ದಾವಣಗೆರೆ ಕ್ಷೇತ್ರ: ಮೊದಲ ಸುತ್ತಿನಿಂದಲೇ ಸಿದ್ದೇಶ್ವರ ಗೆಲುವಿನ ಓಟ

ಬುಧವಾರ, ಜೂನ್ 26, 2019
24 °C

ದಾವಣಗೆರೆ ಕ್ಷೇತ್ರ: ಮೊದಲ ಸುತ್ತಿನಿಂದಲೇ ಸಿದ್ದೇಶ್ವರ ಗೆಲುವಿನ ಓಟ

Published:
Updated:

ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ ಅವರು ಸಮೀಪ ಪ್ರತಿಸ್ಪರ್ಧಿ, ಕಾಂಗ್ರೆಸ್‌ನ ಎಚ್‌.ಬಿ. ಮಂಜಪ್ಪ ವಿರುದ್ಧ 1,69,702 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ನಾಲ್ಕನೇ ಬಾರಿಗೆ ಸಂಸತ್‌ ಭವನ ಪ್ರವೇಶಿಸುತ್ತಿದ್ದಾರೆ.

ತೋಳಹುಣಸೆಯಲ್ಲಿನ ದಾವಣಗೆರೆ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ಮುಂಜಾನೆ ಎಂಟು ಗಂಟೆಗೆ ಆರಂಭಗೊಂಡ ಮತ ಎಣಿಕೆಯಲ್ಲಿ ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಬಿಜೆಪಿಯ ಜಿ.ಎಂ. ಸಿದ್ದೇಶ್ವರ ಅವರ ಮುನ್ನಡೆಯ ಓಟ ಗೆಲುವಿನ ಗುರಿಯತ್ತ ಸಾಗಿತ್ತು. ಸಿದ್ದೇಶ್ವರ ಅವರು 6,52,996 ಮತಗಳನ್ನು ಪಡೆದರೆ, ಮಂಜಪ್ಪ 4,83,294 ಮತ ಪಡೆದಿದ್ದಾರೆ.

ಚುನಾವಣಾಧಿಕಾರಿ ಜಿ.ಎನ್‌. ಶಿವಮೂರ್ತಿ ಹಾಗೂ ಅಭ್ಯರ್ಥಿಗಳ ಸಮ್ಮುಖದಲ್ಲಿ ಬೆಳಿಗ್ಗೆ 7ಕ್ಕೆ ಎಂಟು ವಿಧಾನಸಭಾ ಕ್ಷೇತ್ರ ಸ್ಟ್ರಾಂಗ್‌ ರೂಮ್‌ಗಳಿಂದ ಇವಿಎಂಗಳನ್ನು ಹೊರಗೆ ತೆಗೆದು ಎಣಿಕೆ ಪ್ರಕ್ರಿಯೆ ಆರಂಭಿಸಲಾಯಿತು. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಹಾಕಿದ್ದ 14 ಟೇಬಲ್‌ಗಳಲ್ಲಿ ಬೆಳಿಗ್ಗೆ 8ರಿಂದ ಇವಿಎಂ ಎಣಿಕೆ ಪ್ರಕ್ರಿಯೆ ಆರಂಭಿಸಲಾಯಿತು. ಮೊದಲ ಸುತ್ತಿನಲ್ಲೇ ಸಿದ್ದೇಶ್ವರ 9,101 ಮತಗಳ ಮುನ್ನಡೆ ಸಾಧಿಸಿದ್ದು ಬಿಜೆಪಿ ಏಜೆಂಟರ ವಿಶ್ವಾಸವನ್ನು ಹೆಚ್ಚಿಸಿತು. ಎರಡನೇ ಸುತ್ತಿನ ಅಂತ್ಯಕ್ಕೆ ಸಿದ್ದೇಶ್ವರ 23,650 ಮತಗಳ ಮುನ್ನಡೆ ಗಳಿಸಿದರು. ಮೂರನೇ ಸುತ್ತಿಗೆ 30,009 ಮತಗಳ ಮುನ್ನಡೆ ಸಾಧಿಸುತ್ತಿದ್ದಂತೆ ಸಿದ್ದೇಶ್ವರ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿ ಮನೆಯತ್ತ ಹೊರಟರು. ಬಳಿಕ ನಡೆದ ಪ್ರತಿ ಸುತ್ತಿನಲ್ಲೂ ಬಿಜೆಪಿ ಆರರಿಂದ ಹತ್ತು ಸಾವಿರದವರೆಗೂ ಮತಗಳ ಮುನ್ನಡೆ ಸಾಧಿಸುತ್ತಿತ್ತು. 12ನೇ ಸುತ್ತಿನ ಅಂತ್ಯಕ್ಕೆ 96,084 ಮತಗಳ ಮುನ್ನಡೆ ಸಾಧಿಸಿದ್ದರು. 16ನೇ ಸುತ್ತಿನ ಅಂತ್ಯಕ್ಕೆ 1,44,088 ಮತಗಳ ಮುನ್ನಡೆ ಸಾಧಿಸಿದ್ದ ಸಂಸದರು, ಕೊನೆಯದಾಗಿದ್ದ 19ನೇ ಸುತ್ತಿನ ವೇಳೆಗೆ 1,69,702 ಮತಗಳ ಮುನ್ನಡೆಯೊಂದಿಗೆ ಗೆಲುವು ಸಾಧಿಸಿದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರಕ್ಕೂ ಹೆಚ್ಚು ಮುನ್ನಡೆ ಸಿಕ್ಕರೆ, ದಾವಣಗೆರೆ ದಕ್ಷಿಣದಲ್ಲಿ ಕೇವಲ ಎಂಟು ಸಾವಿರದಷ್ಟು ಲೀಡ್‌ ಸಿಕ್ಕಿದೆ.

ಇವಿಎಂ ಎಣಿಕೆ ಮುಗಿದ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಲಾಟರಿ ಎತ್ತಿ ಐದು ವಿ.ವಿ. ಪ್ಯಾಟ್‌ಗಳ ಚೀಟಿಗಳನ್ನು ಎಣಿಕೆ ಮಾಡಲಾಯಿತು. ಎಲ್ಲಾ ಕಡೆಯೂ ವಿ.ವಿ. ಪ್ಯಾಟ್‌ನಲ್ಲಿ ದಾಖಲಾಗಿದ್ದ ಮತ ಇವಿಎಂ ಜೊತೆ ತಾಳೆಯಾಗಿದೆ.

ಸಿದ್ದೇಶ್ವರ ಅವರು ರಾತ್ರಿ ಕುಟುಂಬದವರು ಹಾಗೂ ಪಕ್ಷದ ಮುಖಂಡರ ಜೊತೆಗೆ ಬಂದು ಆಯ್ಕೆಯಾಗಿರುವ ಪ್ರಮಾಣಪತ್ರವನ್ನು ಸ್ವೀಕರಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !