ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಯ ಮನೆ ಉಳಿಸಿಕೊಡಲು ಮಳಲಹಳ್ಳಿ ಗ್ರಾಮಸ್ಥರ ಮನವಿ

Last Updated 6 ಮಾರ್ಚ್ 2021, 15:59 IST
ಅಕ್ಷರ ಗಾತ್ರ

ದಾವಣಗೆರೆ: ಸರ್ಕಾರ ನೀಡಿರುವ ಆಶ್ರಯ ಮನೆಗಳನ್ನು ಹಿಂದೆ ಭೂಮಿ ನೀಡಿದ್ದ ಖಾಸಗಿ ವ್ಯಕ್ತಿ ತೆರವುಗೊಳಿಸುವ ಬೆದರಿಕೆ ಹಾಕುತ್ತಿದ್ದಾರೆ. ಆಶ್ರಯ ಮನೆಗಳನ್ನು ಉಳಿಸಿಕೊಡಿ ಎಂದು ಹರಿಹರ ತಾಲ್ಲೂಕಿನ ಮಳಲಹಳ್ಳಿ ಗ್ರಾಮಸ್ಥರು ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ಅವರಿಗೆ ಮನವಿ ಸಲ್ಲಿಸಿದರು.

ಎಳೇಹೊಳೆ ಗ್ರಾಮ ಪಂಚಾಯಾತಿ ವ್ಯಾಪ್ತಿಗೆ ಸೇರಿರುವ ಮಳಲಹಳ್ಳಿ ಗ್ರಾಮದಲ್ಲಿ 1974-75 ನೇ ಸಾಲಿನಲ್ಲಿ 1 ಎಕರೆ 5 ಗುಂಟೆ ಜಮೀನನ್ನು ಆಶ್ರಯ ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಬಡ ನಿವೇಶನ ರಹಿತರಿಗೆ 33 ಮನೆಗಳನ್ನು 33 ಫಲಾನುಭವಿಗಳಿಗೆ ಹಂಚಿಕೆ ಮಾಡಿ ಹಕ್ಕು ಪ್ರತಗಳನ್ನು ನೀಡಲಾಗಿತ್ತು. ಆಶ್ರಯ ಯೋಜನೆ ಅಡಿಯಲ್ಲಿ ಕಟ್ಟಿಸಿಕೊಡಲಾಗಿತ್ತು. ಆದರೆ ಈಗ ಎಳೇಹೊಳೆ ಗ್ರಾಮದ ಎಂ. ಓಂಕಾಪ್ಪ ಮತ್ತು ಸಹೋದರರು ನ್ಯಾಯಾಲಯಕ್ಕೆ ದೂರುಕೊಟ್ಟು ಈಗ ನಮ್ಮ ಮನೆಗಳನ್ನು ತೆರವುಗೊಳಿಸಲಿಕ್ಕೆ ಆದೇಶವನ್ನು ತಂದಿದ್ದಾರೆ . ಪದೇ ಪದೇ ಮನೆಗಳನ್ನು ಖಾಲಿ ಮಾಡಿ ಎಂದು ಕಿರುಕುಳ ಕೊಡುತ್ತಿದ್ದಾರೆ ಎಂದು ದೂರಿದರು.

ನ್ಯಾಯ ಸಿಗದೇ ಹೋದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಬೇವಿನಹಳ್ಳಿ ಮಹೇಶ್, ಎಸ್.‌ ಗದಿಗೆಪ್ಪ, ಮಮತಾ, ಗುತ್ತೆಮ್ಮ, ಗಿರಿಯಪ್ಪ, ಮಲ್ಲಮ್ಮ, ಭಾಗ್ಯಮ್ಮ, ಯಲ್ಲಮ್ಮ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT