ಸೇವಾದಳದ ಆದರ್ಶ ರೂಢಿಸಿಕೊಳ್ಳಿ

5
seva dal

ಸೇವಾದಳದ ಆದರ್ಶ ರೂಢಿಸಿಕೊಳ್ಳಿ

Published:
Updated:
Deccan Herald

ಬಸವಾಪಟ್ಟಣ: ಭಾರತ ಸ್ವಾತಂತ್ರ್ಯಕ್ಕಾಗಿ, ತನ್ನದೇ ಆದ ಕೊಡುಗೆಗಳನ್ನು ನೀಡಿದ ಭಾರತ ಸೇವಾದಳದ ದೇಶಪ್ರೇಮ, ತ್ಯಾಗ, ಬಲಿದಾನ, ಸೇವಾ ಮನೋಭಾವಗಳನ್ನು ರೂಢಿಸಿಕೊಂಡು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು  ಭಾರತ ಸೇವಾದಳದ ಜಿಲ್ಲಾ ಸಂಚಾಲಕ ಅಣ್ಣಯ್ಯ ಸಲಹೆ ನೀಡಿದರು.

ಸಮೀಪದ ಹರಲೀಪುದ ನೀಲಮ್ಮ ಪಟೇಲ್‌ ಬಸಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಭಾರತ ಸೇವಾದಳ ಶಾಖೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ಸೇವೆಗಾಗಿ ಬಾಳು ಎಂಬುದು ಭಾರತ ಸೇವಾದಳದ ಧ್ಯೇಯ ವಾಕ್ಯವಾಗಿದ್ದು, ಪ್ರತಿಯೊಂದು ಕಾರ್ಯಗಳಲ್ಲಿ ಶಿಸ್ತು ಸಂಯಮ, ಸ್ವಚ್ಛತೆಯನ್ನು ಕಾಪಾಡಲು ಜನರಿಗೆ ನೆರವಾಗುವುದು ಸೇವಾದಳ ಕಾರ್ಯಕರ್ತರ ಪ್ರಮುಖ ಕರ್ತವ್ಯ. ಸೇವಾದಳದ ಸದಸ್ಯರು ಈ ಆದರ್ಶಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಮಾಡಬೇಕು’ ಎಂದರು.

ಸೇವಾದಳದ ತಾಲ್ಲೂಕು ಸಂಚಾಲಕ ಮಂಜುನಾಥ್‌ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮಗಾಂಧೀಜಿ, ಸುಭಾಷ್‌ ಚಂದ್ರಬೋಸ್‌, ಭಗತ್‌ಸಿಂಗ್‌ ಅವರು ನಮಗೆ ಆದರ್ಶವಾಗಬೇಕು. ನಾ.ಸು.ಹರ್ಡೀಕರ್‌ ಅವರು ಸ್ಥಾಪಿಸಿದ ಈ ಸಂಸ್ಥೆಯ ಶಾಖೆಗಳು ಸೇವಾ ಮನೋಭಾವ ಮತ್ತು ದೇಶಪ್ರೇಮವನ್ನು ಬೆಳೆಸುವಲ್ಲಿ ಇಂದು ಮಹತ್ತರ ಪಾತ್ರವಹಿಸಿವೆ’ ಎಂದರು.

ಸಂಸ್ಥೆಯ ಅಧ್ಯಕ್ಷ ಸಾನಂದಮೂರ್ತಿ, ಭಾರತ ಸೇವಾದಳದ ಕಾರ್ಯಕರ್ತ ಎಂ.ಎಸ್‌. ಸಂಗಮೇಶ್‌, ತಾಲ್ಲೂಕು ಪಂಚಾಯಿತಿ  ಮಾಜಿ ಸದಸ್ಯ ಸತೀಶ್‌ಪಟೇಲ್‌. ಎಚ್‌.ರವಿಕುಮಾರ್‌ ಮಾತನಾಡಿದರು.

ಭಾರತ ಸೇವಾದಳದ ಪದಾಧಿಕಾರಿಗಳಾದ ಅಣ್ಣಯ್ಯ, ಮಂಜುನಾಥ್‌ ಮತ್ತು ಸಂಗಮೇಶ್‌ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ನಾಗರಾಜ್‌ ಸ್ವಾಗತಿಸಿದರು. ಮಾರುತಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !