ಹರಿಹರ: ಒಂದು ಕಾಲದಲ್ಲಿ ಕೈಗಾರಿಕಾ ನಗರ, ಈಗ ಜಿಲ್ಲೆಯ 2ನೇ ದೊಡ್ಡ ನಗರವೆಂಬ ಪ್ರಸಿದ್ಧಿಯ ಹರಿಹರದಲ್ಲಿ ಮಾರುಕಟ್ಟೆಗಳ ಕೊರತೆ ಎದ್ದು ಕಾಣುತ್ತದೆ. ಐದಾರು ದಶಕಗಳ ಹಿಂದಿನ ಜನಪ್ರತಿನಿಧಿ, ಅಧಿಕಾರಿಗಳ ಕಾಳಜಿಯಿಂದ ವಿಶಾಲವಾದ ಎಪಿಎಂಸಿ ಮಾರುಕಟ್ಟೆ ಇದೆ ಎಂಬ ಸಮಾಧಾನ ಬಿಟ್ಟರೆ ಉಳಿದ ಮಾರುಕಟ್ಟೆಗಳ ಸ್ಥಿತಿ ಅಯೋಮಯವೇಆಗಿದೆ.

ಹೂವು, ಹಣ್ಣು, ತರಕಾರಿ: ಹೂವು, ಹಣ್ಣು, ತರಕಾರಿ ಅಂಗಡಿಗಳು ಅಪಾರ ಸಂಖ್ಯೆಗಳಲ್ಲಿ ಇವೆ. ಆದರೆ ಇವುಗಳಿಗೇ ಆದ ಒಂದು ಮಾರುಕಟ್ಟೆ ಇಲ್ಲ. ತರಕಾರಿ ಹೋಲ್ಸೇಲ್ ಮಾರುಕಟ್ಟೆ ಇದೆಯಾದರೂ ರಿಟೇಲ್ ಮಾರುಕಟ್ಟೆ ಇಲ್ಲ. ರಸ್ತೆ ಫುಟ್ಪಾತ್, ಖಾಸಗಿ ಮಳಿಗೆ ಹೀಗೆ ಎಲ್ಲೆಂದರಲ್ಲಿ ಅಂಗಡಿಗಳಿವೆ. ಜನರು ಅಪಾಯಕಾರಿ ರಸ್ತೆಗಳಲ್ಲಿ ನಿಂತು ಹೂವು, ಹಣ್ಣು, ತರಕಾರಿಗಳನ್ನು ಖರೀದಿಸಬೇಕಿದೆ. ವ್ಯಾಪಾರಿಗಳೂ ಸರಿಯಾದ ವ್ಯವಸ್ಥೆ ಇಲ್ಲದೇ ಫುಟ್ಪಾತ್ಗಳಲ್ಲೇ ವ್ಯಾಪಾರ ಮಾಡುವಂತಾಗಿದೆ.

ಎಪಿಎಂಸಿ: 60 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಎಪಿಎಂಸಿ ಮಾರುಕಟ್ಟೆ ಇದೆ. ದವಸ, ಧಾನ್ಯಗಳ ಸಹಿತ ರೈತರು ಬೆಳೆವ ಯಾವುದೇ ಬೆಳೆಗಳ ವ್ಯಾಪಾರ ವಹಿವಾಟಿಗೆ ಇಲ್ಲಿ ಜಾಗವಿದೆ. ಮಳಿಗೆಗಳಿವೆ. ಆದರೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಇಲ್ಲಿ ವಹಿವಾಟು ಮಾಡುವುದು ಅತ್ಯಲ್ಪ.ದವಸ, ಧಾನ್ಯದ ದಲ್ಲಾಳಿ ಅಂಗಡಿಗಳು ಎಪಿಎಂಸಿ ಹೊರಗಿವೆ. ಕೃಷಿ ಉತ್ಪನ್ನಗಳನ್ನು ವ್ಯಾಪಾರಿಗಳು ಗ್ರಾಮೀಣ ಭಾಗದಲ್ಲೇ ಖರೀದಿಸುತ್ತಿದ್ದು, ಎಪಿಎಂಸಿಗೆ ಕಮಿಷನ್ ಪರಿಪೂರ್ಣವಾಗಿ ತಲುಪುತ್ತಿಲ್ಲ.

ಮೀನು, ಮಾಂಸ, ಕೋಳಿ ಮಾರುಕಟ್ಟೆ ಇಲ್ಲ: ಕುರಿ, ದನದ ಮಾಂಸ ಮಾರಾಟಕ್ಕೆ ಮಾರುಕಟ್ಟೆ ಇಲ್ಲ. ಕೋಳಿ, ಮೀನು ಮಾರಾಟಕ್ಕೆ ಮಾರುಕಟ್ಟೆ ಇದೆಯಾದರೂ ಅದು ಹೆಸರಿಗೆ ಸೀಮಿತವಾಗಿದೆ. ಅಲ್ಲಿ ಪ್ರಾಣಿಗಳ ತ್ಯಾಜ್ಯ ಸಂಗ್ರಹ, ನೀರು, ನೈರ್ಮಲ್ಯದ ವ್ಯವಸ್ಥೆಯೆ ಇಲ್ಲ. ಗ್ರಾಹಕರು ಮೂಗು ಮುಚ್ಚಿಕೊಂಡು ಹೋಗಬೇಕಿದೆ.

ಹರಿಹರದಲ್ಲಿ ವಿವಿಧ ವಸ್ತುಗಳ ಮಾರಾಟಕ್ಕೆ ಮಾರುಕಟ್ಟೆಯ ವ್ಯವಸ್ಥೆ ಇಲ್ಲವಾಗಿದೆ. ಈ ಕುರಿತು ಜನಪ್ರತಿನಿಧಿ, ಅಧಿಕಾರಿಗಳಿಗೆ ಕೇಳಿದರೆ ‘ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಅನುದಾನ ಬಂದರೆ ಕಾಮಗಾರಿ ಆರಂಭಿಸುತ್ತೇವೆ’ ಎಂಬ ಸಿದ್ಧ ಉತ್ತರ ನೀಡುತ್ತಾರೆ.

30 ವರ್ಷಗಳಿಂದ ಸೊಪ್ಪಿನ ವ್ಯಾಪಾರ ಮಾಡುತ್ತಿದ್ದೇನೆ. ಸೂಕ್ತ ತರಕಾರಿ ಮಾರುಕಟ್ಟೆ ಇಲ್ಲಿಲ್ಲ. ಇದು ವ್ಯಾಪಾರಿಗಳಿಗೂ ಗ್ರಾಹಕರಿಗೂ ಕಿರಿಕಿರಿ ಉಂಟುಮಾಡಿದೆ.
-ರಾಜಣ್ಣ, ಸೊಪ್ಪಿನ ವ್ಯಾಪಾರಿ

ವ್ಯಾಪಾರ, ವಹಿವಾಟಿಗೆ ಸೂಕ್ತ ಮಾರುಕಟ್ಟೆ ನಿರ್ಮಿಸಬೇಕು. ಇದರಿಂದ ಸ್ಥಳೀಯ ಸಂಸ್ಥೆಗೂ ಆದಾಯದ ಮೂಲವಾಗುತ್ತದೆ. ಹೈಟೆಕ್ ಮಾರುಕಟ್ಟೆ ನಿರ್ಮಿಸುವ ಅಗತ್ಯವಿದೆ.
-ಜೆ.ಕಲೀಂಬಾಷಾ, ಲೇಖಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.