ದಾವಣಗೆರೆ: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡ ಪರಿಣಾಮ ಜಿಲ್ಲೆಯ ಹೋಟೆಲ್ ಹಾಗೂ ಹಾಸ್ಟೆಲ್ಗಳಲ್ಲಿ ಆಹಾರದ ಮೆನು ಬದಲಾಗಿದೆ. ಹೆಚ್ಚು ಅಡುಗೆ ಅನಿಲವನ್ನು ಬೇಡುವ ಖಾದ್ಯಗಳನ್ನು ಕೈಬಿಟ್ಟು, ಅಕ್ಕಿ, ರೆವೆಯಿಂದ ತಯಾರಿಸುವ ತಿನಿಸುಗಳಿಗೆ ಒತ್ತು ನೀಡಲಾಗಿದೆ.

ಜಿಲ್ಲೆಯಲ್ಲಿ ಹೋಟೆಲ್ಗಳಿಗೆ ವಾಣಿಜ್ಯ ಬಳಕೆಯ ಎಲ್ಪಿಜಿ ಪೂರೈಕೆ ಮಾರ್ಚ್ 10ರಿಂದ ಸ್ಥಗಿತಗೊಂಡಿದೆ. ಇದರಿಂದ ಹೋಟೆಲ್ಗಳಲ್ಲಿ ಮೆನು ಬದಲಾವಣೆ ಅನಿವಾರ್ಯವಾಗಿದೆ. ಇಂದಿರಾ ಕ್ಯಾಂಟೀನ್, ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಎಲ್ಪಿಜಿ ಪೂರೈಕೆಯಲ್ಲಿ ತೊಂದರೆ ಉಂಟಾಗಿಲ್ಲ. ಆದರೆ, ಮುನ್ನೆಚ್ಚರಿಕೆಯ ಕ್ರಮವಾಗಿ ಕೆಲ ತಿನಿಸು ತಯಾರಿಕೆಯನ್ನು ನಿಲ್ಲಿಸಲಾಗಿದೆ.

‘ಸರ್ಕಾರಿ ವಿದ್ಯಾರ್ಥಿನಿಲಯಗಳಿಗೆ ಎಲ್ಪಿಜಿ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿಲ್ಲ. ಆದರೂ, ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಚಪಾತಿ, ಇಡ್ಲಿ ಹಾಗೂ ದೋಸೆಯಂತಹ ತಿನಿಸುಗಳನ್ನು ಕೈಬಿಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಉಪ್ಪಿಟ್ಟು ಹಾಗೂ ಅನ್ನದಲ್ಲಿ ತಯಾರಿಸುವ ತಿಂಡಿಗಳನ್ನು ನೀಡುವಂತೆ ಸೂಚಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನಗರದ ಇಂದಿರಾ ಕ್ಯಾಂಟೀನ್ಗೆ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಕೊಂಚ ವ್ಯತ್ಯಯ ಉಂಟಾಗಿದೆ. ಇದರಿಂದ ಚಪಾತಿಯನ್ನು ಕೈಬಿಟ್ಟು ಉಳಿದ ಆಹಾರವನ್ನು ಪೂರೈಸಲಾಗುತ್ತಿದೆ. ಸಿಲಿಂಡರ್ ಪೂರೈಕೆ ಸ್ಥಿಗತಗೊಂಡರೆ ಕ್ಯಾಂಟೀನ್ ಬಾಗಿಲು ಮುಚ್ಚುವ ಸಾಧ್ಯತೆ ಇದೆ.

‘ನಿತ್ಯ ನಾಲ್ಕು ಎಲ್ಪಿಜಿ ಸಿಲಿಂಡರ್ ಅಗತ್ಯವಿದೆ. ಪ್ರತಿದಿನ ಸಂಜೆಯೇ ಸಿಲಿಂಡರ್ ಪೂರೈಕೆ ಆಗುತ್ತಿವೆ. ಆದರೆ, ಅಗತ್ಯಕ್ಕೆ ಅನುಗುಣವಾಗಿ ಸಿಲಿಂಡರ್ ನೀಡಲು ಸಾಧ್ಯವಿಲ್ಲ ಎಂಬುದಾಗಿ ಏಜೆನ್ಸಿ ಹೇಳುತ್ತಿದೆ. ಒಂದು ವೇಳೆ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡರೆ ಮಹಾನಗರ ಪಾಲಿಕೆ ಗಮನಕ್ಕೆ ತಂದು ಕ್ಯಾಂಟೀನ್ ಬಾಗಿಲು ಮುಚ್ಚುತ್ತೇವೆ’ ಎಂದು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪದ ಇಂದಿರಾ ಕ್ಯಾಂಟೀನ್ ಮೇಲ್ವಿಚಾರಕ ಗಿರೀಶ್ ತಿಳಿಸಿದರು.

ಹೋಟೆಲ್ ‘ಪಂಜುರ್ಲಿ’, ಹೋಟೆಲ್ ‘ಅಪೂರ್ವ’ ಸೇರಿದಂತೆ ನಗರದ ಬಹುತೇಕ ಹೋಟೆಲ್ಗಳು ಸೌದೆ ಒಲೆ ಬಳಕೆಗೆ ಒಲವು ತೋರಿವೆ. ಅಡುಗೆ ಮನೆಯ ಸಮೀಪದಲ್ಲಿಯೇ ಅಗತ್ಯ ಸಿದ್ಧತೆ ಮಾಡಿಕೊಂಡಿವೆ. ಅಲ್ಲದೇ, ಕೆಲ ತಿನಿಸುಗಳನ್ನು ಕೈಬಿಟ್ಟಿದ್ದು, ಗ್ರಾಹಕರು ಸಹಕರಿಸುವಂತೆ ಸೂಚನಾ ಫಲಕಗಳನ್ನು ಅಳವಡಿಸಿವೆ.

‘ನಿತ್ಯ ಎರಡು ಎಲ್ಪಿಜಿ ಸಿಲಿಂಡರ್ ಅಗತ್ಯವಿದೆ. ಮೂರು ದಿನಗಳಿಂದ ಸಿಲಿಂಡರ್ ಪೂರೈಕೆ ಸಂಪೂರ್ಣ ಸ್ಥಗಿತವಾಗಿದೆ. ಶೇ 80ರಷ್ಟು ಆಹಾರ ತಯಾರಿಕೆಗೆ ಸೌದೆ ಒಲೆ ಬಳಸುತ್ತಿದ್ದೇವೆ. ಇನ್ನು ಮುಂದೆ ಶೇ 30ರಷ್ಟು ತಿನಿಸುಗಳನ್ನು ಸಿದ್ಧಪಡಿಸಲು ಆಲೋಚನೆ ಮಾಡುತ್ತಿದ್ದೇವೆ’ ಎಂದು ಹೋಟೆಲ್ ‘ಪಂಜುರ್ಲಿ’ಯ ಸಂದೀಪ್ ಹೆಗಡೆ ವಿವರಿಸಿದರು.

ಜಿಲ್ಲೆಯಲ್ಲಿ 7 ಲಕ್ಷಕ್ಕೂ ಅಧಿಕ ಎಲ್ಪಿಜಿ ಸಂಪರ್ಕಗಳಿವೆ. ನಿತ್ಯವೂ ಅಗತ್ಯ ಇರುವಷ್ಟು ಪೂರೈಕೆ ಆಗುತ್ತಿದೆ. ಗ್ರಾಹಕರು ಗಾಬರಿಪಡುವ ಅಗತ್ಯವಿಲ್ಲ.
– ಮಧುಸೂದನ್ ಜಂಟಿ, ನಿರ್ದೇಶಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

ಸರ್ಕಾರಿ ವಿದ್ಯಾರ್ಥಿನಿಲಯಗಳಿಗೆ ಎಲ್ಪಿಜಿ ಪೂರೈಕೆಗೆ ಆದ್ಯತೆ ನೀಡುವಂತೆ ಏಜೆನ್ಸಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಹೀಗಾಗಿ ಹಾಸ್ಟೆಲ್ಗಳಿಗೆ ತೊಂದರೆ ಆಗಿಲ್ಲ.
– ರೇಣುಕಾದೇವಿ, ಜಿಲ್ಲಾ ಅಧಿಕಾರಿ ಬಿಸಿಎಂ ಇಲಾಖೆ

12 ಸಿಲಿಂಡರ್ ವಶ

ಗೃಹ ಬಳಕೆಯ ಅಡುಗೆ ಅನಿಲವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ ಹೋಟೆಲ್ ಹಾಗೂ ಕ್ಯಾಟರಿಂಗ್ಗಳ ಮೇಲೆ ದಾಳಿ ನಡೆಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ನಗರದಲ್ಲಿ 12 ಸಿಲಿಂಡರ್ ವಶಕ್ಕೆ ಪಡೆದಿದ್ದಾರೆ.

ಆಹಾರ ನಿರೀಕ್ಷರ ನೇತೃತ್ವದಲ್ಲಿ ರಚನೆಯಾಗಿರುವ ತಂಡಗಳು ಹೋಟೆಲ್ ಉಪಹಾರ ಮಂದಿರ ಖಾನಾವಳಿ ಹಾಗೂ ರಸ್ತೆ ಬದಿ ಅಂಗಡಿಗಳನ್ನು ಗುರುವಾರ ಪರಿಶೀಲನೆ ನಡೆಸಿವೆ. ಗೃಹ ಬಳಕೆಯ ಸಿಲಿಂಡರ್ ಅನ್ಯ ಉದ್ದೇಶಕ್ಕೆ ಬಳಕೆ ಮಾಡದಂತೆ ತಾಕೀತು ಮಾಡಲಾಗಿದೆ.

‘ಪರಿಶೀಲನೆಯ ವೇಳೆ ಹಲವೆಡೆ ಗೃಹ ಬಳಕೆಯ ಅಡುಗೆ ಅನಿಲವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದು ಪತ್ತೆಯಾಗಿದೆ. ಸಿಲಿಂಡರ್ ಜಪ್ತಿ ಮಾಡಿ ಎಚ್ಚರಿಕೆ ನೀಡಲಾಗಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.