ಮಲೇಬೆನ್ನೂರು: ಪಟ್ಟಣದ ಪುರಸಭೆ ವತಿಯಿಂದ ನಿರ್ಮಿಸಲು ಉದ್ದೇಶಿಸಿದ್ದ ಘನ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ವಿರೋಧಿಸಿ ಕೊಮಾರನಹಳ್ಳಿ ಗ್ರಾಮಸ್ಥರು ಶುಕ್ರವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಕಾರಣ ಜಿಲ್ಲಾಡಳಿತ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಿದೆ.

ಗ್ರಾಮಸ್ಥರು ಸಂತ ಸೇವಾಲಾಲ್ ಹಾಗೂ ಅಂಬೇಡ್ಕರ್ ಭಾವಚಿತ್ರದೊಂದಿಗೆ ಧರಣಿ ಆರಂಭಿಸಿದರು. ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಪೊಲೀಸ್ ರಕ್ಷಣೆಯಲ್ಲಿ ಕಾಮಗಾರಿ ಆರಂಭಿಸಿ ಭೂಮಿ ಅಗೆದು ಬುನಾದಿ ಹಾಗೂ ಕಬ್ಬಿಣದ ಸರಳಿನ ಕಂಬ ನಿಲ್ಲಿಸಿ ಕಾಂಕ್ರೀಟ್ ಹಾಕಿದರು.

‘ಪುರಸಭೆ ಕಚೇರಿ ಬೇಕಾದರೆ ನಿರ್ಮಿಸಿ, ಶಾಲೆ– ಕಾಲೇಜು, ವಸತಿ ನಿಲಯ ಸ್ಥಾಪಿಸಲು ಯಾವುದೇ ಅಡ್ಡಿ ಮಾಡುವುದಿಲ್ಲ. ಆದರೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಬೇಡಿ’ ಎಂದು ಐರಣಿ ಮಹೇಶ್ ಮನವಿ ಮಾಡಿದರು.

‘ಪಟ್ಟಣದಲ್ಲಿ ಗೋಮಾಳ ಜಮೀನು ಸಾಕಷ್ಟು ಇದ್ದು, ಅಲ್ಲಿ ಘಟಕ ಸ್ಥಾಪಿಸಿಕೊಳ್ಳಿ. ನಮ್ಮ ಊರಿನ ಗಡಿಗೆ ಕಸ ಹಾಕಬೇಡಿ. ನಮ್ಮ ಗಡಿ ರಕ್ಷಣೆ ನಮ್ಮ ಹಕ್ಕು’ ಎಂಬ ಭಿತ್ತಿ ಪತ್ರ ಅಂಟಿಸಿದರು.

ಉಪತಹಶೀಲ್ದಾರ್ ಆರ್.ರವಿ, ಗ್ರಾಮ ಆಡಳಿತಾಧಿಕಾರಿ ಅಣ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ರವಿಪ್ರಕಾಶ್, ಜೆಇ ರಾಘವೇಂದ್ರ, ಬಿಜೆಪಿ ಮುಖಂಡರಾದ ಹನಗವಾಡಿ ವೀರೇಶ್, ಚಂದ್ರಶೇಖರ್ ಪೂಜಾರ್, ಹಿಂಸಗಟ್ಟೆ ಲಿಂಗರಾಜ್ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.

ಜಗದೀಶ್ ನಾಯ್ಕ, ಪರಮೇಶ, ರಂಗನಾಥ, ಬಸವರಾಜ್, ಅಣ್ಣಪ್ಪ ನಾಯ್ಕ, ರಾಜಾ ನಾಯ್ಕ, ಮೀನಾಕ್ಷಿ ಬಾಯಿ, ಕಮಲಾಬಾಯಿ, ಸುಧಾಬಾಯಿ, ಸರೋಜಾಬಾಯಿ ಧರಣಿಯಲ್ಲಿ ಪಾಲ್ಗೊಂಡಿದ್ದರು. ಧರಣಿ ನಿರತ ಇಬ್ಬರು ಅಸ್ವಸ್ಥರಾದರು. ಬಿಸಿಲಿನ ಝಳದಿಂದ ಸುಸ್ತಾಗಿದ್ದವರನ್ನು ಮನೆಗೆ ಕಳುಹಿಸಿದರು.

ಪಿಎಸ್ಐ ಹಾರೂನ್ ಅಖ್ತರ್, ಶ್ರೀಪತಿ ಗಿನ್ನಿ, ಎಎಸ್ಐ ಶ್ರೀನಿವಾಸ್ ಸೇರಿ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.