ಮಾಯಕೊಂಡ: ಇಲ್ಲಿಂದ ಅಣಬೇರು ಗ್ರಾಮವನ್ನು ಸಂಪರ್ಕಿಸುವ ಮುಖ್ಯ ರಸ್ತೆ ಗುಂಡಿಮಯವಾಗಿದ್ದು, ಬಹುಕಾಲದಿಂದ ದುರಸ್ತಿ ಮಾಡದ ಕಾರಣ ಸಾರ್ವಜನಿಕರು ದಿನವೂ ಸಂಕಷ್ಟ ಎದುರಿಸುವಂತಾಗಿದೆ.

ಈ ಮುಖ್ಯ ರಸ್ತೆಯನ್ನು ದಶಕದ ಹಿಂದೆ ದುರಸ್ತಿ ಮಾಡಲಾಗಿತ್ತು. ಅಲ್ಲಿಂದ ಈವರೆಗೆ ಒಂದು ಬುಟ್ಟಿ ಮಣ್ಣನ್ನೂ ಹಾಕದೆ ಹಾಗೇ ಬಿಟ್ಟಿರುವುದರಿಂದ ದೊಡ್ಡ ಗುಂಡಿಗಳು ಸೃಷ್ಟಿಯಾಗಿವೆ. ರಸ್ತೆಯಲ್ಲಿ ಸಣ್ಣ ಸಣ್ಣ ಕಲ್ಲುಗಳು ಎದ್ದಿದ್ದು, ಇಲ್ಲಿ ನಿತ್ಯವೂ ಸಂಚರಿಸುವ ನೂರಾರು ಬೈಕ್, ಟ್ರ್ಯಾಕ್ಟರ್, ಬಸ್ ಸವಾರರು ಪ್ರಯಾಸಪಡಬೇಕಿದೆ. ಯಾವಾಗ ಟೈರ್ಗಳು ಪಂಕ್ಚರ್ ಆಗುತ್ತವೆಯೋ ಎಂಬ ಆತಂಕದಲ್ಲೇ ವಾಹನಗಳು ಓಡಾಡುವಂತಾಗಿದೆ.

ಜಾನುವಾರುಗಳ ಪಾಡೂ ಹೇಳತೀರದಾಗಿದೆ. ಕಲ್ಲು ಗುಂಡಿಗಳ ರಸ್ತೆಯಲ್ಲಿ ಓಡಾಡಬೇಕಿರುವುದರಿಂದ ಅವುಗಳ ಕಾಲುಗಳಲ್ಲಿ ಗಾಯಗಳಾಗುತ್ತಿವೆ. ಈ ಕಾರಣಕ್ಕೆ ಕೆಲವರು ತಮ್ಮ ಜಮೀನುಗಳಲ್ಲಿಯೇ ಅವುಗಳನ್ನು ಕಟ್ಟುವ ಸ್ಥಿತಿ ಎದುರಾಗಿದೆ ಎಂದು ರೈತ ಲೋಕೇಶ್ ಹೇಳುತ್ತಾರೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮಾಯಕೊಂಡ–ದಾವಣಗೆರೆ ಮಧ್ಯೆ ಮೂರ್ನಾಲ್ಕು ಬಾರಿ ಸಂಚರಿಸುತ್ತದೆ. ದೊಡ್ಡ ದೊಡ್ಡ ಗುಂಡಿಗಳಿರುವ ಕಾರಣ, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಿದೆ. ಶಾಸಕರು ತುರ್ತು ಅಗತ್ಯವಿರುವ ಇಂತಹ ರಸ್ತೆಗಳನ್ನು ಆದ್ಯತೆ ಮೇರೆಗೆ ದುರಸ್ತಿ ಮಾಡಿದರೆ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂಬುದು ಮಾಯಕೊಂಡ, ಅಣಬೇರು ಹಾಗೂ ಸುತ್ತಲಿನ ಗ್ರಾಮಸ್ಥರ ಒತ್ತಾಯವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-43-1433873598

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.