ಸೋಮವಾರ, ಫೆಬ್ರವರಿ 17, 2020
29 °C

ಕುರಿಗಾಹಿಯ ಕೊಲೆ: ಅಪರಾಧಿಗೆ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕುರಿಗಾಹಿಯನ್ನು ಕೊಂದು ಚಿನ್ನಾಭರಣ, ಹಣ ದೋಚಿಕೊಂಡು ಹೋಗಿದ್ದ ಪ್ರಕರಣದಲ್ಲಿ ಅಪರಾಧಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಬುಧವಾರ ಜೀವಾವಧಿ ಶಿಕ್ಷೆ, ₹25 ಸಾವಿರ ದಂಡ ವಿಧಿಸಿದೆ.

ಹರಿಹರ ತಾಲ್ಲೂಕು ಭಾನುವಳ್ಳಿಯ ಹಾಲೇಶ್‌ (30) ಶಿಕ್ಷೆಗೊಳಗಾದ ಅಪರಾಧಿ. 2015ರ ಜುಲೈ 7ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮುದ್ದೆಹಳ್ಳಿ ಗ್ರಾಮದ ಮುದ್ದಣ್ಣ ಎಂಬ ಕುರಿಗಾಹಿ ತನ್ನ ಸಂಗಡಿಗರ ಜತೆಗೆ ಹರಿಹರ ತಾಲ್ಲೂಕಿನ ಲಕ್ಕಶೆಟ್ಟಿಹಳ್ಳಿಯ ಮಲ್ಲಿಕಾರ್ಜುನ ಅವರ ಜಮೀನಿನಲ್ಲಿ ಕುರಿ ಮಂದೆಯನ್ನು ಬಿಟ್ಟಿದ್ದರು. ಮುದ್ದಣ್ಣ ಒಬ್ಬರೇ ಬಿಡಾರದ ಬಳಿ ಇದ್ದಾಗ ಅವರನ್ನು ಹಾಲೇಶ್‌ ಎಂಬಾತ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿ ಉಂಗುರ, ಕೈಚೈನು, ಹಣವನ್ನು ಎತ್ತಿಕೊಂಡು ಹೋಗಿದ್ದ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆಂಗಬಾಲಯ್ಯ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ದಂಡ ವಿಧಿಸಿರುವ ₹25 ಸಾವಿರದಲ್ಲಿ ₹10 ಸಾವಿರವನ್ನು ಮೃತರ ಮಗ ಎಂ. ಬಸೇಗೌಡ ಅವರಿಗೆ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ ವಾದಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು