ಗುರುವಾರ , ಅಕ್ಟೋಬರ್ 1, 2020
27 °C

ಪ್ರಧಾನಿ, ಗೃಹ ಸಚಿವರಿಗೆ ಫೇಸ್‌ಬುಕ್‌ನಲ್ಲಿ ಅವಹೇಳನ ಮಾಡಿದ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಫೇಸ್‌ಬುಕ್‌ನಲ್ಲಿ ಅಶ್ಲೀಲ, ಅಸಹ್ಯ ಫೋಟೊಗಳನ್ನು ಶೇರ್ ಮಾಡಿರುವ ಆರೋಪದ ಮೇಲೆ ಒಬ್ಬನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಹೊನ್ನಾಳಿ ತಾಲ್ಲೂಕಿನ ಬೈರನಹಳ್ಳಿ ಗ್ರಾಮದ ನವೀನ ಜಿ.ಎಚ್. ಬಂಧಿತ.  ಈ ಮೂವರೂ ನಾಯಕರ ಭಾವಚಿತ್ರಗಳನ್ನು ಎಡಿಟ್ ಮಾಡಿ ಬೇರೆ ಬೇರೆ ಪ್ರಾಣಿಗಳು ಹಾಗೂ ಮಹಿಳೆಯರ ಅಶ್ಲೀಲವಾದ ಫೋಟೊಗಳನ್ನು ಅಂಟಿಸಿ ಫೇಸ್‌ಬುಕ್‌ನಲ್ಲಿ ಈತ ಅಪ್‌ಲೋಡ್ ಮಾಡಿದ್ದ. 

ಶಿವಮೂರ್ತಿ ಎಂಬವರು ನೀಡಿದ ದೂರಿನ ಮೇರೆಗೆ ಸಿಇಎನ್‌ ಠಾಣೆಯ ಪೊಲೀಸರು ನವೀನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು