ಹರಿಹರ: ಜಮಾಅತೆ ಇಸ್ಲಾಮಿ ಹಿಂದ್ ಸ್ಥಳೀಯ ಘಟಕ ನಗರದ ಪ್ರಶಾಂತ ನಗರದ ಮಸ್ಜಿದ್ ಎ ಅಲಿ ಮಸೀದಿಯಲ್ಲಿ ಭಾನುವಾರ ಆಯೋಜಿಸಿದ್ದ ಮಸೀದಿ ದರ್ಶನ ಕಾರ್ಯಕ್ರಮ ಯಶಸ್ವಿಯಾಯಿತು.

ಮುಸ್ಲಿಮೇತರರೂ ಮಸೀದಿಗೆ ಬಂದು ಪರಿಚಯ ಮಾಡಿಕೊಂಡರು.

ಜಮಾಅತೆ ಇಸ್ಲಾಮಿ ಹಿಂದ್ ಸಂಸ್ಥೆಯ ಕರೆಯಂತೆ ಇಡೀ ದೇಶದಲ್ಲಿ ಮಸ್ಜಿದ್ ದರ್ಶನ ನಡೆಯುತ್ತಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮುಸ್ಲಿಮೇತರರೂ ಮಸೀದಿಯ ಪ್ರಕ್ರಿಯೆಯ ಮಾಹಿತಿ ಪಡೆದರು.

ನಮಾಜ್ (ಪ್ರಾರ್ಥನೆ)ಗೆ ಕರೆಯುವ ಅಜಾನ್, ಪ್ರಾರ್ಥನೆಗೆ ಮುನ್ನ ನೆರೆವೇರಿಸುವ ವಜೂ (ಕೈ, ಕಾಲು, ಮುಖ ಸ್ವಚ್ಛಗೊಳಿಸುವ ಪ್ರಕ್ರಿಯೆ), ನಮಾಜ್ ಮಾಡುವ ಹಾಲ್, ಖುತ್ಬಾ (ಪ್ರವಚನ) ನೀಡುವ ಸ್ಥಳ, ಗ್ರಂಥಾಲಯ ಸೇರಿ ಎಲ್ಲ ಮಾಹಿತಿ ಪಡೆದರು.

ಇಸ್ಲಾಂ ಧರ್ಮದ ಮೂಲ ತತ್ವಗಳ ಕುರಿತ ಪುಸ್ತಕಗಳನ್ನು ದರ್ಶನಕ್ಕೆ ಬಂದವರಿಗೆ ನೀಡಲಾಯಿತು.

ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕರಾದ ಬಿ.ಪಿ.ಹರೀಶ್, ಎಚ್.ಎಸ್.ಶಿವಶಂಕರ್, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಎಂ.ನಾಗೇಂದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ದಸಂಸ ಸಂಚಾಲಕ ಪಿ.ಜೆ.ಮಹಾಂತೇಶ್, ಎಕ್ಕಗೊಂದಿ ರುದ್ರಗೌಡ ಭೇಟಿ ನೀಡಿದ್ದರು.

‘20 ಮಹಿಳೆಯರೂ ಸೇರಿ 150 ಮುಸ್ಲಿಮೇತರರು ಭಾಗವಹಿಸಿದ್ದರು’ ಎಂದು ಸಂಸ್ಥೆ ಕಾರ್ಯದರ್ಶಿ ವೈ.ಜಿ.ಅಬ್ದುಲ್ ಖಯೂಂ ಹೇಳಿದರು.

ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರಶಾಂತ್, ‘ಮಸೀದಿಯ ಒಳ ಆವರಣ ಹೇಗಿರುತ್ತದೆ, ಅಲ್ಲಿ ಏನೆಲ್ಲಾ ಮಾಡುತ್ತಾರೆಂಬ ಕುತೂಹಲ ಇತ್ತು. ಕಾರ್ಯಕ್ರಮ ಉಪಯುಕ್ತವಾಗಿದೆ’ ಎಂದರು.

ಸಂಸ್ಥೆ ಅಧ್ಯಕ್ಷ ಡಾ.ಗುಲಾಂ ನಬಿ, ‘ಮುಸ್ಲಿಮರು ಮತ್ತು ಅನ್ಯಧರ್ಮೀಯರ ನಡುವೆ ಸಾಮರಸ್ಯ ಬೆಳೆಸುವ ಉದ್ದೇಶ
ದಿಂದ ಹಿಂದ್ ಸಂಸ್ಥೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿರೀಕ್ಷೆಗೂ ಮೀರಿ ಸ್ಪಂದನ ಸಿಕ್ಕಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಸಂಸ್ಥೆಯ ಮುಖ್ತಿಯಾರ್ ಖಾಜಿ, ಸಿರಾಜ್ ಉರ್ ರಹಮಾನ್, ಉಸ್ಮಾನ್ ಖಾನ್, ಉಮರ್ ಫಾರೂಖ್, ಮೊಹ್ಮದ್ ಸಾದಿಕ್, ಬಿ.ಮಗ್ದುಮ್, ವೈ.ಜಿ.ಅಬ್ದುಲ್ ಹೈ, ಡಾ.ನಜೀಬ್ ಉಲ್ಲಾ, ತಾಹೀರ್ ಹುಸೇನ್, ಆರ್.ಸಿ.ಉಬೇದ್ ಉಲ್ಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.