ಬುಧವಾರ, ನವೆಂಬರ್ 20, 2019
22 °C

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

Published:
Updated:

ದಾವಣಗೆರೆ: ತನ್ನ ಹೊಲಕ್ಕೆ ದನಗಳನ್ನು ಬಿಟ್ಟಿದ್ದಾರೆ ಎಂಬ ಕಾರಣಕ್ಕೆ ಅಣ್ಣನ ಪತ್ನಿಯನ್ನೇ ಹೊಡೆದು ಕೊಂದಿದ್ದ ಆರೋಪಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹ 45 ಸಾವಿರ ವಿಧಿಸಿ ಗುರುವಾರ ತೀರ್ಪು ನೀಡಿದೆ.

ಮಾಯಕೊಂಡದ ಹಾಲಾನಾಯ್ಕ (68) ಶಿಕ್ಷೆಗೆ ಒಳಗಾದವನು. 2017ರ ಡಿಸೆಂಬರ್‌ನಲ್ಲಿ ಅಣ್ಣನ ಪತ್ನಿ ಲಕ್ಷ್ಮೀಬಾಯಿಯನ್ನು ಕಲ್ಲಿನಿಂದ ಹೊಡೆದು, ತುಳಿದು ಕೊಲೆ ಮಾಡಿದ್ದ. ಗ್ರಾಮಾಂತರ ವೃತ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಗುರುಬಸವರಾಜ್‌ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ನಾಗರಾಜಾಚಾರ್‌ ವಾದಿಸಿದ್ದರು.

ಪ್ರತಿಕ್ರಿಯಿಸಿ (+)