ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಭಾನುವಾರ ಬಿರುಗಾಳಿ, ಸಿಡಿಲು, ಗುಡುಗು ಮಿಂಚಿನ ಆರ್ಭಟದೊಂದಿಗೆ ಸುರಿಯಿತು.

ನಂದಿತಾವರೆ, ಕುಣಿಬೆಳೆಕೆರೆ, ಆದಾಪುರ, ನಿಟ್ಟೂರು, ಬೂದಿಹಾಳ್, ಸಂಕ್ಲೀಪುರ, ಗುಳದಹಳ್ಳಿ ಗ್ರಾಮದಲ್ಲಿ ತಗ್ಗುಪ್ರದೇಶದ ಬೆಳೆದು ನಿಂತ ಭತ್ತ ಚಾಪೆ ಹಾಸಿದೆ. ಕೆಲವೆಡೆ ಭತ್ತದಗದ್ದೆ ಕೆಲಕಾಲ ಜಲಾವೃತವಾಗಿದ್ದವು.

ಇದರಿಂದಾಗಿ ಕಟಾವಿಗೆ ಅಡ್ಡಿಯಾಗಿದೆ, ಕಟಾವು ಯಂತ್ರ ಇಳಿಸಲು ಆಗುವುದಿಲ್ಲ. ಯಂತ್ರ ಕೆಸರಿನಲ್ಲಿ ಸಿಲುಕಿಕೊಳ್ಳುತ್ತವೆ ಎಂದು ರೈತ ಆದಾಪುರದ ವೀರಭದ್ರಪ್ಪ, ಕುಣಿಬೆಳಕೆರೆ ರಾಮಚಂದ್ರ ಶ್ರೇಷ್ಠಿ ಮಾಹಿತಿ ನೀಡಿದರು.

‘ಕಟಾವು ಮಾಡಿದ ಭತ್ತವನ್ನು ಹೊಲದಿಂದ ಮೇಲಕ್ಕೆ ತರುವುದೂ ಕಷ್ಟ. ಕಣದಲ್ಲಿ ಭತ್ತದ ರಾಶಿ ಹಾಕಿದರೆ ತೇವಾಂಶದ ಕಾರಣ ಕಾವು ಬಂದು ಬಣ್ಣ ಕೆಡುತ್ತದೆ. ಭತ್ತದ ಒಕ್ಕಲು ದುಬಾರಿ ಆಗುತ್ತದೆ. ವ್ಯಾಪಾರಿಗಳು ಭತ್ತದ ಬೆಲೆ ಕಡಿಮೆ ಮಾಡುತ್ತಾರೆ. ಒಟ್ಟಾರೆ ರೈತರ ಕಷ್ಟ ಹೇಳತೀರದು’ ಎಂದು ಸಂಕ್ಲೀಪುರದ ರೈತ ಚಂದ್ರು ಬೇಸರ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-43-1787554265

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.