ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರಲಿಂಗೇಶ್ವರ ಕಾರ್ಣಿಕೋತ್ಸವ

‘ಭೂಲೋಕ ನಡುಗೀತು, ಭೂಮಿ ಬಾಯಿ ಬಿಟ್ಟೀತು, ಎಚ್ಚರ’
Last Updated 6 ಅಕ್ಟೋಬರ್ 2022, 6:07 IST
ಅಕ್ಷರ ಗಾತ್ರ

ಮಲೇಬೆನ್ನೂರು:ಪಟ್ಟಣದ ಬೀರಲಿಂಗೇಶ್ವರ ದೇವಾಲಯದಲ್ಲಿ ಬುಧವಾರ ವಿಜಯದಶಮಿ ಅಂಗವಾಗಿ ಕಾರ್ಣಿಕೋತ್ಸವ ನಡೆಯಿತು.

ದೇವರ ಆವಾಹಿತ ಗಣಮಗ ‘ಭೂಲೋಕ ನಡುಗೀತು, ಭೂಮಿ ಬಾಯಿ ಬಿಟ್ಟೀತು, ಎಚ್ಚರ’ ಎಂದು ಕಾರ್ಣಿಕ ನುಡಿದರು.

ದೇವಾಲಯದಲ್ಲಿ ‘ಮರಿಬನ್ನಿ’ ಉತ್ಸವ ನಡೆಯಿತು.ದೇವಾಲಯವನ್ನು ತಳಿರು ತೋರಣ, ಹೂ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ದೇವತೆಗಳ ಉತ್ಸವ ಮೂರ್ತಿಗಳು ಇದ್ದವು.

ಏಕನಾಥೇಶ್ವರಿ ದೇವಾಲಯದಲ್ಲಿ ಉತ್ಸವ:ಗ್ರಾಮದೇವತೆ ಏಕನಾಥೇಶ್ವರಿ (ಹೊರಗಿನಮ್ಮ) ದೇವಾಲಯದಲ್ಲಿ ವಿಜಯ ದಶಮಿ ಅಂಗವಾಗಿಹೂವಿನ ಬಾಣಬಿಟ್ಟು ಅಂಬುಛೇದನ ನೆರವೇರಿಸಲಾಯಿತು. ಗ್ರಾಮದ ಏಕನಾಥೇಶ್ವರಿ, ಕೋಡಿಮಾರೇಶ್ವರಿ, ಹಟ್ಟಿ ದುರ್ಗಮ್ಮ, ಕಾಳಮ್ಮ, ಜೋಡಿ ಆಂಜನೇಯ, ಬಸವೇಶ್ವರ, ಬೀರಲಿಂಗೇಶ್ವರ ಉತ್ಸವಮೂರ್ತಿ ಪಾಲ್ಗೊಂಡಿದ್ದವು.

ಬನ್ನಿವೃಕ್ಷಕ್ಕೆ ಸಲ್ಲಿಸಿ ಪೂಜೆ ಸಲ್ಲಿಸಿದ ನಂತರ ರೈತರು ಬೆಳೆ ಸಮರ್ಪಿಸಿದರು. ಕಿರಿಯರು ಹಿರಿಯರಿಗೆ ಬನ್ನಿಪತ್ರೆ ಕೊಟ್ಟು ಆಶೀರ್ವಾದ ಪಡೆದರು.

ಬನ್ನಿಮುಡಿಯಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಸರ್ವ ದೇವರ ರಾಜಬೀದಿ ಉತ್ಸವ
ದೊಂದಿಗೆ ದಸರಾ ಮಹೋತ್ಸವಕ್ಕೆತೆರೆ ಬಿದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT