ಮಲೇಬೆನ್ನೂರು: ಪಟ್ಟಣದ 23ನೇ ವಿಭಾಗದ ಆಶ್ರಯ ಕಾಲೊನಿ ಉದ್ಯಾನದ ಅಭಿವೃದ್ಧಿ ಕಾರ್ಯವನ್ನು ಪುರಸಭೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ವಸಹಾಯ ಗುಂಪಿನ ಸದಸ್ಯರು ಗುರುವಾರ ಆರಂಭಿಸಿದರು.

ಉದ್ಯಾನದ ಅವ್ಯವಸ್ಥೆ ಕುರಿತು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಅಮೃತ್ 2.0 ಯೋಜನೆಯಡಿ ಅಮೃತ್ ಮಿತ್ರ ಕಾರ್ಯಕ್ರಮದ ಡೇ ನಲ್ಮ್ ಅಭಿಯಾನದಡಿ ಏಕನಾಥೇಶ್ವರಿ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು ಗಿಡಗಂಟಿ ತೆರವು ಹಾಗೂ ಸ್ವಚ್ಛತಾ ಕೆಲಸ ಕೈಗೊಂಡರು.

ಪುರಸಭೆ ಕಂದಾಯಾ ಧಿಕಾರಿ ಧನಂಜಯ ಕಟ್ಟೀಮನಿ, ಕಚೇರಿ ವ್ಯವಸ್ಥಾಪಕ ಶಿವಕುಮಾರ್, ಕಿರಿಯ ಎಂಜಿನಿಯರ್ಗಳಾದ ರಾಘವೇಂದ್ರ, ನಾಗರಾಜ್, ಹಿರಿಯ ಆರೋಗ್ಯ ನಿರೀಕ್ಷಕ ಅವಿನಾಶ್, ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ರೂಪಾ, ರುಕ್ಸಾನಾ, ಪುರಸಭೆ ಮಾಜಿ ಸದಸ್ಯ ಭಾನುವಳ್ಳಿ ಸುರೇಶ್ ಇದ್ದರು.

ಪುರಸಭೆ ಮುಖ್ಯಾಧಿಕಾರಿ ಎಂ. ಎಚ್. ರವಿಪ್ರಕಾಶ್ ‘ಪ್ರಜಾವಾಣಿ’ ಜತೆ ಮಾತನಾಡಿ, ‘₹10 ಲಕ್ಷ ಅನುದಾನದಲ್ಲಿ ಉದ್ಯಾನ ಅಭಿವೃದ್ಧಿಗೆ ನಿರ್ಧರಿಸಿದ್ದು, ಸ್ವಸಹಾಯ ಗುಂಪಿಗೆ ಕಾರ್ಯಾದೇಶ ನೀಡಲಾಗಿದೆ. ಮಳೆಗಾಲದ ವೇಳೆಗೆ ಹಸೀರಿಕರಣ, ಆಟೋಪಕರಣ, ಹೈ ಮಾಸ್ಟ್ ದೀಪ ದುರಸ್ತಿ, ಹಸಿರು ಹಾಸು ಬೆಳೆಸುವುದು ಮೊದಲಾದ ಅಭಿವೃದ್ಧಿ ಕೆಲಸ ಪೂರ್ಣಗೊಳಿಸಲಾಗುವುದು’ ಎಂದರು.

ಏಕಾಏಕಿ ಪುರಸಭೆ ಸಿಬ್ಬಂದಿ ಆಗಮಿಸಿ ಕೆಲಸ ಆರಂಭಿಸಿದ್ದನ್ನು ಕಂಡ ನಾಗರಿಕರು ಹರ್ಷ ವ್ಯಕ್ತಪಡಿಸಿದರು. ಉದ್ಯಾನ ಕಾಪಾಡುವ ಭರವಸೆ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-43-548516412

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.