ಮಾಮ್ಕೋಸ್: ₹562 ಕೋಟಿ ವಹಿವಾಟು

7
ಚನ್ನಗಿರಿ: ಷೇರುದಾರರ ಸಭೆಯಲ್ಲಿ ಉಪಾಧ್ಯಕ್ಷ ವೈ.ಎಸ್. ಸುಬ್ರಹ್ಮಣ್ಯ ಹೇಳಿಕೆ

ಮಾಮ್ಕೋಸ್: ₹562 ಕೋಟಿ ವಹಿವಾಟು

Published:
Updated:
Deccan Herald

ಚನ್ನಗಿರಿ: ಕೇವಲ ₹16 ಸಾವಿರ ಮೂಲ ಬಂಡವಾಳದಿಂದ ಆರಂಭಗೊಂಡ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ, ಇಂದು ಪ್ರತಿ ವರ್ಷ ₹562 ಕೋಟಿ ಅಡಿಕೆ ವಹಿವಾಟು ನಡೆಸುವ ಪ್ರಮುಖ ಸಹಕಾರ ಸಂಘವಾಗಿ ಹೊರಹೊಮ್ಮಿದೆ. ಅಡಿಕೆ ಬೆಳೆಗಾರರ ಹಿತ ಕಾಪಾಡುವುದು ಈ ಸಂಘದ ಮುಖ್ಯ ಧ್ಯೇಯ ಎಂದು ಶಿವಮೊಗ್ಗದ ಮ್ಯಾಮ್ಕೋಸ್ ಉಪಾಧ್ಯಕ್ಷ ವೈ.ಎಸ್. ಸುಬ್ರಹ್ಮಣ್ಯ ತಿಳಿಸಿದರು.

ಪಟ್ಟಣದ ಮ್ಯಾಮ್ಕೋಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಚನ್ನಗಿರಿ ಶಾಖಾ ವ್ಯಾಪ್ತಿಯ ಷೇರುದಾರರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಸಾಲ ಮನ್ನಾ ಯೋಜನೆಯಿಂದಾಗಿ ಸಾಲ ಪಡೆದುಕೊಂಡಿರುವ ರೈತರು ಮರುಪಾವತಿ ಮಾಡದೇ ಇರುವುದರಿಂದ ಪ್ರಸಕ್ತ ಸಾಲಿನಲ್ಲಿ ಕೇವಲ ₹45 ಕೋಟಿ ಸಾಲ ಮರುಪಾವತಿಯಾಗಿದೆ. ಈ ಸಂಸ್ಥೆ ಸಾಲಮನ್ನಾ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ಸಾಲವನ್ನು ತೆಗೆದುಕೊಂಡಿರುವ ರೈತರು ಸಾಲವನ್ನು ಮರುಪಾವತಿ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಪ್ರಸಕ್ತ ಸಾಲಿನಲ್ಲಿ ಅಡಿಕೆ ಖರೀದಿಯನ್ನು ಸಂಸ್ಥೆ ಆರಂಭಿಸಿದ್ದು, ದರ ಕುಸಿತದಿಂದ ಬೆಳೆಗಾರರು ಅಡಿಕೆ ಮಾರಾಟ ಮಾಡಲು ಮುಂದಾಗದೇ ಇರುವುದರಿಂದ ಇದುವರೆಗೆ ಕೇವಲ 100 ಮೂಟೆಗಳಷ್ಟು ಖರೀದಿ ಮಾಡಲಾಗಿದೆ. ಸಂಘದ ಸದಸ್ಯರಿಗೆ ಯಶಸ್ವಿನಿ, ಗುಂಪು ವಿಮೆ ಯೋಜನೆಯನ್ನು ಜಾರಿಗೊಳಿಸಿದ್ದು, ಸಂಘದ ಸದಸ್ಯರ ಕುಟುಂಬದ ಆರೋಗ್ಯ ಕಾಪಾಡುವ ಸಲುವಾಗಿ ಸಂಘದಿಂದ ಉಚಿತ ತಪಾಸಣೆ, ನೇತ್ರ ಚಿಕಿತ್ಸಾ ಶಿಬಿರಗಳನ್ನು ಪ್ರತಿ ವರ್ಷ ನಡೆಸಲಾಗುತ್ತಿದೆ. ಹಾಗೆಯೇ ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ₹2.500 ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.

ನಿರ್ದೇಶಕರಾದ ಕೆ. ನರಸಿಂಹ ನಾಯಕ್, ಜಿ.ಆರ್. ವೆಂಕಪ್ಪ, ವಿರೂಪಾಕ್ಷಪ್ಪ, ಅಶೋಕ ನಾಯಕ, ಭೀಮಾರಾವ್, ಮಹೇಶ್, ಶಶಿಧರ, ನರೇಂದ್ರ, ದೇವಾನಂದ್, ಮಾರತಾಂಡೆ, ಜಯಶ್ರೀ, ವಿಜಯಲಕ್ಷ್ಮಿ, ನಾಗೇಶ್ ರಾವ್, ಬಡಿಯಣ್ಣ, ಸುರೇಶ್ ಚಂದ್ರ, ರಾಘವೇಂದ್ರ ರಾವ್ ಉಪಸ್ಥಿತರಿದ್ದರು.

₹ 7.12 ಕೋಟಿ - ಷೇರು ಬಂಡವಾಳ

24,605 - ಸದಸ್ಯರು

₹169 ಕೋಟಿ - ಸಾಲ

₹118 ಕೋಟಿ - ಠೇವಣಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !