ಸೋಮವಾರ, ಜೂನ್ 1, 2020
27 °C

ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಪೊಲೀಸರಿಂದ ಮಂಗಳಾರತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ದಾವಣಗೆರೆ: ಲಾಕ್‌ಡೌನ್ ಅದೇಶವನ್ನು ಉಲ್ಲಂಘಿಸಿ ಹೊರ ಬಂದ ವಾಹನ ಸವಾರರಿಗೆ ನಗರದ ಟ್ರಾಫಿಕ್ ಪೊಲೀಸರು ಮಂಗಳಾರತಿ ಮಾಡಿ ಮನೆಯಿಂದ ಹೊರ ಬಾರದಂತೆ ವಿನೂತನವಾಗಿ ಜಾಗೃತಿ ಮೂಡಿಸಿದರು.

ಲಾಠಿ ಚಾರ್ಜ್‌ ಮಾಡಿ, ಕೈಮುಗಿದು ‌ಕೇಳಿಕೊಂಡರೂ ತಲೆಕೆಡಿಸಿಕೊಳ್ಳದ ಸವಾರರಿಗೆ ಪೊಲೀಸರು ನಗರದ ಕೆಎಸ್ಆರ್‌ಟಿಸಿ ಮುಂಭಾಗ ವಾಹನಗಳನ್ನು ತಡೆದು ಆರತಿ ಬೆಳಗಿ ತಿಲಕವಿಟ್ಟು, ಕೈ ಮುಗಿದು ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಮಹಿಳಾ ಪೊಲೀಸರು ಮುಂದಾದರು.

‌ತರಕಾರಿಗಳು ಮನೆ ಬಳಿಗೆ ಬರುವಂತೆ ವ್ಯವಸ್ಥೆ ಮಾಡಿದರೂ ಮಾರುಕಟ್ಟೆಗೆ ಜನರು ಬರುತ್ತಿದ್ದಾರೆ. ಸುಖಾಸುಮ್ಮನೆ ರಸ್ತೆಯಲ್ಲಿ ಓಡಾಡುವರಿಗೂ ಆರತಿ ಬೆಳಗಿ ಮನೆಯಿಂದ ಹೊರ ಬರಬೇಡಿ, ಆರೋಗ್ಯ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದರು.

ದಕ್ಷಿಣ ಸಂಚಾರ ಠಾಣೆಯ ಎಸ್‌ಐ ಮಂಜುನಾಥ್ ರೆಡ್ಡಿ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು