ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಬೆನ್ನೂರು ಪಟ್ಟಣದ ಪುರಸಭೆ ಚುನಾವಣೆ: ಶಾಂತಿಯುತ

Last Updated 28 ಡಿಸೆಂಬರ್ 2021, 5:33 IST
ಅಕ್ಷರ ಗಾತ್ರ

ಮಲೇಬೆನ್ನೂರು:ಪಟ್ಟಣದ ಪುರಸಭೆ ಚುನಾವಣೆ ಸೋಮವಾರ ಶಾಂತಿಯುತವಾಗಿ ನಡೆದಿದ್ದು, ಶೇ 82.27 ಮತದಾನವಾಗಿದೆ.

ಒಟ್ಟು 21 ವಾರ್ಡ್‌ಗಳಿಗೆ ಚುನಾವಣೆ ನಡೆದಿದ್ದು, 16,419 ಮತದಾರರ ಪೈಕಿ 13,508 ಮತದಾರರು ಮತಚಲಾಯಿಸಿದರು.

2 ಕ್ಷೇತ್ರಗಳಲ್ಲಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 23 ವಾರ್ಡ್‌ಗಳಲ್ಲಿ 21 ವಾರ್ಡ್‌ಗಳಿಗೆ ಮಾತ್ರ ಚುನಾವಣೆ ನಡೆಯಿತು.

1ನೇ ವಾರ್ಡಿನಲ್ಲಿ ಅತಿಹೆಚ್ಚು ಶೇ 94.33 ರಷ್ಟು ಮತ್ತು 4 ನೇ ವಾರ್ಡಿನಲ್ಲಿ ಅತಿಕಡಿಮೆ ಶೇ 73.47ರಷ್ಟು ಮತದಾನವಾಗಿದೆ.

ಚುಮುಚುಮು ಚಳಿಯ ನಡುವೆ ಬೆಳಿಗ್ಗೆ ಮಂದಗತಿಯಲ್ಲಿ ಸಾಗಿದ ಮತದಾನ ಬಿಸಿಲು ಏರುತ್ತಿದ್ದಂತೆ ಚುರುಕಾಯಿತು. ಮಧ್ಯಾಹ್ನದ ಹೊತ್ತಿಗೆ ಶೇ 55ರಷ್ಟು ಮತದಾನವಾಗಿತ್ತು.

ಮತದಾನ ಮಾಡಲು ಮತಗಟ್ಟೆಗಳಿಗೆ ಪುರುಷರು, ಮಹಿಳೆಯರು, ಯುವಕರು, ಯುವತಿಯರು ,ವಯೋವೃದ್ಧರು ಹುರುಪಿನಿಂದ ಬಂದು ಹೆಚ್ಚಿನ ಉತ್ಸಾಹ ತೋರಿಸಿದರು.

ಆರೋಗ್ಯ ಇಲಾಖೆ ಸಿಬ್ಬಂದಿ, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಉಪತಹಶೀಲ್ದಾರ್ ಆರ್. ರವಿ, ಚುನಾವಣಾಧಿಕಾರಿಗಳಾದ ಪಿ.ಸಿ. ಸಿದ್ದಪ್ಪ, ರಾಮಕೃಷ್ಣಪ್ಪ, ನಾರನಗೌಡ, ನಾಗರಾಜಯ್ಯ, ವೀಕ್ಷಣಾಧಿಕಾರಿ ಗಂಗಪ್ಪ, ಸೆಕ್ಟ್ರಲ್ ಅಧಿಕಾರಿಗಳಾದ ಇನಾಯತ್, ಸಂತೋಷ್, ಉಮೇಶ್, ಪುರಸಭೆ ಮುಖ್ಯಾದಿಕಾರಿ ಎನ್.ಕೆ. ಡೊಂಬರ್, ಕಂದಾಯಾಧಿಕಾರಿ ಪ್ರಭು, ಲಿಂಗರಾಜು, ಗಣೇಶ್ ರಾವ್, ನಾಗರಾಜ್, ದಿನಕರ್, ಕೊಟ್ರೇಶ್, ಆನಂದ್, ಬೂತ್ ಮಟ್ಟದ ಅಧಿಕಾರಿಗಳು, ಕಂದಾಯ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.

ಪಿಎಸ್ಐ ರವಿಕುಮಾರ್, ವೀರಬಸಪ್ಪ ಕುಸಲಾಪುರ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು.

ಶತಾಯುಷಿಯಿಂದ ಮತದಾನ: 18ನೇ ವಾರ್ಡಿನಲ್ಲಿ 101 ವರ್ಷದ ಶತಾಯುಷಿ ಛಾಯಾಗ್ರಾಹಕ ಬಿ. ಬಸವಲಿಂಗಪ್ಪ ನಡೆದುಕೊಂಡು ಬಂದು ಮತದಾನ ಮಾಡಿದರು. ಸೊಸೆ, ಮಕ್ಕಳು, ಪೊಲೀಸರು ಮತಗಟ್ಟೆಯಲ್ಲಿ ಸಹಕರಿಸಿದರು.

ಪಟ್ಟಣದ 3 ಮತ್ತು 6ನೇ ವಾರ್ಡಿನ ಅಧಿಕೃತ ಮತಪಟ್ಟಿ ಹಾಗೂ ಚುನಾವಣಾ ಏಜೆಂಟರ್ ಬಳಿಯಲ್ಲಿ ಇದ್ದ ಮತಪಟ್ಟಿಯಲ್ಲಿ ಮತದಾರರ ಹೆಸರು ಇಲ್ಲದ ಕಾರಣ ಗಲಿಬಿಲಿ ಉಂಟಾಗಿ ಮಾತಿನ ಚಕಮಕಿ ನಡೆಯಿತು.

ಮತಗಟ್ಟೆಗಳಿಗೆ ಮತದಾರರನ್ನು ಕರೆತರಲು ವಿವಿಧ ಪಕ್ಷಗಳ ಮುಖಂಡರು ಕಾರು ಬಳಸಿದ್ದು ಕಂಡುಬಂತು. ಅಶಕ್ತರು ಹಾಗೂ ಅಂಗವಿಕಲರಿಗೆಪುರಸಭೆ ವತಿಯಿಂದ ತ್ರಿಚಕ್ರವಾಹನದ ವ್ಯವಸ್ಥೆ ಮಾಡಲಾಗಿತ್ತು.

ಕೋವಿಡ್ ಪರೀಕ್ಷೆ: ಆಶಾ, ಅಂಗನವಾಡಿ ಕಾರ್ಯಕರ್ತೆಯರು ‌ಥರ್ಮಲ್‌ ಸ್ಕ್ಯಾನಿಂಗ್ ‌ಮಾಡಿ ಮತದಾರರನ್ನು ಒಳಗೆ ಬಿಟ್ಟರು. ಆರೋಗ್ಯ ಆಲಾಖೆ ಸಿಬ್ಬಂದಿ ಮಾಸ್ಕ್ ಧರಿಸಲು ತಾಕೀತು ಮಾಡಿದರೂ ಕೆಲವೇ ಕೆಲವು ಮತದಾರರು ಮಾಸ್ಕ್ ಧರಿಸಿದ್ದರು.

ವಿವಿಧ ಪಕ್ಷಗಳು ಮತದಾರರಿಗೆ ಮತ ಹಾಕಲು ಹಣ, ಬೆಳ್ಳಿ ಗಣೇಶ ವಿಗ್ರಹ, ಮಹಿಳೆಯರಿಗೆ ಬಂಗಾರದ ಮೂಗುಬೊಟ್ಟು ನೀಡಿ ಆಮಿಷ ಒಡ್ಡಿದ್ದಾರೆ ಎಂಬ ಸುದ್ದಿ ಹರಡಿತ್ತು.ಕೆಲವು ಕಡೆ ದೇವರ ಭಾವಚಿತ್ರದ ಆಣೆ ಪ್ರಮಾಣ ಮಾಡಿಸಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT