ಮಲೇಬೆನ್ನೂರು: ಇಲ್ಲಿನ ಹಜರತ್ ಸೈಯದ್ ಹಬೀಬುಲ್ಲಾ ಶಾ ಖಾದ್ರಿ ಉರುಸ್ ಪ್ರಯುಕ್ತ ಗಂಧ (ಸಂದಲ್) ಮೆರವಣಿಗೆ ಬುಧವಾರ ಪಟ್ಟಣದ ಮುಖ್ಯಬೀದಿಗಳಲ್ಲಿ ವೈಭವದಿಂದ ನಡೆಯಿತು.

ಹಿಂದೂಗಳ ಮನೆಯಲ್ಲಿ ಶ್ರೀಗಂಧ ಪೂಜಿಸಿ ಪಡೆದ ಮುಸ್ಲಿಂ ಧರ್ಮಗುರುಗಳು ಹಾಗೂ ಆಯೋಜಕರು ಸಿಹಿ ವಿತರಿಸಿ ಭಾವೈಕ್ಯ ಮೆರೆದರು.

ದರ್ಗಾ ಷರೀಫ್ನಿಂದ ಆರಂಭವಾದ ಮೆರವಣಿಗೆ ಪಟ್ಟಣದ ಬೀದಿಗಳಲ್ಲಿ ಸಾಗಿತು. ಗಂಧದ ಮೆರವಣಿಗೆ ವೇಳೆ ಧೂಪದ ಸುವಾಸನೆ ಬಾಜಾ ಭಜಂತ್ರಿ, ಫಕೀರರ ಪವಾಡ, ಖಂಜರ ನಿನಾದ, ವಾದ್ಯವೃಂದ, ಯುವಕರ ನೃತ್ಯ, ಖುರಾನ್ ಪಠಣೆ ಜನಮನ ಸೆಳೆದವು.

ಉರುಸ್ ಸಮಿತಿ ಪದಾಧಿಕಾರಿಗಳು, ಮುಸ್ಲಿಂ ಸಮಾಜದ ಮುಖಂಡರು ಇದ್ದರು.

ಪಟ್ಟಣದಲ್ಲಿ ಜನ ಹಾಗೂ ವಾಹನ ಭರಾಟೆ ಹೆಚ್ಚಾಗಿತ್ತು. ಸಿಪಿಐ ಸುರೇಶ್ ಸಗರಿ, ಪಿಎಸ್ಐ ಹಾರೂನ್ ಅಖ್ತರ್ ನೇತೃತ್ವದಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದರು.

ಕವ್ವಾಲಿ ಇಂದು: ದರ್ಗಾ ಮೈದಾನದಲ್ಲಿ ಏ. 30ರಂದು ರಾತ್ರಿ ಕವ್ವಾಲಿ ಗಾಯನ ಕಾರ್ಯಕ್ರಮವಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-43-892804058

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.