ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಗಾಂಧೀಜಿ, ಶಾಸ್ತ್ರೀಜಿ ಆದರ್ಶ ರೂಢಿಸಿಕೊಳ್ಳಿ’

Published : 2 ಅಕ್ಟೋಬರ್ 2024, 14:35 IST
Last Updated : 2 ಅಕ್ಟೋಬರ್ 2024, 14:35 IST
ಫಾಲೋ ಮಾಡಿ
Comments

ಬಸವಾಪಟ್ಟಣ: ‘ಮಹಾತ್ಮ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರೀ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರ ಆದರ್ಶ ನಮಗೆ ದಾರಿ ದೀಪವಾಗಬೇಕು’ ಎಂದು ಹರನಹಳ್ಳಿ ಕೆಂಗಾಪುರದ ರಾಮಲಿಂಗೇಶ್ವರ ಸ್ವಾಮೀಜಿ ಸಲಹೆ ನೀಡಿದರು.

ಸಮೀಪದ ಕೆಂಗಾಪುರದ ರಾಮಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರೀ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಗಾಂಧೀಜಿಯವರು ದೇಶ ಪ್ರೇಮ, ರಾಷ್ಟ್ರಭಕ್ತಿ, ಅನ್ಯಾಯದ ವಿರುದ್ಧ ಹೋರಾಟ, ದಲಿತರ ಹಿತರಕ್ಷಣೆ, ಜಾತಿ ರಹಿತ ಸಮಾಜದ ಕನಸಿನ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆ ನೀಡಿ ರಾಷ್ಟ್ರಪಿತ ಎನಿಸಿದರು. ದೇಶದ ಎರಡನೇಪ್ರಧಾನಿಯಾಗಿ ಸೇವೆ ಸಲ್ಲಿಸಿದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ತಮ್ಮ ಸರಳತೆ, ಪ್ರಾಮಾಣಿಕತೆಯ ಆಡಳಿತದಿಂದ ಭಾರತವನ್ನು ಮುನ್ನಡೆಸಿದರು. ಇಬ್ಬರು ಮಹನೀಯರ ಸೇವೆ ಆದರ್ಶಪ್ರಾಯ’ ಎಂದರು.

ಬಿ.ಇ.ಡಿ. ಕಾಲೇಜು ಪ್ರಾಂಶುಪಾಲ ಎಚ್‌.ಎಸ್‌. ನಾಗರಾಜ್‌, ರಾಮಲಿಂಗೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ.ಎಂ. ದಾದಾಪೀರ್‌ ಹಾಗೂ ಶಿಕ್ಷಕರು,  ವಿದ್ಯಾರ್ಥಿಗಳು ಇದ್ದರು. ಬಳಿಕ ಶ್ರಮದಾನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT