ಮಲೇಬೆನ್ನೂರು: ಪಟ್ಟಣದ ಆಶ್ರಯ ಕಾಲೊನಿಯಲ್ಲಿರುವ ಪುರಸಭೆಯ ಏಕೈಕ ಉದ್ಯಾನವು ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದಾಗ ನವಗ್ರಾಮ ನಿರ್ಮಾಣದ ವೇಳೆ ಸ್ವಲ್ಪ ಜಾಗವನ್ನು ಉದ್ಯಾನಕ್ಕೆ ಮೀಸಲಿಡಲಾಗಿತ್ತು. ಪುರಸಭೆ ಆಡಳಿತಕ್ಕೆ ಒಳಪಟ್ಟ ಬಳಿಕ 2020-21ನೇ ಸಾಲಿನಲ್ಲಿ 15ನೇ ಹಣಕಾಸು ಅನುದಾನದಡಿ ₹ 18.3 ಲಕ್ಷ ಅನುದಾನದಲ್ಲಿ ಕಬ್ಬಿಣದ ರಕ್ಷಣಾ ಗೋಡೆ, ಪ್ರವೇಶ ದ್ವಾರ, ಪಾದಚಾರಿ ಮಾರ್ಗ, ಬೆಂಚ್ಗಳನ್ನು ಅಳವಡಿಸಿ ಅಭಿವೃದ್ಧಿಪಡಿಸಲಾಗಿತ್ತು.

₹ 5 ಲಕ್ಷ ವೆಚ್ಚದಲ್ಲಿ ಮಕ್ಕಳಿಗೆ ಆಟವಾಡಲು ತಿರುಗುವ ಕುರ್ಚಿ, ಜೋಕಾಲಿ, ಜಾರುಬಂಡಿ ಸೇರಿದಂತೆ ವಿವಿಧ ಕ್ರೀಡಾ ಪರಿಕರಗಳನ್ನೂ ಅಳವಡಿಸಲಾಗಿತ್ತು.

ಉದ್ಯಾನವನ್ನು ಸುಂದರವಾಗಿ ರೂಪಿಸಿದ್ದರೂ ಅದಕ್ಕೆ ಉದ್ಘಾಟನಾ ಭಾಗ್ಯ ಸಿಕ್ಕಿಲ್ಲ. ನಿರ್ವಹಣೆ ಕೊರತೆಯಿಂದ ಕಸಕಡ್ಡಿ, ತ್ಯಾಜ್ಯವಸ್ತುಗಳು ಉದ್ಯಾನದ ಎಲ್ಲೆಂದರಲ್ಲಿ ಜಮಾವಣೆಗೊಂಡಿವೆ. ಉದ್ಯಾನದಲ್ಲಿ ನೀರಿನ ಸೌಕರ್ಯ ಇದ್ದರೂ ಗಿಡ, ಮರ ಹುಲ್ಲಿನ ಹಾಸು ಬೆಳೆಸದಿರುವುದು ವಿಪರ್ಯಾಸ. ಆಟಿಕೆ ವಸ್ತುಗಳು ನೆಲಕಚ್ಚಿವೆ. ಗೊಂಬೆಗಳನ್ನು ಕಿಡಿಗೇಡಿಗಳು ಹಾಳುಗೆಡವಿದ್ದು ಎಲ್ಲೆಂದರಲ್ಲಿ ಬಿದ್ದಿವೆ. ಕಬ್ಬಿಣದ ಪರಿಕರಗಳು ತುಕ್ಕು ಹಿಡಿಯುತ್ತಿದ್ದು, ಆಟಿಕೆಗಳು ಬಣ್ಣ ಕಳೆದುಕೊಳ್ಳುತ್ತಿವೆ.

‘ಉದ್ಯಾನ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿದೆ. ಒಳಗಡೆ ಇರುವ ಹೈಮಾಸ್ಟ್ ದೀಪ ಬೆಳಗುತ್ತಿಲ್ಲ. ಪುರಸಭೆ ಗಮನಹರಿಸಬೇಕು’ ಎಂದು ಸ್ಥಳೀಯ ನಿವಾಸಿ ಗೌಸ್ ಪೀರ್ ಒತ್ತಾಯಿಸಿದ್ದಾರೆ.

ಮುಂಭಾಗದಲ್ಲಿ ಮೋರಿ ಇಲ್ಲದ ಕಾರಣ ಮಳೆ ನೀರು, ಕಸಕಡ್ಡಿ, ಮುಳ್ಳುಕಂಟಿಗಳು ಉದ್ಯಾನಕ್ಕೆ ನುಗ್ಗಿದ ನಂತರ ಪಕ್ಕದಲ್ಲಿರುವ ಶಾಲೆಯ ಆವರಣದ ಒಳಗೆ ನುಗ್ಗುತ್ತದೆ. ಬೇಸಿಗೆಯಲ್ಲಿ ಶಾಲೆಗೆ ರಜೆ ಇದ್ದು, ಕಸಕಡ್ಡಿ ನಡುವೆಯೇ ಜೋಕಾಲಿ, ಜಾರುಬಂಡಿಯಲ್ಲಿ ವಿದ್ಯಾರ್ಥಿಗಳು ಆಟವಾಡುವ ಸ್ಥಿತಿ ನಿರ್ಮಾಣವಾಗಿದೆ. ಉದ್ಯಾನ ನಿರ್ವಹಣೆಗೆ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

‘ಉದ್ಯಾನದ ಪರಿಸರ ಚೆನ್ನಾಗಿದೆ. ಅಭಿವೃದ್ಧಿ ಮಾಡಿದರೆ ಮಕ್ಕಳು, ಹಿರಿಯರಿಗೆ ಅನುಕೂಲವಾಗುತ್ತದೆ’ ಎಂದು ಸ್ಥಳೀಯ ನಿವಾಸಿ ಇರ್ಫಾನ್ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-43-1509422085

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.