ಮಲೇಬೆನ್ನೂರು: ಹೋಬಳಿ ಕೇಂದ್ರದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ ಸಮರ್ಪಕ ಸೇವೆ ನೀಡದೆ ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿದ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು ಮುಖಂಡ ಹಾಳೂರು ನಾಗರಾಜ್ ನೇತೃತ್ವದಲ್ಲಿ ಮಂಗಳವಾರ ಧರಣಿ ನಡೆಸಿದರು.

ಸ್ಥಳಕ್ಕೆ ಪ್ರಭಾರ ಡಿಎಚ್ಒ ಮುರುಳೀಧರ್, ಟಿಎಚ್ಒ ಅಬ್ದುಲ್ ಖಾದರ್, ವೈದ್ಯಾಧಿಕಾರಿ ಪ್ರಶಾಂತ್, ತಹಶೀಲ್ದಾರ್ ಸಂತೋಷ ಕುಮಾರ್, ಉಪತಹಶೀಲ್ದಾರ್ ಆರ್. ರವಿ ಆಗಮಿಸಿ ಪ್ರತಿಭಟನಕಾರರ ಜತೆ ಸಮಾಲೋಚಿಸಿದರು.

ವೈದ್ಯರ ಬದಲಾವಣೆ, ನರ್ಸ್, ಸ್ಚಚ್ಛತಾ ಸಿಬ್ಬಂದಿ, ಪ್ರಯೋಗಾಲಯ ತಂತ್ರಜ್ಞರು, ಔಷಧ ವಿತರಕರು ಸಮಯಪಾಲನೆ ಮಾಡುತ್ತಿಲ್ಲ. ಎಲ್ಲರ ಬಯೋಮೆಟ್ರಿಕ್ ಹಾಜರಾತಿಯನ್ನು ಪರಿಶೀಲಿಸಿ ಕ್ರಮ ಜರುಗಿಸಬೇಕು. ದಾವಣಗೆರೆಗೆ ನಿಯೋಜನೆಯಾಗಿರುವ ಸಿಬ್ಬಂದಿಯನ್ನು ವಾಪಸ್ ಕರೆಸಬೇಕು ಎಂದು ಧರಣಿ ನಿರತರು ಪಟ್ಟು ಹಿಡಿದರು.

ವೈದ್ಯರು ಔಷಧಗಳನ್ನು ಹೊರಗಡೆ ಖರೀದಿಸುವಂತೆ ಚೀಟಿ ಬರೆದುಕೊಡುತ್ತಾರೆ. ಉಗ್ರಾಣದಲ್ಲಿ ದಾಸ್ತಾನು ಇಲ್ಲ ಎಂದು ಆರೋಪಿಸಿದ ಪ್ರತಿಭಟನಕಾರರು ದಾಸ್ತಾನಿನ ಸಮಗ್ರ ದಾಖಲೆ ನೀಡುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಅಧಿಕಾರಿಗಳು ಕ್ಷ–ಕಿರಣ ವಿಭಾಗ, ವಾರ್ಡ್ಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಯಂತ್ರ ಕೆಟ್ಟಿರುವುದು, ಬೆಡ್ ಶೀಟ್ ಇಲ್ಲದಿರುವುದು ಕಂಡುಬಂದಿದೆ. ನೀವು ಭೇಟಿ ನೀಡುವ ಕಾರಣ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಿಸಿದ್ದಾರೆ’ ಎಂದು ರೈತರು ಹೇಳಿದರು.

ಕಡರನಾಯ್ಕನಹಳ್ಳಿ ಭಾಗದಲ್ಲಿ ಚರ್ಮದ ತುರಿಕೆ ಕಾಯಿಲೆ ಕಾಣಿಸಿಕೊಂಡಿದೆ. ನದಿ ನೀರಿನ ಪರೀಕ್ಷೆ ಮಾಡಿಸಿ ಸಮಸ್ಯೆ ಪರಿಹರಿಸಲು ಮನವಿ ಮಾಡಿದರು. ಅಧಿಕಾರಿಗಳು ಪರಿಹರಿಸುವ ಭರವಸೆ ನೀಡಿದರು.

ಸ್ಥಳಕ್ಕೆ ಶಾಸಕ ಬಿ.ಪಿ. ಹರೀಶ್ ಆಗಮಿಸಿ, ಧರಣಿ ನಿರತರ ಜತೆ ಸಮಾಲೋಚನೆ ನಡೆಸಿದರು. ಅಧಿಕಾರಿಗಳು ನೀಡಿದ ಉತ್ತರಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಬಿಚ್ಚಿಟ್ಟರು.

‘ಆರೋಗ್ಯ ಇಲಾಖೆಯಲ್ಲಿ ವೈದ್ಯರ ಸಮಸ್ಯೆ, ಔಷಧಿ ಕೊರತೆ ಕುರಿತು ಸದನದಲ್ಲಿ ಚರ್ಚೆ ನಡೆಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಶಾಸಕ ಹರೀಶ್ ಬೇಸರ ವ್ಯಕ್ತಪಡಿಸಿದರು.

ರೈತ ಸಂಘದ ಪ್ರತಿನಿಧಿಗಳ ಸಮ್ಮುಖದಲ್ಲಿ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಜತೆ ಶನಿವಾರ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ನಿರ್ಧಾರ ಪ್ರಕಟಿಸಿದ ನಂತರ ಧರಣಿ ಹಿಂದಕ್ಕೆ ಪಡೆಯಲಾಯಿತು.

ರೈತ ಸಂಘದ ಪ್ರತಿನಿಧಿಗಳು, ಪುರಸಭೆ ಸದಸ್ಯರು, ಕಂದಾಯ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.