ಮಲೇಬೆನ್ನೂರು: ಪಟ್ಟಣದ ಪುರಸಭೆ ಯ ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಇ– ಖಾತಾ ಮಾಡಿಕೊಡುವಂತೆ ಆಗ್ರಹಿಸಿ ಮುಖ್ಯಾಧಿಕಾರಿ ಎದುರು ಆಕ್ಷೇಪಾರ್ಹ ಪದಬಳಕೆ ಮಾಡಿ ವಾಗ್ವಾದ ನಡೆಸಿದ ಘಟನೆ ಶನಿವಾರ ನಡೆಯಿತು.

ಸಭಾಂಗಣದೊಳಗೆ ಅತಿಕ್ರಮವಾಗಿ ಪ್ರವೇಶಿಸಿದ ವ್ಯಕ್ತಿಯನ್ನು ಬಲವಂತವಾಗಿ ಸಿಬ್ಬಂದಿ ಹೊರಹಾಕಲು ಯತ್ನಿಸಿದಾಗ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

ಕಚೇರಿ ಹೊರಭಾಗದಲ್ಲಿ ಜನರು ಜಮಾವಣೆಗೊಂಡು ಪೊಲೀಸರೊಡನೆ ವಾಗ್ವಾದ ನಡೆಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಘಟನಾವಳಿ ಕುರಿತು ಬೇಸರ ವ್ಯಕ್ತಪಡಿಸಿದ ನಾಮ ನಿರ್ದೇಶಿತ ಸದಸ್ಯ ಆರೀಫ್ ಅಲಿ, ‘ಸಾಮಾನ್ಯ ಸಭೆಯನ್ನು ಸಂತೆಯಲ್ಲಿ ಮಾಡಿ’ ಎಂದರು.

ಪೊಲೀಸರು ಬಂದು ವ್ಯಕ್ತಿಯನ್ನು ವಶಕ್ಕೆ ಪಡೆದು ಎನ್ಸಿಆರ್ ಪ್ರಕರಣ ದಾಖಲು ಮಾಡಿದ್ದಾರೆ. ಘಟನೆ ಕುರಿತು ಪಿಎಸ್ಐ ಹಾರೂನ್ ಅಖ್ತರ್ ಮಾತನಾಡಿ, ‘ಕಾನೂನು ರೀತಿ ಕ್ರಮ ಜರುಗಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಗಲಾಟೆ ಮಾಡಿದ ವ್ಯಕ್ತಿ ಖಲೀಲ್ ಎಂದು ವಿಚಾರಣೆ ವೇಳೆ ತಿಳಿದು ಬಂದಿದ್ದು, ‘ಅವರ ಮಾನಸಿಕ ಆರೋಗ್ಯ ಸ್ಥಿತಿ ಸರಿಯಿಲ್ಲ. ಸ್ನೇಹಿತ ರೊಬ್ಬರ ಖಾತಾ ಪಡೆಯಲು ಕೆಲವು ತಿಂಗಳಿಂದ ಕಚೇರಿಗೆ ಅಲೆದು ಬೇಸತ್ತಿದ್ದರು’ ಎಂದು ಗೊತ್ತಾಗಿದೆ.

‘ಸರ್ವರ್ ಸಮಸ್ಯೆಯಿಂದ ನಿಗದಿತ ಕೆಲಸಕಾರ್ಯಗಳು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ’ ಎಂದು ಮುಖ್ಯಾಧಿಕಾರಿ ಎಂ.ಬಿ.ರವಿಪ್ರಕಾಶ್ ಸ್ಪಷ್ಟನೆ ನೀಡಿದರು.

ಸಾಮಾನ್ಯ ಸಭೆ: ಆರಂಭದಲ್ಲಿ ಸದಸ್ಯ ಭೋವಿ ಶಿವು ಮಾತನಾಡಿ, ‘ಇ– ಖಾತಾ ವಿಳಂಬ, ತುರ್ತು ಪೈಪ್ಲೈನ್ ಕಾಮಗಾರಿ ಸೇರಿ ಚಿಕ್ಕಪುಟ್ಟ ಕೆಲಸ ಮಾಡಿಕೊಡಲು ಸದಸ್ಯರಿಗೆ ಆಗುತ್ತಿಲ್ಲ. ನಾಗರಿಕರಿಗೆ ಉತ್ತರ ನೀಡುವುದು ಕಷ್ಟವಾಗಿದೆ. ಕಚೇರಿ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ದೂರವಾಣಿ ಕರೆಗೆ ಸ್ಪಂದಿಸುತ್ತಿಲ್ಲ. ಕಸದ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿ ಪ್ರಶ್ನೆಗಳ ಸುರಿಮಳೆಗೈದರು.

ಮುಖ್ಯಾಧಿಕಾರಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ, ಎಲ್ಲ ಸಮಸ್ಯೆಗಳನ್ನು ಸರಿಪಡಿಸುವ ಭರವಸೆ ನೀಡಿದರು. ‘ಪೌರ ಕಾರ್ಮಿಕರ ಕೊರತೆ ಇದೆ. ಲೋಡರ್ಗಳು ಹಾಗೂ ಸಿಬ್ಬಂದಿ ನೇಮಕದ ಕುರಿತು ಸಹಕರಿಸಿ’ ಎಂದು ಕೋರಿದರು.

ಸದಸ್ಯರಾದ ಖಲೀಲ್, ಸಾಬೀರ್ ಅಲಿ ಮೊದಲಾದವರು, ಕಾಗದ ರಹಿತ ಕಚೇರಿ ಮಾಡುವ ಕುರಿತು, ಕನ್ನಡ ಭವನ ನಿರ್ಮಾಣ, ಬೀದಿ ದೀಪ ನಿರ್ವಹಣೆ, ಹಳೆ ಮೋಟರ್ ಸರಿಪಡಿಸುವ ಕುರಿತು, ಕಬ್ಬಿಣ, ಮರಮುಟ್ಟು ಹರಾಜು ಹಾಕುವುದು, ಸೊಳ್ಳೆ ಕಾಟ ನಿಯಂತ್ರಿಸಲು ಕ್ರಿಮಿನಾಶಕ ಸಿಂಪರಣೆ ಕುರಿತು ಸಭೆಯಲ್ಲಿ ಚರ್ಚಿಸಿದರು.

ಪ್ರಭಾರಿ ಅಧ್ಯಕ್ಷೆ ಅಕ್ಕಮ್ಮ ಭಾನುವಳ್ಳಿ ಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಶಬ್ಬೀರ್ ಖಾನ್, ಸದಸ್ಯರಾದ ನಯಾಜ್, ಮೊಹಮದ್ ಖಲೀಲ್, ಕೆ.ಜಿ. ಲೋಕೇಶ್, ಮಂಜುನಾಥ್, ಸಾಬೀರ್ ಅಲಿ, ದಾದಾಪೀರ್, ಷಾ ಅಬ್ರಾರ್, ವಿಜಯಲಕ್ಷ್ಮಿ, ಸಿದ್ದೇಶ್, ಮಂಜುಳಾ ಕುಮಾರ್, ಸುಧಾ ರಾಜು ಪೂಜಾರ್, ಮೀನಾಕ್ಷಿ, ಬಸವರಾಜ್ ದೊಡ್ಡಮನಿ, ಕರಿಯಪ್ಪ, ಪರಿಸರ ಎಂಜಿನಿಯರ್ ಆರ್.ಎಸ್. ಉಮೇಶ್, ಕಂದಾಯಾಧಿಕಾರಿ ಧನಂಜಯ ಕಟ್ಟಿಮನಿ, ಜಿ.ಇ. ರಾಘವೇಂದ್ರ, ರಾಮಚಂದ್ರಪ್ಪ, ಆರೋಗ್ಯ ನಿರೀಕ್ಷಕ ಶಿವರಾಜ್, ಕಚೇರಿ ವ್ಯವಸ್ಥಾಪಕ ಶಿವಕುಮಾರ್, ಕಚೇರಿ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-43-1074204002

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.