ಮಲೇಬೆನ್ನೂರು: ‘ಪಟ್ಟಣದ ಉನ್ನತೀಕರಿಸಿದ ಪುರಸಭೆ ಆಡಳಿತ ವ್ಯವಸ್ಥೆಯು ಕುಸಿದಿದೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ, ಯಾವುದೇ ದಾಖಲೆಗಳು ಸಾರ್ವಜನಿಕರಿಗೆ ಸಕಾಲಕ್ಕೆ ಸಿಗುತ್ತಿಲ್ಲ’ ಎಂದು ಸದಸ್ಯ ಮೊಹ್ಮದ್ ಖಲೀಲ್ ಆರೋಪಿಸಿದರು.

ಪುರಸಭೆ ಅಧ್ಯಕ್ಷ ಬಿ. ಹನುಮಂತಪ್ಪ ಅಧ್ಯಕ್ಷತೆಯಲ್ಲಿ ದಿನವಿಡೀ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಸದಸ್ಯರ ಆರೋಪವನ್ನು ನಿರಾಕರಿಸಿದ ಪುರಸಭೆ ಮುಖ್ಯಾಧಿಕಾರಿ ಎಚ್. ನಿರಂಜನಿ ಅವರು, ‘ಸಿಬ್ಬಂದಿ ಕೊರತೆ, ಸರ್ವರ್ ಸಮಸ್ಯೆ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೆಲಸದ ಕಾರಣ ವಿಳಂಬವಾಗಿದೆ. ಇದರಲ್ಲಿ ಸಿಬ್ಬಂದಿ ತಪ್ಪಿಲ್ಲ’ ಎಂದರು.

ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಬೀದಿದೀಪಕ್ಕೆ ಹೊಸ ಮಾರ್ಗ ಅಳವಡಿಸಲು ₹15 ಲಕ್ಷ ವೆಚ್ಚದ ಅಂದಾಜು ಪಟ್ಟಿ ತಯಾರಿಸಲಾಗಿದೆ ಎಂದು ಬೆಸ್ಕಾಂ ಶಾಖಾಧಿಕಾರಿ ಮೇಘರಾಜ್ ಮಾಹಿತಿ ನೀಡಿದರು. ಇದರ ಖರ್ಚುವೆಚ್ಚವನ್ನು ಪುರಸಭೆ ನೀಡಬೇಕು ಎಂದಾಗ, ಕೆ.ಜಿ. ಲೋಕೇಶ್, ಬಿ. ಮಂಜುನಾಥ್, ಸಾಬೀರ್ ಅಲಿ, ಆರಿಫ್ ಅಲಿ, ನಯಾಜ್, ದಾದಾಪೀರ್, ಶಾ ಅಬ್ರಾರ್, ಗೌಡರ ಮಂಜಣ್ಣ, ಸಿದ್ದೇಶ್ ಅವರು ಈ ಬಗ್ಗೆ ಚರ್ಚಿಸಿದರು.

ಅಂಗನವಾಡಿ ಕಟ್ಟಡ ನಿರ್ಮಿಸಲು ನಿವೇಶನ ಒದಗಿಸುವಂತೆ ಸಿಡಿಪಿಒ ಕಚೇರಿ ಸಿಬ್ಬಂದಿ ಕೋರಿದರು. ಆರೋಗ್ಯ ನಿರೀಕ್ಷಕ ರವಿಶಂಕರ್ ಸಕಾರಾತ್ಮಕವಾಗಿ ಸ್ಪಂದಿಸಿದರು.

ಪಟ್ಟಣದಲ್ಲಿ ವಾಹನ ಸಂಚಾರ ಹೆಚ್ಚಾಗಿ ಪಾರ್ಕಿಂಗ್ ಸಮಸ್ಯೆ ಕಾಡುತ್ತಿದೆ. ನಂದಿಗುಡಿ, ಸಂತೆ ರಸ್ತೆ, ಮುಖ್ಯ ವೃತ್ತ ಮೊದಲಾದ ಕಡೆ ಫುಟ್ಪಾತ್ ಒತ್ತುವರಿ ತೆರವಿಗೆ ಪುರಸಭೆ ಮುಂದಾಗಬೇಕು ಎಂದು ಎಎಸೈ ಶ್ರೀನಿವಾಸ್ ಮನವಿ ಮಾಡಿದರು.

ಸಮಸ್ಯೆ ಪರಿಹರಿಸಲು ಬೀದಿಬದಿ ವ್ಯಾಪಾರಿಗಳ ಜತೆ ಸಭೆ ಮಾಡಬೇಕು. ಇದಕ್ಕೆ ದಿನಾಂಕ ನಿಗದಿ ಮಾಡಿ ಎಂದು ಉಪಾಧ್ಯಕ್ಷೆ ಸುಮ್ಮಯಾಬಾನು, ಸದಸ್ಯರಾದ ಶಬ್ಬೀರ್ ಖಾನ್, ಶಾ ಅಬ್ರಾರ್, ದೊಡ್ಡಮನಿ ಬಸವರಾಜ್, ಗೌಡರ ಮಂಜಣ್ಣ ಕೋರಿದರು.

ಪಟ್ಟಣದಲ್ಲಿ ಸಿಸಿಟಿವಿ ಕ್ಯಾಮೆರಾ ಕೆಲಸ ಮಾಡುತ್ತಿಲ್ಲ ಎಂಬ ಬಗ್ಗೆ ಪ್ರಸ್ತಾಪವಾಯಿತು. ‘ವಾರದೊಳಗೆ ಸರಿಯಾಗಲಿದೆ. ಸಮನ್ವಯತೆಯಿಂದ ಕೆಲಸ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ’ ಎಂದು ನಾಮನಿರ್ದೇಶಿತ ಸದಸ್ಯ ವೀರಯ್ಯ ಸ್ವಾಮಿ ಹೇಳಿದರು.

‘ಪಟ್ಟಣದಲ್ಲಿ ಟೆಂಡರ್ ಪಡೆದಿದ್ದ ಗುತ್ತಿಗೆದಾರರು ಬೀದಿದೀಪ ಅಳವಡಿಸಿದ್ದಾರೆ. ಆದರೆ ನಮ್ಮ ಸಿಬ್ಬಂದಿ ಅವುಗಳ ನಿರ್ವಹಣೆ ಮಾಡುತ್ತಿದ್ದಾರೆ. ಗುತ್ತಿಗೆದಾರ ಪತ್ತೆಯಿಲ್ಲ’ ಎಂದು ಸದಸ್ಯ ಬೋವಿ ಶಿವು ಹೇಳಿದರು. ಇದಕ್ಕೆ ಮುಖ್ಯಾಧಿಕಾರಿ ಉತ್ತರಿಸಲು ಮುಂದಾದರು. ಗುತ್ತಿಗೆದಾರರನ್ನು ಕರೆಸಿ ಕೆಲಸ ಮಾಡಿಸಿ ಎಂದು ಸದಸ್ಯರು ಆಗ್ರಹಿಸಿದರು.

ಲೋಕೋಪಯೋಗಿ ಇಲಾಖೆ, ಅಮೃತ್ ಯೋಜನೆ ಎಂಜಿನಿಯರ್ಗಳು ಸಭೆಗೆ ಬಂದಿಲ್ಲ ಎಂದು ಸದಸ್ಯರು ಹರಿಹಾಯ್ದರು. ಜೆಇ ರಾಘವೇಂದ್ರ ಅಸಹಾಯಕತೆ ವ್ಯಕ್ತಪಡಿಸಿದರು.

ಜಿಲ್ಲಾ ಯೋಜನಾ ಸಮಿತಿಗೆ ಇಬ್ಬರು ಸದಸ್ಯರನ್ನು ಆಯ್ಕೆ ಮಾಡುವುದೂ ಸೇರಿದಂತೆ ಭದ್ರಾ ನಾಲೆ ಸೇತುವೆ, ಮೀನು ಮಾಂಸ ಮಾರುಕಟ್ಟೆ, ಕೊಳವೆ ಬಾವಿ, ಇಂದಿರಾ ಕ್ಯಾಂಟೀನ್, ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರು ಸರಬರಾಜು, ಸಂತೆ ಮೈದಾನದ ಅಕ್ರಮ ಶೆಡ್, ಗೋದಾಮು ತೆರವು, ಆಶ್ರಯ ಕಾಲೊನಿಗೆ 5 ಎಕರೆ ಜಮೀನು, 1,200 ಅಡಿ ಒಳಗಿನ ಮನೆಗೆ ವಿದ್ಯುತ್ ಸಂಪರ್ಕ ಅನುಮತಿ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

ಕಂದಾಯಾಧಿಕಾರಿ ಧನಂಜಯ, ಕಂದಾಯ ನಿರೀಕ್ಷಕ ರಾಮಚಂದ್ರಪ್ಪ, ಕಚೇರಿ ವ್ಯವಸ್ಥಾಪಕಿ ಜಯಲಕ್ಷ್ಮಿ, ಸಿಬ್ಬಂದಿ, ಪುರಸಭೆ ಸದಸ್ಯರು ಇದ್ದರು.