದು ಉತ್ತಮ ಗಿಡವಾಗಲು ಭೂಮಿಯ ಫಲವತ್ತತೆ ಎಷ್ಟು ಮುಖ್ಯವೋ ಉನ್ನತ ವ್ಯಾಸಂಗಕ್ಕೆ ದೊರಕುವ ಕಾಲೇಜಿನ ವಾತಾವರಣವೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಕಟೀಲ್ ಅಶೋಕ್‌ ಪೈ ಕಾಲೇಜು ಉನ್ನತ ವ್ಯಾಸಂಗಕ್ಕೆ ಉತ್ತಮ ವಾತಾವರಣ ಹೊಂದಿದೆ. ಅದರಲ್ಲೂ ಇಂಗ್ಲಿಷ್‌ ಸಾಹಿತ್ಯಕ್ಕೆ ಇಲ್ಲಿ ಪೂರಕವಾದ ವಾತಾವರಣವಿದೆ’ ಎಂದು ಅಭಿಪ್ರಾಯಪಟ್ಟರು.

ಮನಃಶಾಸ್ತ್ರಜ್ಞೆ ಕೆ.ಟಿ. ಶ್ವೇತಾ ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಮಾಡುವಲ್ಲಿ ಗಮನಿಸಬೇಕಾದ ಅಂಶಗಳ ಕುರಿತು ಮಾಹಿತಿ ನೀಡಿದರು.

ಡಿ.ಜಿ.ಪೂಜಾ, ‘ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕೌಶಲ, ಔದ್ಯೋಗಿಕ ಆಯ್ಕೆ, ತಂತ್ರಜ್ಙಾನ ಬಳಕೆ ಕುರಿತು ಮಾಹಿತಿ ನೀಡಿದರು. 

ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ. ಸಂಧ್ಯಾಕಾವೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾನಸ ಟ್ರಸ್ಟ್‌ನ ನಿರ್ದೇಶಕಿ ಡಾ. ರಜನಿ ಪೈ, ಮುಕುಂದ್ ಪೈ ಇದ್ದರು. ವಿದ್ಯಾರ್ಥಿ ಸೋವಿನ್ ನಿರೂಪಿಸಿದರು. ಕುನಾಲ್ ಸ್ವಾಗತಿಸಿದರು. ಅನಿತಾ ಪ್ರಾರ್ಥಿಸಿದರು. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !