ಮಲೇಬೆನ್ನೂರು: ಸಮೀಪದ ಕುಂಬಳೂರಿನ ಧಾರ್ಮಿಕದತ್ತಿ ಇಲಾಖೆಗೆ ಸೇರಿದ ಹನುಮಂತ ದೇವರ ಬ್ರಹ್ಮ ರಥೋತ್ಸವ ಗುರುವಾರ ಅದ್ದೂರಿಯಾಗಿ ನಡೆಯಿತು.

ಮಂಗಳವಾದ್ಯಗಳೊಂದಿಗೆ ಬ್ರಾಹ್ಮಿ ಸಮಯದಲ್ಲಿ ಆನೆ ಉತ್ಸವ ನಡೆಯಿತು. ಉತ್ಸವ ಮೂರ್ತಿಯ ಗ್ರಾಮ ಪ್ರದಕ್ಷಿಣೆ, ಹರಿಸೇವೆ, ಅಷ್ಟ ದಿಕ್ಕುಗಳಿಗೆ ಬಲಿದಾನದ ನಂತರ ಉತ್ಸವಮೂರ್ತಿಯ ರಥಾರೋಹಣವಾಯಿತು.

ಉಪತಹಶೀಲ್ದಾರ್ ಆರ್. ರವಿ, ಗ್ರಾಮ ಆಡಳಿತ ಅಧಿಕಾರಿ ಶ್ರೀಧರ್, ಕಂದಾಯ ನಿರೀಕ್ಷಕ ಎಚ್.ಎಲ್. ಆನಂದ್, ಅರ್ಚಕ ವೃಂದದವರು ಹಾಗೂ ಗ್ರಾಮದ ಮುಖಂಡರು ರಥಪೂಜೆ ನೆರವೇರಿಸಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಮಾಜಿ ಶಾಸಕ ಎಸ್.ರಾಮಪ್ಪ ದೇವರ ದರ್ಶನ ಪಡೆದರು.

ಭಕ್ತ ಸಮೂಹ ‘ರಾಮ ರಾಮ ಗೋವಿಂದ’ ಎಂದು ಉದ್ಘೋಷ ಕೂಗುತ್ತ ತೇರನ್ನು ಎಳೆಯಿತು. ಬಸವೇ ಶ್ವರ, ಬೀರಲಿಂಗೇಶ್ವರ ದೇವತೆ ಉತ್ಸವಮೂರ್ತಿಗಳು ಹಾಜರಿದ್ದವು. ಡೊಳ್ಳು, ನಾಸಿಕ್ ಡೋಲು, ಸಮಾಳ, ಚಕ್ರವಾದ್ಯ, ಹಲಗೆ ಮೇಳ, ಭಜಂತ್ರಿ, ತಮಟೆ ಹಾಗೂ ಭಜನಾ ತಂಡಗಳು ಉತ್ಸವಕ್ಕೆ ಕಳೆ ತಂದಿದ್ದವು.

ದೇವಾಲಯವನ್ನು ವಿದ್ಯುತ್ ದೀಪಗಳಿಂದ ಹಾಗೂ ರಥವನ್ನು ಹೂ, ಧ್ವಜ ಪತಾಕೆಗಳಿಂದ ಅಲಂಕರಿಸಲಾಗಿತ್ತು. ಹರಕೆ ಹೊತ್ತವರು, ಬಾಯಿ ಬೀಗ ದಿಂಡು, ಉರುಳು ಸಮರ್ಪಣೆ ಮಾಡಿದರು.

ಮುಳ್ಳೋತ್ಸವ: ದೇವಾಲಯದ ಆವರಣದಲ್ಲಿ ಮಾರ್ಚ್ 6ರಂದು ಸಂಜೆ ಮುಳ್ಳೋತ್ಸವ, ಭೂತ ಸೇವೆ ನಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260306-43-934553738

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.