ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟ್ಯಂತರ ರೂಪಾಯಿ ಅವ್ಯವಹಾರ: ಪಿಡಿಒಗಳು ಸೇರಿ 7 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ

Last Updated 17 ಜನವರಿ 2020, 15:38 IST
ಅಕ್ಷರ ಗಾತ್ರ

ಹರಪನಹಳ್ಳಿ: ಕ್ರಿಯಾಯೋಜನೆ ತಯಾರಿಸದೇ ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿರುವ ಆರೋಪದ ಮೇರೆಗೆ ಪಿಡಿಒ, ಗ್ರಾಮ ಪಂಚಾಯಿತಿ ಅಧ್ಯಕ್ಷರ ಸೇರಿ 7 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ. ಮಲ್ಲೇಶಪ್ಪ, ಹಾಲಿ ಅಧ್ಯಕ್ಷ ಕೆ. ಮಲ್ಲಿಕಾರ್ಜುನ, ಹಿಂದಿನ ಪಿಡಿಒಗಳಾದ ವೀರೇಶ, ಟಿ. ಅಂಜಿನಪ್ಪ, ಪಿಡಿಒ ಮಹೇಶ ಪಾಟೀಲ್, ಕರವಸೂಲಿಗಾರರಾದ ಕೆ.ಮಂಜುನಾಥ, ಪಿ.ಮಂಜುನಾಥ್ ಆರೋಪಿತರು.

2017-18ನೇ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯಡಿಯಲ್ಲಿ ಕ್ರಿಯಾ ಯೋಜನೆ ತಯಾರಿಸದೇ, ನಿಯಮಬಾಹಿರವಾಗಿ ಎನ್‍.ಎಂ.ಆರ್.ಬಿಲ್‌ ತಯಾರಿಸಿ ಕೂಲಿಕಾರರಿಗೆ ಕೂಲಿಯನ್ನು ಪಾವತಿಸದೇ, ಚೆಕ್‌ಗಳನ್ನು ಬೇರೆಯವರ ಹೆಸರಿನಲ್ಲಿ ನಗದೀಕರಿಸಿ ಆರೋಪಿಗಳು ₹79,0320 ಹಣ ಬಿಡುಗಡೆ ಮಾಡಿದ್ದಾರೆ.

ಪಿಡಿಒ ಹಾಗೂ ಅಧ್ಯಕ್ಷರು ಕೆಟಿಪಿಪಿ ಅಧಿನಿಯಮ 1999 ಅನ್ನು ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮವನ್ನು ಉಲ್ಲಂಘಿಸಿ, ₹17,15,056 ಹಣ ಪಾವತಿಸಿ 14ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರಿನ ಸಾಮಗ್ರಿಗಳನ್ನು ಖರೀದಿಸಿದ್ದಾರೆ.

ತಾಂತ್ರಿಕ ನೆರವು ಪಡೆಯದೇ ಬೋರ್‌ವೆಲ್‍ ಕೊರೆಯಿಸಿ ದಾಖಲಾತಿ ನಿರ್ವಹಿಸದೇ ₹1,58,100, ಕುಡಿಯುವ ನೀರಿನ ಮೋಟರ್‌ಗಳನ್ನು ದುರಸ್ತಿ ಮಾಡಿರುವ ಹಣದ ಚೆಕ್‍ ಅನ್ನು ಸಂಬಂಧಿಸಿದ ಗುತ್ತಿಗೆದಾರರಿಗೆ ಪಾವತಿಸದೆ ಬೇರೆಯವರ ಹೆಸರಿನಲ್ಲಿ ನಗದೀಕರಿಸಿ ಒಟ್ಟು ₹2,09,462 ಹಾಗೂ 2017ರಿಂದ ಮೂರು ವರ್ಷ ವೋಚರ್‌ಗಳನ್ನು ನಿರ್ವಹಿಸದೇ ₹5,84,587ಗಳನ್ನು ಬಿಡುಗಡೆ ಮಾಡಿಸಿಕೊಂಡಿದ್ದಾರೆ.

ಇಎಫ್‍ಎಂಎಸ್‍ ಮೂಲಕ ವರ್ಗಾಯಿಸಿದ ಮೊತ್ತಕ್ಕೆ ವೋಚರ್‌ಗಳನ್ನು ಲಗತ್ತಿಸದೇ ತಮ್ಮ ಉಳಿತಾಯ ಖಾತೆಗೆ ₹47,89,430 ಹಾಕಿಸಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ನೀಡದೆ ₹5,71,100, ಖಾಸಗಿ ಮುದ್ರಕರಿಂದ ರಸೀದಿ ಪುಸ್ತಕ ಖರೀದಿಸಿ ಲೆಕ್ಕಗಳನ್ನು ನಿರ್ವಹಿಸದೆ ಹಾಗೂ ತೆರಿಗೆ ಆದಾಯಕ್ಕೆ ಸಂಬಂಧಿಸಿದ ₹6,00,786 ಸೇರಿ ಒಟ್ಟು ₹1,15,58,724 ಅನ್ನು ದುುಪಯೋಗಪಡಿಸಿಕೊಂಡಿದ್ದಾರೆ ಎಂದು ಹರಪನಹಳ್ಳಿ ತಾಲ್ಲೂಕು ಪಂಚಾಯಿತಿ ಇಒ ಅನಂತ ರಾಜ್ ದೂರಿನಲ್ಲಿ ತಿಳಿಸಿದ್ದಾರೆ.

ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT