ಮಲೇಬೆನ್ನೂರು: ಪಟ್ಟಣದ ಹೊರವಲಯದ ವೀರಭದ್ರೇಶ್ವರ ಮಹಾಕಾಳಿ ದೇವಾಲಯದಲ್ಲಿ ಈಚೆಗೆ ನಡೆದ ಕಲ್ಯಾಣೋತ್ಸವ ಜನಮನ ಸೆಳೆಯಿತು.

ವಿವಾಹ ಮಹೋತ್ಸವದ ಪೂಜಾ ವಿಧಾನಗಳಾದ ಮಂಟಪ ಪೂಜೆ, ನಾಂದಿ ನವಗ್ರಹ, ನಿಶ್ಚಿತಾರ್ಥ, ವರಪೂಜೆ, ಕಾಶಿಯಾತ್ರೆ, ಕಲ್ಯಾಣೋತ್ಸವ, ಪುಷ್ಪಹಾರ, ಹರಿದ್ರಾ ಕುಂಕುಮ ಅರ್ಚನೆ, ಗೌರಿಪೂಜೆ, ಮಾಂಗಲ್ಯ ಧಾರಣೆ, ಅರುಂಧತಿ ನಕ್ಷತ್ರ ದರ್ಶನ, ಆಶೀರ್ವಾದ, ಹೆಣ್ಣೊಪ್ಪಿಸುವುದು, ಬೀಗರ ಬೀಳ್ಕೊಡುಗೆ ಮೊದಲಾದ ವಿಧಿ ವಿಧಾನವನ್ನು ಸಸ್ವರ ವೇದಮಂತ್ರ ಪಠಣದೊಂದಿಗೆ ಯಥಾವತ್ತಾಗಿ ಪುರೋಹಿತರ ತಂಡದವರು ನೆರವೇರಿಸಿದರು.

ಪುಷ್ಪಾಲಂಕೃತ ತಳಿರು ತೋರಣ, ಝಗಮಗಿಸುವ ವಿದ್ಯುತ್ ದೀಪಾಲಂಕಾರದ ಮಂಟಪ, ಮಂಗಳವಾದ್ಯವು ಕಲ್ಯಾಣೋತ್ಸವದ ಮೆರುಗು ಹೆಚ್ಚಿಸಿದ್ದವು.

ಶ್ರೀ ಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣ ಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಉಪನ್ಯಾಸ ನೀಡಿದರು.

ಮುಖಂಡರಾದ ಬಿ.ಪಂಚಣ್ಣ, ಬಿ.ಚಿದಾನಂದಪ್ಪ, ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ದೇವರಮನೆ ಶಿವಕುಮಾರ್, ಎನ್.ಕೆ. ಬಸವರಾಜ್, ಬಿ. ನಾಗೇಶ್, ಬಿ. ಮಲ್ಲಿಕಾರ್ಜುನ, ಬಿ. ಉಮಾಶಂಕರ, ರುದ್ರೇಶ್, ಸತೀಶ್, ಹೊನ್ನಾಳಿ ಗಂಗಾಧರ್, ಶಂಭುಲಿಂಗಪ್ಪ, ಹೊಸಳ್ಳಿ ಕರಿಬಸಪ್ಪ, ಮಹಾದೇವಣ್ಣ, ಮಹಿಳೆಯರು, ಮಕ್ಕಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಧಾರವಾಡದ ನೃತ್ಯಪಟು ನಿಧಿ ಅಕ್ಕಿ ಭರತನಾಟ್ಯ ಪ್ರದರ್ಶಿಸಿದರು. ವಿವಾಹ ಮಹೋತ್ಸವಕ್ಕೆ ಬಂದವರಿಗೆ ತಿಂಡಿ, ತಂಪು ಪಾನೀಯ ಹಾಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-43-1280884494

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.