ಮಲೇಬೆನ್ನೂರು: ಭದ್ರಾ ಬಸಿ ನೀರಿನ ಬಳಕೆ ಮಾಡಲು ನಿರ್ಮಿಸಿದ್ದ ದೇವರಬೆಳೆಕೆರೆ ಪಿಕಪ್ ಜಲಾಶಯಕ್ಕೆ ಅಳವಡಿಸಿರುವ ಕ್ರೆಸ್ಟ್ ಗೇಟ್ಗಳಿಗೆ ಭಾನುವಾರ ಜಲಸಸ್ಯ ಅಡ್ಡಲಾಗಿ ನಿಂತು ಸಮಸ್ಯೆ ಸೃಷ್ಟಿಯಾಗಿದೆ.

ಬಿರುಕು ಮೂಡಿದ್ದ ಪಿಕಪ್ ಜಲಾಶಯವನ್ನು ಡ್ರಿಪ್ ಯೋಜನೆ ಅಡಿ ದುರಸ್ತಿ ಮಾಡಲಾಗಿದ್ದರೂ ಮೂರು ವರ್ಷಗಳಿಂದ ಸಮಸ್ಯೆ ಕಾಣಿಸಿಕೊಂಡಿದೆ. ಜಿಲ್ಲಾಧಿಕಾರಿ, ಎ.ಸಿ, ಮುಖ್ಯ, ಅಧೀಕ್ಷಕ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ಗಳಿಗೆ ಸಮಸ್ಯೆ ಬಗ್ಗೆ ತಿಳಿದಿದೆ. ಗೇಟ್ ತೆರವು ಮಾಡಲು ಸರ್ಕಾರ ಅನುದಾನ ನೀಡಿದ್ದರೂ ಕೆಲಸ ಮಾತ್ರ ನಡೆದಿಲ್ಲ. ಏನಾದರೂ ದುರಂತ ಸಂಭವಿಸಿದರೆ ಎಲ್ಲರೂ ಹೊಣೆಗಾರರು ಎಂದು ರೈತರು ದೂರಿದ್ದಾರೆ.

‘ಮೇಲ್ಭಾಗದಿಂದ ಅಪಾರ ಪ್ರಮಾಣದ ಜಲಸಸ್ಯ ರಾಶಿಯಾಗಿ ತೇಲಿ ಬರುತ್ತಿದೆ. ದುರಸ್ತಿ ಕಾಮಗಾರಿ ನಡೆಸಲು ಬೇಸಿಗೆ ಸಕಾಲ. ಎಂಜಿನಿಯರ್ಗಳು ಕಾಮಗಾರಿಗೆ ಮುಂದಾಗಬೇಕು. ಇಲ್ಲವಾದರೆ ಅಣೆಕಟ್ಟೆಗೆ ಅಪಾಯ ನಿಶ್ಚಿತ’ ಎನ್ನುತ್ತಾರೆ ರೈತ ಸಂಕ್ಲೀಪುರದ ಚಂದ್ರು.

ಸಂಕ್ಲೀಪುರ, ಗುಳದಹಳ್ಳಿ, ಮುದಹದಡಿ ಭಾಗದ ಭತ್ತದ ಗದ್ದೆ, ತೋಟ, ರಸ್ತೆಯ ಸಮೀಪದ ಹಿನ್ನೀರು ಬರುತ್ತಿದೆ. ಭತ್ತದ ಗದ್ದೆಗಳು ಶೀತಬಾಧೆಗೆ ಸಿಲುಕಿವೆ. ಗದ್ದೆಗಳಲ್ಲಿ ನೀರು ಒಸರಲು ಆರಂಭವಾಗಿದೆ. ತುರ್ತಾಗಿ ಭತ್ತದ ಕಟಾವು ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಕಟಾವು ಯಂತ್ರ ನೀರಿನಲ್ಲಿ ಸಿಲುಕಿಕೊಳ್ಳುತ್ತಿವೆ. ಗದ್ದೆಯಿಂದ ಭತ್ತ ಹೊರಕ್ಕೆ ತರುವುದು ಕಷ್ಟವಾಗಿದೆ. ಹಾಗೇ ನೀರು ಹೋಗುವ ತನಕ ಬಿಟ್ಟರೆ ಭತ್ತದ ಬೆಳೆ ಕಣ ಸೇರದೆ ತೋಯ್ದು ಹಾಳಾಗುತ್ತದೆ’ ಎಂದು ಭತ್ತದ ಬೆಳೆಗಾರರಾದ ಗೌಡರ ಚನ್ನಪ್ಪ, ಮಹದೇವಪ್ಪ ವಿವರಿಸುತ್ತಾರೆ.

ಜಿಲ್ಲಾಧಿಕಾರಿ, ತಹಶೀಲ್ದಾರ್, ಭದ್ರಾ ಜಲಾಶಯ ವ್ಯಾಪ್ತಿಯ ಎಸ್ಇ, ಸಿಇ, ಜನಪ್ರತಿನಿಧಿಗಳು, ಜಿಲ್ಲಾಡಳಿತ ಗಮನ ಹರಿಸಿ ಗೇಟ್ ತೆರವು ಮಾಡಿ ಜಲಸಸ್ಯ ಹೊರ ಹೋಗುವಂತೆ ಮಾಡಬೇಕು ಎಂದು ರೈತರು ಕೋರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-43-1094280936

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.