ಮರಳು ಸಾಗಿಸುವ ಬಡವರ ಮೇಲೆ ಪ್ರಕರಣ: ತಾಕತ್‌ ಇದ್ದರೆ ನನ್ನ ಬಂಧಿಸಿ–ರೇಣುಕಾಚಾರ್ಯ

7
ಎಸ್‌ಪಿ, ಡಿಸಿಗೆ ಶಾಸಕ ಸವಾಲು

ಮರಳು ಸಾಗಿಸುವ ಬಡವರ ಮೇಲೆ ಪ್ರಕರಣ: ತಾಕತ್‌ ಇದ್ದರೆ ನನ್ನ ಬಂಧಿಸಿ–ರೇಣುಕಾಚಾರ್ಯ

Published:
Updated:

ದಾವಣಗೆರೆ: ‘ಹೊನ್ನಾಳಿ ತಾಲ್ಲೂಕಿನಲ್ಲಿ ಜನ ಸಾಮಾನ್ಯರಿಗೆ ಮರಳು ಸಿಗದಂತಾಗಿದೆ. ಹೀಗಿದ್ದರೂ ಮರಳು ದಂಧೆಕೋರರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಆದರೆ, ದ್ವಿಚಕ್ರ ವಾಹನ, ಎತ್ತಿನ ಗಾಡಿಗಳಲ್ಲಿ ಮರಳು ಸಾಗಿಸುವ ಬಡವರ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ. ತಾಕತ್‌ ಇದ್ದರೆ ನನ್ನನ್ನು ಬಂಧಿಸಲಿ’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಎಸ್‌ಪಿ ಮತ್ತು ಡಿಸಿಗೆ ಸವಾಲೆಸೆದರು.

‘ಮರಳು ಸಮಸ್ಯೆ ಪರಿಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಜಿಲ್ಲಾಧಿಕಾರಿ ಗಮನಹರಿಸಿಲ್ಲ. ಆಶ್ರಯ ಮನೆಗಾಗಿ ಮರಳು ಸಾಗಿಸುವ ಬಡವರನ್ನು ಬಂಧಿಸದಂತೆ ಕೇಳಿಕೊಂಡರೂ ಎಸ್‌ಪಿ ಮಾತು ಕೇಳಲಿಲ್ಲ. ಹೀಗಾಗಿ, ನವೆಂಬರ್‌ 12ರಂದು ಬೆಳಿಗ್ಗೆ 11ಕ್ಕೆ ಹೊನ್ನಾಳಿಯ ತುಂಗಭದ್ರಾ ನದಿಯಲ್ಲಿ ಮಲಗಿ ಪ್ರತಿಭಟನೆ ನಡೆಸುತ್ತೇನೆ. ದೇವಸ್ಥಾನ, ಆಶ್ರಯ ಮನೆ, ಶೌಚಾಲಯ ನಿರ್ಮಾಣ ಮಾಡಿಕೊಳ್ಳುವವರಿಗೆ ಮರಳು ತುಂಬಿಸಿಕೊಡುತ್ತೇನೆ. ಬೇಕಿದ್ದರೆ ಅಧಿಕಾರಿಗಳು ನನ್ನ ವಿರುದ್ಧ ಕ್ರಮ ಕೈಗೊಳ್ಳಲಿ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಆರ್. ಮಹೇಶ್‌, ಸುರೇಂದ್ರ ನಾಯ್ಕ, ಬಿಜೆಪಿ ಮುಖಂಡರಾದ ಅರಕೆರೆ ನಾಗರಾಜ್, ನರಸಗೊಂಡನಹಳ್ಳಿ ರಘು, ರಂಗಪ್ಪ ಅವರೂ ಇದ್ದರು.

* * *

‘ಕಾಣೆಯಾದ ಕುಮಾರಸ್ವಾಮಿ’

ಅಂದಿನ ಸಿಎಂ ಸಿದ್ದರಾಮಯ್ಯ ಸ್ವಾರ್ಥಕ್ಕಾಗಿ ಟಿಪ್ಪು ಜಯಂತಿ ಆರಂಭಿಸಿದರು. ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಡಬಲ್‌ ಆಕ್ಟಿಂಗ್‌ ಮಾಡುತ್ತಿದ್ದಾರೆ. ವಿಶ್ರಾಂತಿ ನೆಪದಲ್ಲಿ ಕಾಣೆಯಾಗಿದ್ದಾರೆ ಎಂದು ರೇಣುಕಾಚಾರ್ಯ ಟೀಕಿಸಿದರು.

ಜಿಲ್ಲಾ ಮಂತ್ರಿಗೆ ಜವಾಬ್ದಾರಿ ಇಲ್ಲ:

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಮಾಡುವುದು, ಟಿಪ್ಪು ಜಯಂತಿಯಲ್ಲಿ ಭಾಗವಹಿಸುವುದಷ್ಟೇ ಜಿಲ್ಲಾ ಉಸ್ತುವಾರಿ ಸಚಿವರ ಕೆಲಸವೇ? ಜಿಲ್ಲೆಯಲ್ಲಿರುವ ಮರಳು ಸಮಸ್ಯೆ ಬಗೆಹರಿಸುವಲ್ಲಿ, ಬೆಳೆ ನಷ್ಟ ಪರಿಹಾರ ವಿತರಣೆ ಮಾಡಲು ಹಾಗೂ ಕುಡಿಯುವ ನೀರು ಪೂರೈಸಲು ಸಚಿವ ಎಸ್‌.ಆರ್‌. ಶ್ರೀನಿವಾಸ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

* ನಾಗರಿಕರಿಗೆ ಮರಳು ಸಿಗುವಂತೆ ಮಾಡದಿದ್ದರೆ, ಅಧಿಕಾರಿಗಳ ವಿರುದ್ಧ ದಂಗೆ ಏಳುವಂತೆ ಜನರಿಗೆ ಕರೆ ನೀಡುತ್ತೇನೆ.
–ಎಂ.ಪಿ. ರೇಣುಕಾಚಾರ್ಯ, ಹೊನ್ನಾಳಿ ಶಾಸಕ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !