ಮಲೇಬೆನ್ನೂರು: ಪಟ್ಟಣದ ಪೊಲೀಸ್ ಠಾಣೆ ಮೇಲೆ ಸೋಮವಾರ ಸಂಜೆ ಹೆಜ್ಜೇನು ಹುಳುಗಳು ಏಕಾಏಕಿ ದಾಳಿ ನಡೆಸಿ ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ಹೆಜ್ಜೇನುಗಳ ಹಿಂಡು ಗುಂಯ್ ಗುಟ್ಟುತ್ತ ಬಂದಿದ್ದನ್ನು ಕಂಡು ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದರು. ಕೆಲವೇ ಸಮಯದಲ್ಲಿ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದೀಪ ಆರಿಸಿ ಕಿಟಕಿ, ಬಾಗಿಲು ಹಾಕಿ ಹೊರಕ್ಕೆ ಬಂದಿದ್ದಾರೆ. ಇದರಿಂದಾಗಿ ಪೊಲೀಸ್ ಠಾಣೆಯಲ್ಲಿ ಕೆಲಕಾಲ ಕೆಲಸ ಸ್ಥಗಿತಗೊಳಿಸಲಾಗಿತ್ತು.

ಕಟ್ಟಡದ ಒಳಗೆ ಜಮಾವಣೆಯಾಗಿದ್ದ ಹುಳುಗಳು ಊದಿನಕಡ್ಡಿ ಹಚ್ಚಿದ್ದರಿಂದ ಹಾರಿ ಹೋಗಿವೆ.

‘ಜೇನಿನ ಹುಳು ತಂಪಾಗಿರುವ ಸ್ಥಳಕ್ಕೆ ಬರಲು ಮುಖ್ಯ ಕಾರಣ ಬಿಸಿಲ ಝಳ, ಗಾಳಿ’ ಎಂದು ಹಿರಿಯರೊಬ್ಬರು ಅಭಿಪ್ರಾಯಪಟ್ಟರು.

‘ಠಾಣೆಯಲ್ಲಿ ಉದ್ಯಾನ ಇರುವ ಕಾರಣ ತಂಪನ್ನರಸಿ ಬಂದಿವೆ. ಕಟ್ಟಡಕ್ಕೆ ಚಾವಣಿ ಅಳವಡಿಸಿದ ಕಾರಣ ಒಳಗೂ ತಂಪಾಗಿದೆ. ಹೀಗಾಗಿ ಬಂದಿವೆ. ಅವುಗಳಿಗೆ ಯಾರಾದರೂ ತೊಂದರೆ ನೀಡಿದರೆ ಮಾತ್ರ ದಾಳಿ ನಡೆಸುತ್ತವೆ. ಜೇನು ಹುಳು ಬರುವುದು ಶುಭ ಸಂಕೇತ’ ಎಂದರು.

‘ಸಂಜೆ ವೇಳೆ ಸಮಸ್ಯೆ ಹೇಳಿಕೊಂಡು ಠಾಣೆಗೆ ಸಾರ್ವಜನಿಕರು ಬರುವುದು ಹೆಚ್ಚು. ಈ ಸಮಯದಲ್ಲಿ ಜೇನು ಹುಳುಗಳು ಬಂದಿದ್ದರೂ ಯಾರಿಗೂ ತೊಂದರೆ ಮಾಡಿಲ್ಲ’ ಎಂದು ಪಿಎಸ್ಐ ಹಾರೂನ್ ಅಖ್ತರ್ ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-43-33260600

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.