ಬುಧವಾರ, ಜನವರಿ 29, 2020
30 °C

ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಸಂಸದ ಸಿದ್ದೇಶ್ವರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ ಹಾದು ಹೋಗುವ ಎರಡು ರಾಷ್ಟ್ರೀಯ ಹೆದ್ದಾರಿಗಳ ಅನುಷ್ಠಾನವನ್ನು ಶೀಘ್ರ ಕೈಗೆತ್ತುಕೊಳ್ಳಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಸಂಸತ್‌ ಅಧಿವೇಶನದಲ್ಲಿ ಒತ್ತಾಯಿಸಿದ್ದಾರೆ.

ಅಧಿವೇಶನದ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ‘ಮರಿಯಮ್ಮನಹಳ್ಳಿ - ಹರಪನಹಳ್ಳಿ - ಹರಿಹರ - ಹೊನ್ನಾಳಿ ಮತ್ತು ಶಿವಮೊಗ್ಗದವರೆಗೆ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಲಾಗಿದೆ. ಈ ಯೋಜನೆಗಾಗಿ ಡಿ.ಪಿ.ಆರ್ ಈಗಾಗಲೇ ಪೂರ್ಣಗೊಂಡಿದೆ. ಆದರೆ, ಕೇಂದ್ರ ಸರ್ಕಾರ ಯಾವುದೇ ಹಣವನ್ನು ಬಿಡುಗಡೆ ಮಾಡಿಲ್ಲ. ಹಾಗಾಗಿ ಯಾವುದೇ ಕೆಲಸ ಪ್ರಾರಂಭವಾಗಿಲ್ಲ’ ಎಂದು ತಿಳಿಸಿದರು.

ಅದೇ ರೀತಿ ದಾವಣಗೆರೆ ಬಳಿಯ ಎನ್.ಹೆಚ್ -48ರ ಜಂಕ್ಷನ್‌ನಿಂದ ಚನ್ನಗಿರಿ ಬಳಿಯ ಎಚ್.ಎಚ್ -369ರ ಜಂಕ್ಷನ್ ವರೆಗಿನ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಎಂದು 2016ರ ಜನವರಿಯಲ್ಲಿ ಘೋಷಿಸಲಾಗಿದೆ. ನಾಲ್ಕು ವರ್ಷಗಳ ನಂತರವೂ ಯಾವುದೇ ಸಮೀಕ್ಷೆ ನಡೆದಿಲ್ಲ. ಈ ಪ್ರಸ್ತಾವನೆಗಾಗಿ ಇಲ್ಲಿಯವರೆಗೆ ಡಿ.ಪಿ.ಆರ್ ಮತ್ತು ಟೆಂಡರ್ ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಲಾಗಿಲ್ಲ ಎಂದು ವಿವರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು