ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಸುರಿದ ಬಿರು ಮಳೆಗೆ ತಗ್ಗು ಪ್ರದೇಶದ ಭತ್ತದ ಬೆಳೆ ಜಲಾವೃತವಾಗಿದೆ.

ಕುಣಿಬೆಳೆಕೆರೆ, ಜಿಗಳಿ ಹೊರ ವಲಯದ ಯಲವಟ್ಟಿ ರಸ್ತೆ ಅಕ್ಕಪಕ್ಕದ ಜಮೀನುಗಳು, ಆದಾಪುರ, ನಿಟ್ಟೂರು, ಸಂಕ್ಲೀಪುರ, ಗುಳದಹಳ್ಳಿ, ಭಾಗದಲ್ಲಿ ನೂರಾರು ಎಕರೆ ಭತ್ತ ಜಲಾವೃತವಾಗಿದೆ. ಕೆಲವು ಕಡೆ ಕಾಳು ಕಟ್ಟುವ ಹಂತದಲ್ಲಿದ್ದರೆ, ಕೆಲವೆಡೆ ಕಾಳು ಕಟ್ಟಿರುವ ಭತ್ತ ತುಂಡಾಗಿ ನೆಲದ ಪಾಲಾಗಿವೆ.

ಕಟಾವು ಮಾಡಿದ ಕಣದಲ್ಲಿ ಭತ್ತದ ರಾಶಿಗೆ ನೀರು ನುಗ್ಗಿ ಕೆಳಭಾಗ ನೆನೆದು ತೊಪ್ಪೆಯಾಗಿದೆ. ಮೋಡ ಮುಸುಕಿದ ವಾತಾವರಣದ ಕಾರಣ ಸೂರ್ಯನ ದರ್ಶನ ಇಲ್ಲದೇ ಭತ್ತವನ್ನು ಒಣಗಿಸುವುದು ಕಷ್ಟವಾಗಿದೆ. ಭತ್ತ ಕಾವು ಬಂದು ಮೊಳಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ತೇವಾಂಶ ಹೆಚ್ಚಾಗಿರುವ ಕಾರಣ ಭತ್ತದ ವ್ಯಾಪಾರ ಕುಂಠಿತವಾಗಿದೆ. ಸ್ಥಳೀಯ ಹಾಗೂ ಹೊರಭಾಗದ ವ್ಯಾಪಾರಿಗಳು ಖರೀದಿಗೆ ಮುಂದೆ ಬರುತ್ತಿಲ್ಲ. ಕಟಾವಿಗೆ ಸಿದ್ಧವಾಗಿದ್ದ ಭತ್ತದ ಗದ್ದೆಗಳಲ್ಲಿ ನೀರು ನಿಂತಿದೆ, ಇದರಿಂದ ಭತ್ತದ ಒಕ್ಕಲು ಮುಂದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-43-20361129

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.