ಮಾಯಕೊಂಡ: ನಿಧಿ ಸಿಕ್ಕಿದೆ ಎಂದು ನಂಬಿಸಿ, ನಕಲಿ ಬಂಗಾರ ಕೊಟ್ಟು ವಂಚಿಸಿದ್ದ ಆರೋಪಿಯನ್ನು ಬಂಧಿಸಿರುವ ಮಾಯಕೊಂಡ ಪೋಲಿಸರು, ₹ 7.50 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

ವಿಜಯಪುರ ಜಿಲ್ಲೆ ಮಡಿಕೇಶ್ವರ ಗ್ರಾಮದ ಮಹಮ್ಮದ್ ಅಲಿ ಅವಟಿ (36) ಬಂಧಿತ. ಮತ್ತೊಬ್ಬ ಆರೋಪಿ ಸೆರೆಗೆ ಬಲೆ ಬೀಸಲಾಗಿದೆ.

ಬೆಂಗಳೂರು ನಗರ ಜಿಲ್ಲೆಯ ಕಗ್ಗಲಿಪುರ ಗ್ರಾಮದಲ್ಲಿ ಟೀ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ರಾಮು ಎಸ್. ಅವರನ್ನು ಆರೋಪಿ ಪರಿಚಯ ಮಾಡಿಕೊಂಡಿದ್ದ. ನಮಗೆ ನಿಧಿ ದೊರೆತಿದೆ ಎಂದು ಹೇಳಿ ಒಂದು ಅಸಲಿ ಬಂಗಾರದ ನಾಣ್ಯ ನೀಡಿ ನಂಬಿಸಿದ್ದ. ಫೆ. 2ರಂದು ದಾವಣಗೆರೆ ತಾಲ್ಲೂಕು ಬಾಡ ಗ್ರಾಮದ ಬಳಿ ಬಂದಿದ್ದ ಆರೋಪಿಗಳು 2 ಕೆ.ಜಿ. ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ₹ 7.5 ಲಕ್ಷ ನಗದು ಪಡೆದುಕೊಂಡಿದ್ದರು.

ಸ್ವಲ್ಪ ಸಮಯದ ನಂತರ ಅವುಗಳನ್ನು ಪರೀಕ್ಷಿಸಿದಾಗ ನಕಲಿ ಎಂದು ತಿಳಿದುಬಂದಿದೆ. ವಂಚನೆಗೆ ಒಳಗಾದ ರಾಮು ಮಾಯಕೊಂಡ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕೂಡಲೇ ತಂಡ ರಚಿಸಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.

ದಾವಣಗೆರೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ ಅವರ ಮಾರ್ಗದರ್ಶನದಲ್ಲಿ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ ಬಿ.ಎಸ್, ಮಾಯಕೊಂಡ ಸಿಪಿಐ ರಾಘವೇಂದ್ರ, ಪಿಎಸ್ಐ ಅಜಯ ಎಸ್.ಬಿ ಅವರು ಕಾರ್ಯಾಚರಣೆ ಕೈಗೊಂಡಿದ್ದರು.

ಮಾಯಕೊಂಡ ಪೊಲೀಸ್ ಠಾಣೆಯ ಸಿಬ್ಬಂದಿ ಎಎಸ್ಐ ಹೆಮ್ಲನಾಯ್ಕ, ಅಣ್ಣಯ್ಯ, ರಾಮಕೃಷ್ಣ, ಲೋಕೇಶ್, ರಾಜು ಲಮಾಣಿ, ಸಂತೋಷ್, ಪರಶುರಾಮ್, ದಾದಾ ಪೀರ್, ವಾಹನ ಚಾಲಕ ಮತ್ತು ಇತರರನ್ನು ಒಳಗೊಂಡ ತಂಡವನ್ನು ದಾವಣಗೆರೆ ಎಸ್ಪಿ ಶೇಖರ್ ಎಚ್.ಟಿ ಅಭಿನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-44-972535608

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.