ಮಲೇಬೆನ್ನೂರು: ಸಮಾಜದಲ್ಲಿ ದುಷ್ಟ ಶಕ್ತಿಗಳು ಬೆಳೆದಷ್ಟೇ ವೇಗದಲ್ಲಿ ನಾಶ ಹೊಂದುತ್ತವೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಪಟ್ಟಣದ ವೀರಭದ್ರೇಶ್ವರ ಮಹಾಕಾಳಿ ದೇವಾಲಯದ 5ನೇ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.

ಶಾಂತಿ ಸಮಾಧಾನ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಆಧುನಿಕತೆಯ ಭರಾಟೆಯಲ್ಲಿ ನಾಗರಿಕತೆ ಹೆಸರಿನಲ್ಲಿ ಸಂಸ್ಕೃತಿಯನ್ನು ನಾಶ ಮಾಡಬೇಡಿ ಎಂದರು.

‘ಧರ್ಮ, ಸಂಸ್ಕೃತಿ ಪರಿಪಾಲನೆ ಮಾಡಿದಾಗ ಮಾನವ ಜೀವನ ಸಂಕಷ್ಟಗಳಿಗೆ ಸಿಲುಕುವುದಿಲ್ಲ. ಎಲ್ಲಾ ವರ್ಗದವರೂ ಸಾಮರಸ್ಯದಿಂದ ಬಾಳಬೇಕು. ಜನ ಧರ್ಮಕಾರ್ಯಗಳಿಗೆ ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಬಾಳೆಹೊನ್ನೂರು ಧರ್ಮಪೀಠದಲ್ಲಿ 51 ಅಡಿಯ ಜಗದ್ಗುರು ರೇಣುಕಾಚಾರ್ಯರ ಶಿಲಾಮೂರ್ತಿ ನಿರ್ಮಾಣವಾಗುತ್ತಿದೆ. ಆಂಧ್ರಪ್ರದೇಶದ ಮಡಕಶಿರಾದಿಂದ ಶಿಲೆಗಳು ರಂಭಾಪುರಿಗೆ ಬಂದಿವೆ ಎಂದು ತಿಳಿಸಿದರು.

₹ 12 ಕೋಟಿ ವೆಚ್ಚದ ಯೋಜನೆಗೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ₹ 5 ಕೋಟಿ ಅನುದಾನ ನೀಡಿದ್ದರು. ನಂತರದ ಸರ್ಕಾರಗಳು ಅನುದಾನ ನೀಡಲಿಲ್ಲ. ಆದರೆ ದಾನಿಗಳು, ಭಕ್ತರ ಸಹಕಾರದಿಂದ ಕೆಲಸ ಮುಂದುವರೆದಿದೆ ಎಂದರು.

ಟ್ರಸ್ಟಿ ಬಿ. ಚಿದಾನಂದಪ್ಪ ಸ್ವಾಗತಿಸಿದರು, ಟ್ರಸ್ಟ್ ಪದಾಧಿಕಾರಿಗಳು, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹಾಗೂ ಭಕ್ತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-43-1441053399

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.